Advertisement
ಜಿಲ್ಲಾಧಿಕಾರಿ ಡಾ| ಕೆ.ವಿದ್ಯಾಕುಮಾರಿ ಮಾತನಾಡಿ, ಬೆಳಗ್ಗೆ ಎದ್ದು ಪತ್ರಿಕೆ ನೋಡುವಾಗ ಅದರ ಹಿನ್ನೆಲೆಯಲ್ಲಿ ಕೆಲಸ ಎಷ್ಟಿರುತ್ತೆ ಎಂದು ತಿಳಿಯುತ್ತದೆ. ಇಂದು ಪತ್ರಿಕೆ ಉದ್ಯಮವಾಗಿ ಬೆಳೆದಿದೆ. ಸುದ್ದಿಯನ್ನು ಸ್ಪರ್ಧಾತ್ಮಕವಾಗಿ ನೀಡುವ ಒತ್ತಡ ಇದೆ. ಸಂಗ್ರಹಿಸಿದ ಸುದ್ದಿಯನ್ನು ಮಾಹಿತಿ ರೂಪದಲ್ಲಿ ಹೊರ ಹಾಕುವುದು ಅಗತ್ಯ. ಒತ್ತಡದ ನಡುವೆ ಇಂತಹ ಕ್ರೀಡಾ ಚಟುವಟಿಕೆಗಳಲ್ಲಿಯೂ ಭಾಗವಹಿಸಬೇಕು. ಇದರಿಂದ ನೆಮ್ಮದಿ ಸಿಗಲು ಸಾಧ್ಯವಿದೆ. ದ.ಕ., ಉಡುಪಿ ಜಿಲ್ಲೆಯಲ್ಲಿ ಕ್ರಿಯಾಶೀಲ ಪತ್ರಕರ್ತರ ತಂಡವಿದೆ. ಅನೇಕ ಪತ್ರಿಕೆಗಳೂ ಇವೆ. ಬೇರೆ ಜಿಲ್ಲೆಗೆ ಹೋಲಿಸಿದರೆ ಇಲ್ಲಿಯ ತಂಡ ಕ್ರಿಯಾಶೀಲವಾಗಿದೆ. ನಿರ್ಭೀತವಾದ ಪತ್ರಿಕೋದ್ಯಮ ಇಂದಿನ ಅಗತ್ಯವಾಗಿದೆ ಎಂದರು.
Related Articles
Advertisement
ನಿವೃತ್ತಿ ಹೊಂದಲಿರುವ ಪೌರಾಯುಕ್ತ ರಾಯಪ್ಪ ಅವರನ್ನು ಸಮ್ಮಾನಿಸಲಾಯಿತು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು ಅಧ್ಯಕ್ಷತೆ ವಹಿಸಿದ್ದರು. ಪದಾಧಿಕಾರಿಗಳಾದ ಕಿರಣ್ ಮಂಜನಬೈಲು, ಅರುಣ್ ಕುಮಾರ್ ಶಿರೂರು, ರಾಜು ಖಾರ್ವಿ ಕೊಡೇರಿ, ಶರೀಫ್ ಉಪಸ್ಥಿತರಿದ್ದರು. ನಝೀರ್ ಪೊಲ್ಯ ಸ್ವಾಗತಿಸಿದರು. ಉಮೇಶ್ ಮಾರ್ಪಳ್ಳಿ ವಂದಿಸಿದರು. ರಾಜೇಶ್ ಕೆ.ಸಿ.ನಿರೂಪಿಸಿದರು.