ಹುಣಸೂರು: ಈ ಭಾರಿಯ ಬಜೆಟ್‌ನಲ್ಲೂ ರೈತರ ಸಾಲ ಮನ್ನಾಮಾಡದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ರೈತ ವಿರೋಧಿಯಾಗಿದ್ದು, ಮುಂದಿನ ಚುನಾವಣೆಯಲ್ಲಿ ಜನತೆ ತಕ್ಕಪಾಠ ಕಲಿಸುವರೆಂದು ರೈತ ಸಂಘದ ರಾಜಾÂಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.
ತಾಲೂಕು ರೈತ ಸಂಘದ ಘಟಕದ ವತಿಯಿಂದ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ನಡೆಸಿದ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿ ನಂತರ ತಾಲೂಕು ಕಚೇರಿ ಎದುರು ನಡೆದ ಸಭೆಯಲ್ಲಿ ಮಾತನಾಡಿ, ನಾನೊಬ್ಬ ರೈತನ ಮಗನೆಂದು ಹೇಳಿಕೊಂಡು ಅಧಿಕಾರ ಹಿಡಿದ ಸಿದ್ದರಾಮಯ್ಯ ತಮ್ಮ ನಾಲ್ಕು ವರ್ಷಗಳ ಅಧಿಕಾರಾವಧಿಯಲ್ಲಿ ರೈತವಿರೋಧಿ ನೀತಿಯನ್ನೇ ಅನುಸರಿಸಿಕೊಂಡು ಬಂದಿದ್ದು, ರೈತರಿಗೆ ಆತ್ಮಹತ್ಯೆ ಭಾಗ್ಯ ಕಲ್ಪಿಸಿದ್ದೇ ಇವರ ದೊಡ್ಡ ಸಾಧನೆ ಎಂದು ಬಣ್ಣಿಸಿದರು.
ಕಳೆದ ಸಾಲಿನಲ್ಲಿ ಎರಡೂವರೆ ಸಾವಿರಕ್ಕೂ ಅಧಿಕ ರೈತರು ಸಾಲಬಾಧೆ ತಾಳಲಾರದೇ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದು ರಾಜ್ಯದಲ್ಲೇ ಆತ್ಮಹತ್ಯೆಯ ದೊಡ್ಡ ಇತಿಹಾಸ. ರಾಜಾÂದ್ಯಂತ ಬರಗಾಲ ರೈತರನ್ನು ಕಾಡುತ್ತಿದೆ. ಕೂಲಿಗಾಗಿ ರೈತರು ಗುಳೆ ಹೋಗುತ್ತಿದ್ದಾರೆ. ಇನ್ನೊಂದು ವರ್ಷದಲ್ಲಿ ವಿಧಾನಸಭೆಯ ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಇಂತಹ ಸರಕಾರ ಮತ್ತೆ ಬರಬಾರದು ಎಂದರು.
ವಿಧಾನಸಭೆಯಲ್ಲಿ ರೈತರನ್ನು ಪ್ರತಿನಿಧಿ ಸುವ ರೈತಸಂಘದ ಮುಖಂಡರನ್ನು ಆರಿಸಿ ಕಳುಹಿಸಿದಲ್ಲಿ ಮಾತ್ರ ರೈತರ ಮಾತಿಗೆ ಮನ್ನಣೆ ಸಿಗಲಿದೆ. ಈ ನಿಟ್ಟಿನಲ್ಲಿ ರೈತರು ಗಂಭೀರ ಚಿಂತನೆ ನಡೆಸಬೇಕಿದೆ. ಇನ್ನು ರಾಜ್ಯದ ರೈತರ ಸಾಲ ಮನ್ನಾ ಮಾಡಲು ಕೇಂದ್ರದ ಮೇಲೆ ಒತ್ತಡ ಹೇರುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ತಿಳಿಸಿದರು.
ಜಿಲ್ಲಾಧ್ಯಕ್ಷ ಹೊಸೂರು ಕೃಷ್ಣಕುಮಾರ್, ತಾಲೂಕು ಅಧ್ಯಕ್ಷ ಹೆಗ್ಗಂದೂರು ಬೆಟ್ಟೇಗೌಡ, ಚಂದ್ರೇಗೌಡರವರುಗಳು ಮಾತನಾಡಿ ತಾಲೂಕಿನ ಎಲ್ಲಾ ಕೆರೆಕಟ್ಟೆಗಳಿಗೆ ನೀರು ತುಂಬಿಸುವ ಕೆಲಸವಾಗಬೇಕೆಂದು ಆಗ್ರಹಿಸಿದರು. ಮಹಿಳಾಧ್ಯಕ್ಷೆ ನಿಂಗಮ್ಮ, ರಾಜೇಗೌಡ, ಬಸವೇಗೌಡ, ಗಣೇಶ್, ಮಾದೇಗೌಡ, ದೊಡ್ಡಹನುಮೇಗೌಡ, ಸತೀಶ್ ಇತರರಿದ್ದರು. ತಹಸೀಲ್ದಾರ್ ಎಸ್.ಪಿ.ಮೋಹನ್‌ರಿಗೆ ಮನವಿ ಸಲ್ಲಿಸಿದರು.