Advertisement

ವಿಭಾಗ ಮಟ್ಟದ ಕಾಲೇಜು ನಾಟಕ ಸ್ಪರ್ಧೆಗೆ ಚಾಲನೆ

01:21 PM Feb 14, 2017 | Team Udayavani |

ಧಾರವಾಡ: ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಮತ್ತು ಧಾರವಾಡ ರಂಗಾಯಣ ಆಯೋಜಿಸಿರುವ 6 ದಿನಗಳ ವಿಭಾಗ ಮಟ್ಟದ ಕಾಲೇಜು ನಾಟಕ ಸ್ಪರ್ಧೆಗೆ ನಗರದ ರಂಗಾಯಣದ ಪಂ| ರಾಜಗುರು ಬಯಲು ರಂಗಮಂದಿರದಲ್ಲಿ ಸೋಮವಾರ ಚಾಲನೆ ದೊರೆಯಿತು. 

Advertisement

ಚಾಲನೆ ನೀಡಿದ ರಂಗ ನಿರ್ದೇಶಕ ನಟರಾಜ  ಹೊನ್ನವಳ್ಳಿ ಮಾತನಾಡಿ, ಉತ್ತಮ ನಾಟಕಗಳ ಪ್ರದರ್ಶನಗಳಿಗೆ ಉತ್ತಮವಾದ ಸುಸಜ್ಜಿತ ರಂಗಮಂದಿರದ ಅವಶ್ಯಕತೆ ಇದೆ. ನಾಟಕಗಳ ಆಯ್ಕೆಯ ಬದಲಾವಣೆಯ ಜೊತೆಗೆ  ನೋಡುಗರ ಮನಸ್ಥಿತಿಯೂ ಬದಲಾಗಬೇಕು ಎಂದರು. 

ಕವಿಸಂನ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಮಾತನಾಡಿ, ಕಾಲೇಜಿನ ವಿದ್ಯಾರ್ಥಿಗಳಿಗೆ ನಾಟಕವು ಕೇವಲ  ಸ್ಪರ್ಧೆಯ ವಿಷಯವಾಗಿರದೇ ಯುವ ಪೀಳಿಗೆಯ ಸರ್ವತೋಮುಖ ಅಭಿವೃದ್ಧಿಗೆ ಕಾರಣವಾಗಬೇಕು ಎಂದರು. ರಂಗಾಯಣದ ನಿರ್ದೇಶಕ ಡಾ| ಪ್ರಕಾಶ ಗರುಡ ಅಧ್ಯಕ್ಷತೆ ವಹಿಸಿದ್ದರು. 

ಸ್ಪರ್ಧೆಯ ನಿರ್ಣಾಯಕರಾದ ರಾಮಕೃಷ್ಣ ಮರಾಠೆ, ಪುರುಷೋತ್ತಮ ತಲವಾಟ, ಎಸ್‌. ಮಾಲತಿ ಇದ್ದರು. ರಂಗಾಯಣದ ಆಡಳಿತಾಧಿಕಾರಿ ಬಸವರಾಜ ಹೂಗಾರ್‌ ಸ್ವಾಗತಿಸಿದರು. ಹಿಪ್ಪರಗಿ ಸಿದ್ದರಾಮ ನಿರೂಪಿಸಿ, ವಂದಿಸಿದರು. 

ಧಾರವಾಡ ರಂಗಾಯಣದ ವ್ಯಾಪ್ತಿಯಲ್ಲಿ ಬರುವ ಏಳು ಜಿಲ್ಲೆಗಳಾದ ಧಾರವಾಡ, ಬೆಳಗಾವಿ, ಉತ್ತರ ಕನ್ನಡ, ಬಾಗಲಕೋಟೆ, ವಿಜಯಪುರ, ಗದಗ ಮತ್ತು ಹಾವೇರಿ ಜಿಲ್ಲೆಗಳ ಕಾಲೇಜು ವಿದ್ಯಾರ್ಥಿಗಳಿಂದ ಸೋಮವಾರದಿಂದ ಫೆ.18 ರವರೆಗೆ ಪ್ರತಿದಿನ ಸಂಜೆ 6:30ಗಂಟೆಗೆ ನಾಟಕ ಸ್ಪರ್ಧೆ ನಡೆಯಲಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next