Advertisement
ಸುದ್ದಿಗೋಷ್ಠಿಯಲ್ಲಿ ಕಣಜ ಅಂತರ್ಜಾಲದ “ಇ-ಲೋಕ’ ವಿಭಾಗ ಲೋಕಾರ್ಪಣೆ ಮಾಡಿ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಕೆ.ಎ.ದಯಾನಂದ, ವಿದ್ಯಾರ್ಥಿಗಳು, ಶಿಕ್ಷಕರು ಸೇರಿ ಪ್ರತಿಯೊಬ್ಬ ಜನಸಾಮಾನ್ಯರಿಗೂ ಅಂತಾ ರಾಷ್ಟ್ರೀಯ ಮಟ್ಟದ ಜ್ಞಾನ ಸಿಗಬೇಕು ಎನ್ನುವ ಉದ್ದೇಶದಿಂದ ಕಣಜ ಅಂತರ್ಜಾಲ ತಾಣದಲ್ಲಿ ವಿವಿಧ ನೂತನ ಮಾಹಿತಿಗಳನ್ನು ಅಪ್‌ಲೋಡ್ ಮಾಡಲಾಗುತ್ತಿದೆ ಎಂದರು.
Related Articles
Advertisement
ಇ-ಜಗ: ಜಗತ್ತಿನ 186 ರಾಷ್ಟ್ರಗಳ ಕೃಷಿ, ಉದ್ಯಮ, ಜನಜೀವನ, ನದಿ, ಪ್ರಮುಖ ಘಟನೆಗಳು, ರಾಷ್ಟ್ರನಾಯಕ ಮಾಹಿತಿ, ಅಲ್ಲಿನ ಸಂಸ್ಕೃತಿ, ರಾಜಕೀಯ, ಅರ್ಥವ್ಯವಸ್ಥೆ ಹೀಗೆ ಪ್ರತಿಯೊಂದು ಮಾಹಿತಿಯೂ ಇ-ಜಗದಲ್ಲಿ ದಾಖಲು ಮಾಡಲಾಗುತ್ತಿದೆ.
ಲಕ್ಷಾಂತರ ಜನರಿಂದ ಮೆಚ್ಚುಗೆ ಪ್ರಸ್ತುತ ಕಣಜದಲ್ಲಿ 532 ಪುಸ್ತಕಗಳ ಪಿಡಿಎಫ್ ಫೈಲ್‌ಗಳನ್ನು ಹಾಕಲಾಗಿದೆ. ಪ್ರಸ್ತುತ ಇ-ಪುಸ್ತಕದಲ್ಲಿ 52 ಕೃತಿಗಳ ಇ-ಪಬ್ ಮಾಡಿದ್ದು, ಸರ್ಚಿಂಗ್ ಮೂಡ್‌ನಲ್ಲಿ ಇಡಲಾಗಿದೆ. ಇದೇ ಪುಸ್ತಕಗಳು ಟೆಕ್ಸ್ಟ್ ಫಾರ್ಮೂಲದಲ್ಲಿಯೂ ಲಭ್ಯವಾಗಲಿವೆ ಎಂದು ದಯಾನಂದ ತಿಳಿಸಿದರು. ಕಣಜ ಅಂತರ್ಜಾಲಕ್ಕೆ ಜಗತ್ತಿನಾದ್ಯಂತ ಲಕ್ಷಾಂತರ ಮಂದಿ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕನ್ನಡದಲ್ಲಿಯೇ ಜಗತ್ತಿನ ಅನೇಕ ವಿಷಯಗಳನ್ನು ಕನ್ನಡಿಗರಿಗೆ ಪರಿಚಯಿಸುತ್ತಿರುವ ಮೊದಲ ಅಂತರ್ಜಾಲ ತಾಣ ಇದಾಗಿದೆ. ಶೈಕ್ಷಣಿಕವಾಗಿ ಜ್ಞಾನಾರ್ಜನೆ ಉದ್ದೇಶದಿಂದ ಪ್ರಾರಂಭಿಸಲಾಗಿರುವ ಕಣಜವನ್ನು ವಿಶ್ವಕೋಶವೆಂದರೆ ತಪ್ಪಾಗುವುದಿಲ್ಲ ಎಂದು ಹೇಳಿದರು.