Advertisement

Ayurvedic clinic; ಪಾರ್ಶ್ವವಾಯು ಪುನರ್ವಸತಿ ವಿಭಾಗ ಇಂದು ಉದ್ಘಾಟನೆ

12:17 AM Sep 05, 2024 | Team Udayavani |

ಕುಂದಾಪುರ: ಆಲೂರಿನ ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯದಲ್ಲಿ ನೂತನವಾಗಿ ನಿರ್ಮಿಸಿರುವ ಪಾರ್ಶ್ವವಾಯು ಪುನರ್ವಸತಿ ವಿಭಾಗ ಹಾಗೂ “ಲಾವಣ್ಯ’ ಕಾಸ್ಮೆಟಿಕ್‌ ವಿಭಾಗದ ಉದ್ಘಾಟನಾ ಸಮಾರಂಭ ಸೆ. 5ರಂದು ಬೆಳಗ್ಗೆ 9.30ಕ್ಕೆ ನಡೆಯಲಿದೆ.

Advertisement

ಪಾರ್ಶ್ವವಾಯು ಪುನರ್ವಸತಿ ವಿಭಾಗವನ್ನು ಸಂಸದ ಬಿ.ವೈ. ರಾಘವೇಂದ್ರ ಉದ್ಘಾಟಿಸಲಿದ್ದು, “ಲಾವಣ್ಯ’ ಕಾಸ್ಮೆಟಿಕ್‌ ವಿಭಾಗವನ್ನು ಬೈಂದೂರು ಶಾಸಕ ಗುರುರಾಜ್‌ ಗಂಟಿಹೊಳೆ ಉದ್ಘಾಟಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಬಿ.ಎಂ. ಸುಕುಮಾರ್‌ ಶೆಟ್ಟಿ, ಕುಂದಾಪುರದ ಉದ್ಯಮಿ ಅಭಿನಂದನ್‌ ಶೆಟ್ಟಿ, ಉಡುಪಿ ಎಸ್‌ಡಿಎಂಸಿ ಆಯುರ್ವೇದ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ| ನಾಗರಾಜ್‌ ಪೂಜಾರಿ, ಆಲೂರು ಗ್ರಾ.ಪಂ. ಅಧ್ಯಕ್ಷ ರಾಜೇಶ್‌ ದೇವಾಡಿಗ ಪಾಲ್ಗೊಳ್ಳಲಿದ್ದಾರೆ.

15 ವರ್ಷಗಳಿಂದ ಉತ್ತಮ ಗುಣಮಟ್ಟದ ಆಯುರ್ವೇದ ಚಿಕಿತ್ಸೆಯ ಮೂಲಕ ಕುಂದಾಪುರ ಭಾಗದ ಮನೆಮಾತಾಗಿರುವ ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯದಲ್ಲಿ ಪ್ರಸ್ತುತ ಆಯುರ್ವೇದ ಪದ್ಧತಿ ಚಿಕಿತ್ಸೆಯೊಂದಿಗೆ ನ್ಯಾಚುರೋಪತಿ ಚಿಕಿತ್ಸೆ ನೀಡಲಾಗುತ್ತಿದೆ. ಇದರೊಂದಿಗೆ ಈಗ ಹೊಸದಾಗಿ ಪಾರ್ಶ್ವವಾಯು ಮತ್ತು ಕಾಸ್ಮೆಟಿಕ್‌ ಸಂಬಂಧಿ ಚಿಕಿತ್ಸೆಗಳನ್ನು ನೀಡುವ ಉದ್ದೇಶವನ್ನು ಹೊಂದಲಾಗಿದೆ. ನೂತನವಾಗಿ ನಿರ್ಮಿಸಲಾದ ಪಾರ್ಶ್ವವಾಯು ಪುನರ್ವಸತಿ ವಿಭಾಗ ಮತ್ತು ಕಾಸೆ¾ಟಿಕ್‌ ವಿಭಾಗಗಳನ್ನು ಚಿಕಿತ್ಸಾಲಯದಲ್ಲಿ ಅಳವಡಿಸಿಕೊಳ್ಳಲಾಗುತ್ತಿದೆ.

ಏನೆಲ್ಲ ಚಿಕಿತ್ಸೆಗಳಿವೆ?
ಚರ್ಮ ಕಾಯಿಲೆ, ಮಧುಮೇಹ ಡಯಾಬಿಟೀಸ್‌, ತೂಕ ಹೆಚ್ಚಾಗುವುದು, ತಲೆನೋವು, ಪಾರ್ಶ್ವವಾಯು, ಗ್ಯಾಸ್ಟ್ರೈಟಿಸ್‌, ನಿದ್ರಾಹೀನತೆ, ಬೆನ್ನುನೋವು, ಕುತ್ತಿಗೆ ನೋವು, ಮಂಡಿನೋವು, ಮಾನಸಿಕ ಒತ್ತಡ, ಖನ್ನತೆಗೆ ಒಳಗಾದವರಿಗೆ ಒಂದು ವಾರ ವಿಶೇಷ ಆರೈಕೆಯೊಂದಿಗೆ ಚಿಕಿತ್ಸೆ (ಸ್ಟ್ರೆಸ್‌ಮ್ಯಾನೇಜ್‌ಮೆಂಟ್‌) ನೀಡಲಾಗುತ್ತಿದೆ. ಮಾನಸಿಕ ನೆಮ್ಮದಿ, ಮನಸ್ಸಂತೋಷ, ಆರೋಗ್ಯ ರಕ್ಷಣೆಗೆ ಬೇಕಾದ ಸೂಕ್ತ ಸಲಹೆ-ಸೂಚನೆಗಳೊಂದಿಗೆ ಮಾರ್ಗದರ್ಶನವೂ ಇಲ್ಲಿ ದೊರಕುತ್ತಿದೆ ಎಂದು ಚಿಕಿತ್ಸಾಲಯದ ವ್ಯವಸ್ಥಾಪಕ ನಿರ್ದೇಶಕ ಡಾ| ರಾಜೇಶ್‌ ಬಾಯರಿ ತಿಳಿಸಿದ್ದಾರೆ.

Advertisement

ಏನಿದು “ಪಾರ್ಶ್ವವಾಯು – ಕಾಸ್ಮೆಟಿಕ್‌’ ವಿಭಾಗ ?
ಆರೇಳು ವರ್ಷಗಳಿಂದ ಪಾರ್ಶ್ವವಾಯುವಿಗೆ ಸಂಬಂಧಪಟ್ಟಂತೆ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಪ್ರತ್ಯೇಕ ವಿಭಾಗವನ್ನು ತೆರೆದಿರಲಿಲ್ಲ. ಪರಿಪೂರ್ಣ ಚಿಕಿತ್ಸೆ ನೀಡುವ ಉದ್ದೇಶದಿಂದ ಪಂಚಕರ್ಮ ಚಿಕಿತ್ಸೆ, ನ್ಯಾಚುರೋಪತಿಯ ಆ್ಯಕ್ಯುಪಂಕ್ಚರ್‌ ಚಿಕಿತ್ಸೆ ಹಾಗೂ ಫಿಸಿಯೋ ಥೆರಪಿ ಚಿಕಿತ್ಸೆ ಇಲ್ಲಿರಲಿದೆ. ಇದರಿಂದ ಬೇಗ ಗುಣಮುಖರಾಗಲು ಸಾಧ್ಯ. ಮಾನಸಿಕ ಸದೃಢತೆ ಜತೆಗೆ ಬಸ್ತಿ ಚಿಕಿತ್ಸೆ, ಲೇಪ ಚಿಕಿತ್ಸೆ, ಧಾರಾ ಚಿಕಿತ್ಸೆ, ಷಷ್ಠಿಕಾಶಾಲಿ ಚಿಕಿತ್ಸೆಗಳನ್ನು ನೀಡಲಾಗುತ್ತದೆ. ತಲೆಕೂದಲು ಉದುರುವುದು, ತಲೆಹೊಟ್ಟು, ಮುಖದಲ್ಲಿ ಪದೇಪದೆ ಮೊಡವೆ ಮೂಡುವುದನ್ನು ತಡೆಯಲು ಆರೇಳು ವರ್ಷಗಳಿಂದ ಇಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದಕ್ಕಾಗಿಯೇ ಈಗ ವ್ಯವಸ್ಥಿತವಾಗಿ ಕಾಸ್ಮೆಟಿಕ್‌ ವಿಭಾಗವನ್ನು ತೆರೆಯಲಾಗಿದೆ. ಆ್ಯಕ್ಯುಪಂಕ್ಚರ್‌, ಮಡ್‌ ಥೆರಪಿ, ಮಡ್‌ ಬಾತ್‌, ಹಿಪ್‌ ಬಾತ್‌, ಸ್ಪೈನಲ್‌ ಬಾತ್‌ನಂತಹ ಚಿಕಿತ್ಸೆಗಳು ಲಭ್ಯವಿವೆ.

Advertisement

Udayavani is now on Telegram. Click here to join our channel and stay updated with the latest news.

Next