ತಮಿಳುನಾಡು: ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಟ್ರೈನಿ ವೈದ್ಯೆಯೊಬ್ಬಳು ಆಸ್ಪತ್ರೆ ಕಟ್ಟಡದ ಐದನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಭಾನುವಾರ ತಡರಾತ್ರಿ ನಡೆದಿದೆ.
ಕಾಂಚಿಪುರಂ ಜಿಲ್ಲೆಯಲ್ಲಿರುವ ಮೀನಾಕ್ಷಿ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ಈ ಘಟನೆ ನಡೆದಿದ್ದು, ಮೃತ ವೈದ್ಯೆಯನ್ನು ತಿರುನಲ್ವೇಲಿ ಮೂಲದ ಶೆರ್ಲಿನ್ (23) ಎನ್ನಲಾಗಿದೆ.
ಶೆರ್ಲಿನ್ ಮೀನಾಕ್ಷಿ ವೈದ್ಯಕೀಯ ಕಾಲೇಜಿನಲ್ಲಿ ಟ್ರೈನಿ ವೈದ್ಯೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು ಎನ್ನಲಾಗಿದ್ದು. ಭಾನುವಾರ ರಾತ್ರಿ ಮಲಗದೆ ಐದನೇ ಮಹಡಿಯ ಕಿಟಕಿಯ ಬಳಿ ಕುಳಿತಿರುವುದನ್ನು ಇತರ ಸಹದ್ಯೋಗಿಗಳು ಗಮನಿಸಿದ್ದಾರೆ, ಅಲ್ಲದೆ ಆಕೆ ಏನಾದರು ಅನಾಹುತ ಮಾಡಿಕೊಳ್ಳುತ್ತಾಳೆ ಎಂಬ ಮುಂದಾಲೋಚನೆಯಲ್ಲಿ ಆಕೆಯ ರಕ್ಷಣೆಗೆ ಮುಂದಾಗಿದ್ದಾರೆ ಆದರೆ ಇದನ್ನು ಗಮನಿಸಿದ ಆಕೆ ಐದನೇ ಮಹಡಿಯಿಂದ ಜಿಗಿದಿದ್ದಾಳೆ ಗಂಭೀರ ಗಾಯಗೊಂಡ ಆಕೆಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಪರಿಶೀಲಿಸಿದ ವೇಳೆ ಆಕೆ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.
ಈ ಕುರಿತು ಪ್ರಕರಣದ ದಾಖಲಿಸಿಕೊಂಡ ಪೊಲೀಸರು ಶೆರ್ಲಿನ್ ಅವರ ಸಹೋದ್ಯೋಗಿಗಳ ಬಳಿ ಮಾಹಿತಿ ಕಲೆ ಹಾಕಿದ್ದು ವೈಯಕ್ತಿಕ ಕಾರಣಗಳಿಂದ ಶೆರ್ಲಿನ್ ಖಿನ್ನತೆಗೆ ಒಳಗಾಗಿದ್ದರು ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಡಲಾಗಿದ್ದು ವರದಿ ಬಂದ ಬಳಿಕ ಹೆಚ್ಚಿನ ಮಾಹಿತಿ ಹೊರಬರಲಿದೆ ಎಂದು ಹೇಳಲಾಗಿದೆ.
ಇತ್ತೀಚಿಗೆ ಕೋಲ್ಕತ್ತಾದಲ್ಲಿ ಟ್ರೈನಿ ವೈದ್ಯೆ ಅತ್ಯಾಚಾರ ಮತ್ತು ಹತ್ಯೆ ಪ್ರಕರಣ ನಡೆದ ಬೆನ್ನಲ್ಲೇ ತಮಿಳುನಾಡಿನಲ್ಲಿ ಟ್ರೈನಿ ವೈದ್ಯೆ ಆತ್ಮಹತ್ಯೆ ಮಾಡಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ.
ಇದನ್ನೂ ಓದಿ: Uttar Pradesh: ನರಭಕ್ಷಕ ತೋಳಗಳ ದಾಳಿ-ಹಲವು ಮಕ್ಕಳು ಬಲಿ, ಮಹಿಳೆಗೆ ಗಾಯ