Advertisement
ಆದರೆ ಪುರಸ್ಕೃತರಿಗೆ ನೀಡಲಾಗುವ ನಗದು ರೂಪದ ಒಂದು ಲಕ್ಷ ರೂ. ಗೌರವಧನ ಒಂದು ತಿಂಗಳಾದರೂ ಇನ್ನೂ ಅವರಿಗೆ ತಲುಪಿಲ್ಲ.
Related Articles
Advertisement
ಇದನ್ನೂ ಓದಿ:ನವೆಂಬರ್ ಜಿಎಸ್‌ಟಿ ಸಂಗ್ರಹ 1.31 ಲಕ್ಷ ಕೋ.ರೂ.
ಪ್ರಶಸ್ತಿ ಪುರಸ್ಕೃತರು ಊರಿಗೆ ಮರಳಿ ಹಲವು ಸಲ ಖಾತೆಯನ್ನು ಪರಿಶೀಲಿಸಿದ್ದಾರೆ. ಆದರೇ ಹಣ ಇನ್ನೂ ಜಮೆಯಾಗಿಲ್ಲ. ಈ ಬಗ್ಗೆ ಇಲಾಖೆಗೆ ಸಂಪರ್ಕಿಸಿ ವಿಚಾರಣೆ ನಡೆಸಿದರೂ ಹಣ ಬಾರದಿರುವುದು ಪ್ರಶಸ್ತಿ ಪುರಸ್ಕೃತರನ್ನು ಅಸಮಾಧಾನಗೊಳಿಸಿದೆ. ಪ್ರಶಸ್ತಿ ಸ್ವೀಕರಿಸಲು ತೆರಳುವ ಸಂದರ್ಭ ಬಹಳಷ್ಟು ಕಾಳಜಿ ವಹಿಸಿದ್ದರು. ಆದರೆ ಇದೀಗ ಗೌರವಧನಕ್ಕಾಗಿ ಅಂಗಲಾಚುವ ಸ್ಥಿತಿ ಬಂದಿದೆ. ಈ ಮೂಲಕ ಪ್ರಶಸ್ತಿ ಪುರಸ್ಕೃತರಿಗೆ ಅವಮಾನ ಮಾಡಲಾಗಿದೆ ಎಂದು ಪ್ರಶಸ್ತಿ ಪುರಸ್ಕೃತರೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸರಕಾರ ಮುಂದಿನ ವರ್ಷದಿಂದ ಗೌರವಧನ 5 ಲಕ್ಷ ರೂ. ನೀಡುವುದಾಗಿ ಮುಖ್ಯಮಂತ್ರಿಗಳು ಘೋಷಿಸಿದ್ದಾರೆ. 1 ಲಕ್ಷ ನೀಡುವುದಕ್ಕೆ ಇಷ್ಟು ವಿಳಂಬವಾಗುತ್ತಿದೆ. ಇನ್ನು 5 ಲಕ್ಷ ರೂ. ಭರವಸೆಯ ಕಥೆ ಏನೋ ಎನ್ನುವ ಸಂದೇಹ ಈಗಲೇ ವ್ಯಕ್ತವಾಗಿದೆ.
ಗೌರವಧನವನ್ನು ಬ್ಯಾಂಕ್ ಖಾತೆಗೆ ಹಾಕುವುದಾಗಿ ಪ್ರಶಸ್ತಿ ಸ್ವೀಕರಿಸುವ ಸಂದರ್ಭ ಹೇಳಿದ್ದರು. ದಾಖಲೆಯನ್ನು ಪಡೆದುಕೊಂಡಿದ್ದರು. ಆದರೆ ಖಾತೆಗೆ ಬಂದಿಲ್ಲ. ಗೌರವಧನಕ್ಕಾಗಿ ಇಷ್ಟೊಂದು ಕಾಯಬೇಕಾಗಿ ಬಂದಿರುವುದು ಸಾಧಕರಾದ ನಮ್ಮ ದುರ್ದೈವವಾಗಿದೆ.-ಜಯಲಕ್ಷ್ಮೀ ಮಂಗಳಮೂರ್ತಿ ರಾಯಚೂರು
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು (ಸಾಹಿತ್ಯ) ಸರಕಾರದಿಂದ ಹಣ ಡೈರೆಕ್ಟರಿಗೆ ಬಿಡುಗಡೆಯಾಗುತ್ತದೆ. ಆ ಹಣ ಖಜಾನೆ -ಟು ಮುಖಾಂತರ ಪಾವತಿ ಆಗಲಿದ್ದು ನೇರವಾಗಿ ಖಾತೆಗೆ ಹೋಗುತ್ತದೆ. ಬಿಲ್ ಟ್ರೆಸರರ್‌ಗೆ ಈಗಾಗಲೇ ಸಲ್ಲಿಸಲಾಗಿದೆ. ಅಲ್ಲಿ ಸ್ವಲ್ಪ ವಿಳಂಬವಾದರೆ ಸಮಸ್ಯೆಯಾಗುತ್ತದೆ. ಈ ಬಗ್ಗೆ ಪರಿಶೀಲಿಸಿ ಸಮಸ್ಯೆ ಬಗೆಹರಿಸುವೆ. ಗೌರವಧನ ಪಾವತಿಗೆ ತಡವಾಗಿರುವುದು ನಿಜ. ಇನ್ನೆರಡು ದಿನಗಳಲ್ಲಿ ಪಾವತಿಗೆ ಕ್ರಮ ವಹಿಸುವೆ.
– ಡಾ| ಎನ್. ಮಂಜುಳಾ ( ಭಾ.ಆ.ಸೇ.)
ಸರಕಾರದ ಮುಖ್ಯ ಕಾರ್ಯದರ್ಶಿಗಳು
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು -ಬಾಲಕೃಷ್ಣ ಭೀಮಗುಳಿ