Advertisement

Kasaragod ವ್ಯಕ್ತಿಯ ನಿಗೂಢ ಸಾವು: ಗುಪ್ತಚರ ವಿಭಾಗದಿಂದ ತನಿಖೆ

11:07 PM Aug 30, 2024 | Team Udayavani |

ಕಾಸರಗೋಡು: ಬೇಕಲ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ವಾಸವಿದ್ದ ಮಾಜಿ ಕೊಲ್ಲಿ ಉದ್ಯೋಗಿ 52ರ ಹರೆಯದ ವ್ಯಕ್ತಿಯ ನಿಗೂಢ ಸಾವಿನ ಬಗ್ಗೆ ಪೊಲೀಸ್‌ ಗುಪ್ತಚರ ವಿಭಾಗ ತನಿಖೆ ಆರಂಭಿಸಿದೆ.

Advertisement

ಮೃತಪಟ್ಟ ವ್ಯಕ್ತಿಯ 17ರ ಹರೆಯದ ಪುತ್ರ ಹಾಗೂ ಎಂಟನೇ ತರಗತಿಯ ವಿದ್ಯಾರ್ಥಿನಿ ಪರಸ್ಪರ ಪ್ರೀತಿಸುತ್ತಿದ್ದರೆನ್ನಲಾಗಿದೆ. ಈ ವಿಚಾರವಾಗಿ ತಂದೆ-ಮಗನ ಮಧ್ಯೆ ಮಾತಿನ ಚಕಮಕಿ ನಡೆದಿತ್ತೆನ್ನಲಾಗಿದೆ. ಅದೇ ದಿನ ಆತ ಸಾವಿಗೀಡಾಗಿದ್ದರು.

ಮೃತದೇಹವನ್ನು ಸ್ನಾನ ಮಾಡಿಸುತ್ತಿದ್ದಾಗ ಹೊಟ್ಟೆಯ ಭಾಗದಲ್ಲಿ ಗಾಯಗಳಿರುವುದನ್ನು ಅಲ್ಲಿದ್ದವರು ಗಮನಿಸಿ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.