Advertisement

ಅಭಿವೃದ್ಧಿ ವಿಚಾರ ಮುಂದಿಟ್ಟು ಚುನಾವಣೆ ಎದುರಿಸಿ

12:46 PM Apr 10, 2018 | Team Udayavani |

ತಿ.ನರಸೀಪುರ: ಅಪ್ಪ, ಮಗ ಜನರ ಕೈಗೆ ಸಿಗುವುದಿಲ್ಲ, ಮೊಬೈಲ್‌ ಕರೆ ಮಾಡಿದರೂ ಸ್ವೀಕರಿಸಲ್ಲ, ಅವರನ್ನೇ ಮತ್ತೆ ಯಾಕೆ ಗೆಲ್ಲುಸುತ್ತೀರಿ ಅನ್ನುವುದನ್ನು ಬಿಟ್ಟು, ಅಭಿವೃದ್ಧಿ ಆಧಾರ ಮೇಲೆ ಚುನಾವಣೆ ಎದುರಿಸಿ ಎಂದು ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಬಿಜೆಪಿ ಹಾಗೂ ಜೆಡಿಎಸ್‌ ಅಭ್ಯರ್ಥಿಗಳಿಗೆ ಸಲಹೆ ನೀಡಿದರು.

Advertisement

ತಾಲೂಕಿನ ಮೂಗೂರಿನಲ್ಲಿ ಜಿಪಂ ಕ್ಷೇತ್ರದ ಕಾಂಗ್ರೆಸ್‌ ಕಾರ್ಯಕರ್ತರು ಹಾಗೂ ಮುಖಂಡರೊಂದಿಗೆ ಚುನಾವಣೆ ಪೂರ್ವಭಾವಿ ಸಭೆ ನಡೆಸಿ ಮಾತನಾಡಿ, ಚುನಾವಣೆ ಘೋಷಣೆಯಾಗುವ ಪೂರ್ವದಿಂದಲೂ ಇದೊಂದೇ ವಿಚಾರವನ್ನೇ ಮುಖ್ಯವಾಗಿಟ್ಟುಕೊಂಡು ಹಳ್ಳಿಗಳಿಗೆ ನಗರ ಪ್ರದೇಶಗಳ ಸ್ವರೂಪವನ್ನು ನೀಡಿದ ತಮ್ಮ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ. ಅದಕ್ಕೂ ಮೊದಲು ಅಭಿವೃದ್ಧಿಯಲ್ಲಿ ರಾಜಕೀಯ ಬದ್ಧತೆಯನ್ನು ಮೊದಲು ಪ್ರತಿಪಕ್ಷಗಳ ಅಭ್ಯರ್ಥಿಗಳು ಪ್ರದರ್ಶಿಸಲಿ ಎಂದು ಸವಾಲು ಹಾಕಿದರು.

ಚುನಾವಣೆ ವೆಚ್ಚಕ್ಕೆ ಹಣ ಹಾಗೂ ಓಡಾಡಲಿಕ್ಕೆ ಕಾರನ್ನು ಕೊಟ್ಟು ರಾಜಕೀಯವಾಗಿ ಕೈ ಹಿಡಿದ ಮೂಗೂರು ಜನರನ್ನು ಬದುಕಿರುವವರೆಗೂ ಮರೆಯಲು ಸಾಧ್ಯವಿಲ್ಲ. ರಾಜ್ಯದ ರಾಜಕಾರಣದ ಒತ್ತಡದ ನಡುವೆಯೂ ಕ್ಷೇತ್ರದ ಕಾರ್ಯಕರ್ತರು ಮತ್ತು ಜನರ ಕಷ್ಟ ಸುಖಗಳ ಅಹವಾಲು ಆಲಿಸಿದ್ದೇನೆ. ಮುಖಂಡರ ಸಲಹೆ ಪಡೆದುಕೊಂಡು ಶಾಶ್ವತ ಅಭಿವೃದ್ಧಿ ಕೆಲಸ ಮಾಡಿದ್ದೇವೆ.

ಯಾರ ಅಪೇಕ್ಷೆಯಿಲ್ಲದಿದ್ದರೂ ಕೆಲವು ಯೋಜನೆಗಳನ್ನು ಜನರಿಗಾಗಿ ತಂದಿದ್ದೇವೆ. ಮೂಗೂರು ಸೇರಿ ಹೋಬಳಿ ಪ್ರತಿಯೊಂದು ಗ್ರಾಮವನ್ನು ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಿರುವುದರಿಂದ ಜನರು ಚಿಂತನೆ ಮಾಡಿ ಮತವನ್ನು ನೀಡಬೇಕೆಂದು ಮಹದೇವಪ್ಪ ಮನವಿ ಮಾಡಿದರು.

ಹಿರಿಯ ಮುಖಂಡ ಹಾಗೂ ತಾಪಂ ಮಾಜಿ ಸದಸ್ಯ ಕೆ.ಜಿ.ವೀರಣ್ಣ ಮಾತನಾಡಿ, ಅಭಿವೃದ್ಧಿ ವಿಚಾರದಲ್ಲಿ ಸಚಿವರಿಗೆ ವಿಪಕ್ಷಗಳ ಅಭ್ಯರ್ಥಿಗಳು ಸರಿಸಾಟಿಯಾಗಲಾರರು. ಮುಂದಿನ ಕಾಂಗ್ರೆಸ್‌ ಸರ್ಕಾರದಲ್ಲಿ ಮಹದೇವಪ್ಪ ಅವರು ಮುಖ್ಯಮಂತ್ರಿಯಾಗುವ ಅವಕಾಶ ಇರುವುದರಿಂದ ಈ ಬಾರಿಯ ಚುನಾವಣೆಯಲ್ಲಿ ನರಸೀಪುರದಲ್ಲಿಯೇ ಸ್ಪರ್ಧಿಸಬೇಕು.

Advertisement

ರಾಜಕೀಯದಲ್ಲಿ ಕಾರ್ಯಕರ್ತ ಹಾಗೂ ಹೋರಾಟಗಾರರಾಗಿ ಅಧಿಕಾರ ಪಡೆದ ಅನುಭವ ಇರುವುದರಿಂದ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರನ್ನು ಕಡೆಗಣಿಸಿರುವ ಲೋಪದೋಷಗಳನ್ನು ಸರಿಪಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು. ಅಂಬೇಡ್ಕರ್‌ ವಸತಿ ಯೋಜನೆ ಜಾಗೃತ ಸಮಿತಿ ಅಧ್ಯಕ್ಷ ಸುನೀಲ್‌ ಬೋಸ್‌ ಮಾತನಾಡಿದರು.

ಜಿಪಂ ಸದಸ್ಯ ಹಾಗೂ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಂಜುನಾಥನ್‌, ಪಿಕಾರ್ಡ್‌ ಬ್ಯಾಂಕ್‌ ಅಧ್ಯಕ್ಷ ಎಂ.ಎಸ್‌.ಶಿವಮೂರ್ತಿ, ಕಿಯೋನಿಕ್ಸ್‌ ನಿರ್ದೇಶಕ ಕೊತ್ತೇಗಾಲ ಬಸವರಾಜು, ತಾಪಂ ಸದಸ್ಯ ಎಚ್‌.ಎನ್‌.ಉಮೇಶ, ಮಾಜಿ ಸದಸ್ಯ ಕೇತಳ್ಳಿ ಮಹದೇವಪ್ಪ, ಮಂಡಲ ಪಂಚಾಯ್ತಿ ಮಾಜಿ ಪ್ರಧಾನ ಎಚ್‌.ವಿ.ಶೇಷಾದ್ರಿ, ಗ್ರಾಪಂ ಮಾಜಿ ಅಧ್ಯಕ್ಷರಾದ ಅಕ್ಕೂರು ಗುರುಮೂರ್ತಿ,

ರಾಚೇಗೌಡ, ವಾಟಾಳು ನಾಗೇಶ, ಮರಡೀಪುರ ಗೋಪಾಲ್‌, ಗ್ರಾಪಂ ಸದಸ್ಯರಾದ ಎಂ.ಬಿ.ಸಾಗರ್‌, ಕನ್ನಹಳ್ಳಿ ಲಕ್ಷ್ಮಣ, ಹೊಸಹಳ್ಳಿ ಮಾದೇಶ, ಮಾಜಿ ಸದಸ್ಯ ಹೊಸೂರುಹುಂಡಿ ತೊಂಟೇಶ್‌, ಎಪಿಎಂಸಿ ಮಾಜಿ ಸದಸ್ಯ ಮಾವಿನಹಳ್ಳಿ ಪುಟ್ಟಸ್ವಾಮಿ, ಮಾದೇಶ, ಮುಖಂಡರಾದ ಚಂದ್ರಧರ, ಮಾದಾಪುರ ಬಸವರಾಜು, ಲಕ್ಷ್ಮೀನಾರಾಯಣ, ಹದಿನಾರು ಶಿವಕುಮಾರ್‌, ಡಾ.ಕೆ.ಎನ್‌.ಬಸವರಾಜು, ಮಾವಿನಹಳ್ಳಿ ಮನು, ಕೇತಳ್ಳಿ ಮಧು, ಕರೋಹಟ್ಟಿ ನಾಗೇಶ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next