Advertisement

ನಾಮಪತ್ರ ಸಲ್ಲಿಕೆಗೆ ತೆರೆ:ನಿಯಮಾವಳಿ ಕಣ್ಮರೆ

04:27 PM Apr 16, 2021 | Team Udayavani |

ರಾಮನಗರ: ಇದೇ ಏಪ್ರಿಲ್‌ 27ರಂದು ನಿಗದಿಯಾಗಿರುವ ರಾಮನಗರ ನಗರಸಭೆಯ ಚುನಾವಣೆಗೆ ನಾಮಪತ್ರ ಸಲ್ಲಿಸಲು ಗುರುವಾರ ಕೊನೆ ದಿನವಾಗಿದ್ದ ಕಾರಣ ನಾಮಪತ್ರ ಸಲ್ಲಿಸುವ ವೇಳೆ ಅಭ್ಯರ್ಥಿಗಳು ಕೋವಿಡ್‌ ನಿಯಮಗಳನೆಲ್ಲ ಗಾಳಿಗೆ ತೂರಿದ್ದರು. ಯುಗಾದಿ ಹಬ್ಬ ಮತ್ತು ಮೂರು ಪಕ್ಷಗಳಲ್ಲಿ ಅಭ್ಯರ್ಥಿಗಳ ಪಟ್ಟಿ ಸಿದ್ಧವಾಗಲು ವಿಳಂಬವಾಗಿತ್ತು. ಹೀಗಾಗಿ ಕೊನೆದಿನ ಉಮೇದುವಾರಿಕೆ ಸಲ್ಲಿಸಲು ನೂಕು ನುಗ್ಗಲು ಉಂಟಾಗಿತ್ತು.

Advertisement

ಸಾಮಾಜಿಕ ಅಂತರ ಕಣ್ಮರೆ: ನಾಮ ಪತ್ರ ಸಲ್ಲಿಸಲು ಶಕ್ತಿ ಪ್ರದರ್ಶನ ನಡೆಸಿದ ಅಭ್ಯರ್ಥಿಗಳು ತಮ್ಮ ಬೆಂಬಲಿಗರೊಂದಿಗೆ ಆಗಮಿಸಿದ್ದರಿಂದ ನಗರಸಭೆಯ ರಸ್ತೆ ಜನರಿಂದ ತುಂಬಿ ಹೋಗಿತ್ತು. ಜನರ ನಿಯಂತ್ರಸು ವಲ್ಲಿ ಪೊಲೀಸರು ಹೈರಾಣಾದರು. ದೈಹಿಕ ಅಂತರ ಎಂಬ ನಿಯಮ ಇಲ್ಲಿ ಸಂಪೂರ್ಣ ವಿಫ‌ಲವಾಗಿತ್ತು. ಮಾಸ್ಕ್ ಧರಿಸದ ಕಾರ್ಯಕರ್ತರು, ನಾಮ್‌ಕಾವಾಸ್ಥೆ ಮಾಸ್ಕ್ ಧರಿಸದವರ ಸಂಖ್ಯೆಯೇ ಹೆಚ್ಚಾಗಿತ್ತು. ಕೋವಿಡ್‌ ನಿಯಮಗಳನ್ನು ಕಠಿಣವಾಗಿ ಜಾರಿ ಮಾಡುತ್ತೇವೆ ಎಂದು ಬೊಬ್ಬಿರಿದಿದ್ದ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ನಾಪತ್ತೆ ಯಾಗಿದ್ದರು.

ದಂಡ ವಿಧಿಸುವ ಅಧಿಕಾರವಿದ್ದರೂ ಪೊಲೀಸರು ಕಂಡು ಕಾಣದಂತೆ ನಟಿಸಿದರು. ಚುನಾವಣೆಗಳೆಂದರೆ ಹೀಗೇ, ನಿಯಮಗಳ ಪಾಲನೆ ಕಷ್ಟ, ಏಪ್ರಿಲ್‌ 27ರ ವರೆಗೆ ಪರಿಸ್ಥಿತಿ ನಿಯಂತ್ರಣಕ್ಕೆ ಬರುವುದಿಲ್ಲ, ವಿಧಾನಸ ಭೆಗೆ ನಡೆಯುತ್ತಿರುವ ಉಪಚುನಾವಣೆಗಳಲ್ಲೂ ಇದೇ ಪರಿಸ್ಥಿತಿ, ಕೋವಿಡ್‌ ನಿಯಮಗಳು ಚುನಾವಣೆಗೆ ಅನ್ವಯಿಸುವುದಿಲ್ಲ ಎಂದು ರಾಜಕೀಯ ಮುಖಂಡರೇ ಹೇಳಿದ್ದಾರೆ. ಹೀಗಾಗಿ ಈ ಚುನಾವಣೆ ಹೊರತೇನಲ್ಲ ಎಂದು ಕೆಲವು ಅಭ್ಯರ್ಥಿಗಳು ಪ್ರತಿಕ್ರಿಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next