Advertisement
ಘಟನೆ ಬಗ್ಗೆ ಮನೆ ಮಾಲಕ ಮುದಾಸಿರ್ ಅವರು “ಉದಯವಾಣಿ’ ಜತೆ ಮಾತನಾಡಿ, “ಬೆಳಗ್ಗಿನಿಂದಲೇ ಭಾರೀ ಮಳೆಯಾಗಿದ್ದು, ಮಧ್ಯಾಹ್ನ 12 ಗಂಟೆಗೆ ಮನೆಯ ಆವರಣ ಗೋಡೆ ಕುಸಿದಿದೆ. ಘಟನೆಯ ಐದು ನಿಮಿಷ ಹಿಂದೆ ನಾನು ಅದೇ ಜಾಗದಲ್ಲಿ ನಿಂತು ನೀರು ಸರಾಗವಾಗಿ ಹರಿಯುವ ವ್ಯವಸ್ಥೆ ಮಾಡುತ್ತಿದ್ದೆ. ಸ್ನಾನಕ್ಕೆ ಹೋಗಿ ಬರುವಷ್ಟರಲ್ಲಿ ದೊಡ್ಡದಾಗಿ ಶಬ್ದವಾಗಿದ್ದು, ಆವರಣ ಗೋಡೆ ಬಿದ್ದಿತ್ತು. ಆ ವೇಳೆ ನಾವಿಬ್ಬರು ಮನೆಯೊಳಗೆ ಇದ್ದೆವು. ಮಕ್ಕಳು ಶಾಲೆಗೆ ಹೋಗಿದ್ದರು. ಆವರಣ ಗೋಡೆ ಕಟ್ಟಿ ಸುಮಾರು ಒಂದು ವರ್ಷ ಆಯಿತು’ ಎಂದು ತಿಳಿಸಿದ್ದಾರೆ.
ಆವರಣ ಗೋಡೆ ಬಿದ್ದಿರುವ ಕಾರಣ ಈಗ ಮನೆಗೂ ಅಪಾಯ ಎದುರಾಗಿದೆ. ಈ ಬಗ್ಗೆ ಪಾಲಿಕೆಗೆ ತಿಳಿಸಿದ್ದು, ಮಳೆ ನಿಲ್ಲದೆ ಏನೂ ಮಾಡಲಾಗುವುದಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ ಎಂದರು. ಸ್ಥಳಕ್ಕೆ ಪಾಲಿಕೆ ಆಯುಕ್ತ ಆನಂದ್, ಮನಪಾ ಸದಸ್ಯೆ ಚಂದ್ರಾವತಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.