Advertisement

24 ಗ್ರಾಪಂಗಳ 82 ಕೆರೆಗಳ ಅಭಿವೃದ್ದಿಯೇ ಮರೀಚಿಕೆ

08:47 PM Sep 01, 2022 | Team Udayavani |

ಕೊರಟಗೆರೆ: ಗ್ರಾಪಂಯ ಕೆರೆಗಳ ಅಭಿವೃದ್ದಿ ಮತ್ತು ಪುನಶ್ಚೇತಕ್ಕೆ ರಾಜ್ಯ ಸರಕಾರ ಅನುಧಾನ ಲಭ್ಯವಿಲ್ಲ. ನರೇಗಾ ಯೋಜನೆಯಡಿ ಗ್ರಾಪಂಗಳು ಕೆರೆಗಳ ರಕ್ಷಣೆಯೇ ಮಾಡೋದಿಲ್ಲ.. ಮಳೆರಾಯನ ಕೃಪೆಯಿಂದ ಕೆರೆಕಟ್ಟೆಗಳು ಭರ್ತಿಯಾಗಿ ಕೋಡಿಬಿದ್ದಿವೆ. ಜಿಪಂ ಮತ್ತು ಗ್ರಾಪಂಗಳ ನಿರ್ವಹಣೆ ಕೊರತೆಯಿಂದ 82ಕೆರೆಗಳ ಅಭಿವೃದ್ದಿಯೇ ಕಳೆದ 40 ವರ್ಷದಿಂದ ಮರೀಚಿಕೆಯಾಗಿ ನೀರಾವರಿ ಕೆಲಸಕ್ಕೆ ಸಮಸ್ಯೆಯಾಗಿದೆ.

Advertisement

ಕೊರಟಗೆರೆ ತಾಲೂಕಿನ 25 ಗ್ರಾಪಂನ ವ್ಯಾಪ್ತಿಯಲ್ಲಿ ೪೦ಹೇಕ್ಟರ್‌ಗಿಂತ ಕಡಿಮೆ ಅಚ್ಚುಕಟ್ಟು ಪ್ರದೇಶವುಳ್ಳ ೮೨ಕೆರೆಗಳಿವೆ. 82 ಕೆರೆಗಳ ನಿರ್ವಹಣೆ ಮತ್ತು ಅಭಿವೃದ್ದಿಯು ಕಳೆದ ೪೦ವರ್ಷಗಳಿಂದ ಸಂಪೂರ್ಣ ಮರೀಚಿಕೆ ಆಗಿದೆ. ಕೊರಟಗೆರೆ ಜಿಪಂ ಮತ್ತು 24 ಗ್ರಾಪಂಗಳ ನಿರ್ವಹಣೆ ಕೊರತೆಯಿಂದ ನರೇಗಾ ಯೋಜನೆಯಡಿ ಕೆರೆಗಳ ಪುನಶ್ಚೇತನ ಮತ್ತು ಅಭಿವೃದ್ದಿ ಆಗದೇ ೮೨ಕೆರೆಗಳಗೂ ಸಂಕಷ್ಟ ಎದುರಾಗಿದೆ.

ಬಯಲುಸೀಮೆ ಪ್ರದೇಶವಾದ ಕೊರಟಗೆರೆ ಕ್ಷೇತ್ರದಲ್ಲಿ ಕಳೆದ ೨೦ವರ್ಷಗಳ ನಂತರ ಕೆರೆಕಟ್ಟೆಗಳು ತುಂಬಿ ಕೋಡಿಬಿದ್ದಿವೆ. ಕೆರೆಗಳ ಅಭಿವೃದ್ದಿಯಿಲ್ಲದೇ ತೋಬು ಮತ್ತು ಕೋಡಿ ಶಿಥಿಲವಾಗಿ ಕೆರೆಯಲ್ಲಿನ ನೀರು ವ್ಯರ್ಥವಾಗಿ ಹರಿಯುತ್ತೀದೆ. ಕೆರೆಯಿಂದ ವ್ಯರ್ಥವಾಗಿ ಹರಿಯುತ್ತೀರುವ ನೀರನ್ನು ತಡೆಯುವ ಕೆಲಸವನ್ನು ತುಮಕೂರು ಜಿಪಂ ಮತ್ತು ಸ್ಥಳೀಯ ೨೪ಗ್ರಾಪಂಗಳ ಅಧಿಕಾರಿವರ್ಗ ತಕ್ಷಣ ಮಾಡಬೇಕಿದೆ.

ಗ್ರಾಪಂಗಳಿಗೆ ೨೮,೩೪೫ ಕೆರೆಗಳ ಹಸ್ತಾಂತರ..
ಕರ್ನಾಟಕ ರಾಜ್ಯದಲ್ಲಿ40 ಹೆಕ್ಟೇರ್‌ಗಿಂತ ಕಡಿಮೆ ಅಚ್ಚುಕಟ್ಟು ಪ್ರದೇಶವುಳ್ಳ ಜಿಪಂ ವ್ಯಾಪ್ತಿಯ ಸುಮಾರು ೨೮,೩೪೫ ಕೆರೆಗಳಿವೆ. ಅನುಧಾನದ ಸಂಪನ್ಮೂಲದ ಕೊರತೆಯಿಂದ ಜಿಪಂನ ಅಷ್ಟು ಕೆರೆಗಳನ್ನು ಗ್ರಾಪಂಯ ಕೆರೆಗಳೆಂದು ನಾಮಕರಣ ಮಾಡಿದೆ. ಕೆರೆಗಳ ಅಭಿವೃದ್ದಿ ಮತ್ತು ನಿರ್ವಹಣೆಗೆ ನರೇಗಾ ಯೋಜನೆಯಡಿ ಅನುಧಾನ ಬಳಕೆಗೆ ರಾಜ್ಯ ಸರಕಾರ 2020 ರಲ್ಲೇ ಆದೇಶ ಮಾಡಿದೆ. ಗ್ರಾಪಂಗಳ ಕೆರೆಗಳ ಅಭಿವೃದ್ದಿ ಮತ್ತು ನಿರ್ವಹಣೆಗೆ ನರೇಗಾ ಅನುಧಾನ ಬಳಕೆಗೆ ಕಳೆದ 2 ವರ್ಷದಿಂದ ಗ್ರಾಪಂಗಳು ವಿಫಲವಾಗಿವೆ.

೨೪ಗ್ರಾಪಂಯ ೨೦ಕೆರೆಗಳಿಗೆ ಸಂಕಷ್ಟ..
ತುಂಬಾಡಿ ಗ್ರಾಮದ ಹಳೇಕೆರೆ, ಮುಸುವಿನಕಲ್ಲು ಗ್ರಾಮದ ಮುತ್ತುಕದ ಕೆರೆ, ತೋವಿನಕೆರೆ ಗ್ರಾಮದ ಗಾಣಿಗುಂಟೆ ಕೆರೆ, ಅರಸಾಪುರ ಕೆರೆ, ತುಂಬಾಡಿ ಗ್ರಾಪಂಯ ಗೌರಗಾನಹಳ್ಳಿ ಕೆರೆ, ಕೊರಟಗೆರೆ ಪಟ್ಟಣದ ಗಂಗಾಧರೇಶ್ವರ ಕೆರೆ, ಕ್ಯಾಮೇನಹಳ್ಳಿ ಗ್ರಾಪಂಯ ಬೀದಲೋಟಿ ಕೆರೆ, ಹೊಳವನಹಳ್ಳಿಯ ನಾಗರಕೆರೆ ಸೇರಿದಂತೆ ೨೦ಕ್ಕೂ ಅಧಿಕ ಕೆರೆಗಳು ಅಪಾಯದ ಸ್ಥಿತಿಯಲ್ಲಿದೆ. ಕೆರೆಗಳ ಅಭಿವೃದ್ದಿಗೆ ಅಭಿವೃದ್ದಿಗೆ ತುರ್ತಾಗಿ ಅನುಧಾನ ಬೇಕಿದೆ.

Advertisement

೮೨ಕೆರೆಗಳ ಕೋಡಿ- ತೂಬು ಶಿಥಿಲ..

ಕೊರಟಗೆರೆ ತಾಲೂಕಿನ ೨೪ ಗ್ರಾಪಂನ ೮೨ಕೆರೆಗಳ ಕೋಡಿ, ತೂಬು ಮತ್ತು ಏರಿಯು ಸಂಪೂರ್ಣ ಶಿಥಿಲವಾಗಿದೆ. ಕೆರೆಗಳ ಮೇಲೆ ಜಾಲಿ ಮತ್ತು ಜಂಗಲ್ ಗಿಡಗಳು ಬೆಳೆದು ಏರಿಗಳು ಬಿರುಕುಬಿಟ್ಟು ಕೆರೆಗಳ ಗುರುತಿಸುವುದೇ ಕಷ್ಟಸಾಧ್ಯ ಆಗಿದೆ. ೨೦ವರ್ಷಗಳಿಂದ ಮಳೆಯಿಲ್ಲದ ಅಭಿವೃದ್ದಿ ಮತ್ತು ಪುನಶ್ಚೇತನ ಮರೀಚಿಕೆಯಾದ ಪರಿಣಾಮ ಶೇಕಡಾ ಅರ್ಧದಷ್ಟು ಕೆರೆಗಳು ಒತ್ತುವರಿಯಾಗಿ ಗ್ರಾಪಂನ ಅಧಿಕಾರಿಗಳ ಪ್ರಾಣಸಂಕಟ ಎದುರಾಗಿದೆ.

ಮಳೆರಾಯನ ಕೃಪೆಯಿಂದ ೨೫ವರ್ಷದ ನಂತರ ಗಾಣಿಗುಂಟೆ ಕೆರೆಯು ತುಂಬಿದೆ. ಜಿಪಂ ಮತ್ತು ಗ್ರಾಪಂ ಅಧಿಕಾರಿಗಳ ನಿರ್ಲಕ್ಷದಿಂದ ಕೆರೆಯು ಶಿಥಿಲವಾಗಿದೆ. ನಮ್ಮ ಕೆರೆಯಲ್ಲಿ ಜಾಲಿಗಿಡ ಬೆಳೆದು ಕೆರೆಯ ಏರಿಯಲ್ಲಿ ಹತ್ತಾರು ಕಡೆಯಲ್ಲಿ ರಂಧ್ರಗಳು ಬಿದ್ದಿವೆ. ರಾಜ್ಯ ಸರಕಾರ ಮತ್ತು ಸ್ಥಳೀಯ ಶಾಸಕರು ತಕ್ಷಣ ನಮ್ಮ ಕೆರೆಯನ್ನು ರಕ್ಷಣೆ ಮಾಡಬೇಕಿದೆ.
ರಮೇಶ್. ಸ್ಥಳೀಯ ರೈತ. ತೋವಿನಕೆರೆ.

70ವರ್ಷದ ಪುರಾತನ ಮುತ್ತುಕದ ಕೆರೆಯು ೪೦ಹೇಕ್ಟರ್ ವಿಸ್ತೀರ್ಣವಿದೆ. ಕೆರೆಯ ಅಭಿವೃದ್ದಿ ಮತ್ತು ಪುನಶ್ಚೇತನ ಇಲ್ಲದೇ ದಶಕಗಳೇ ಕಳೆದಿವೆ. ಕೆರೆಯ ತೋಬು ಮತ್ತು ಏರಿ ಶಿಥಿಲವಾಗಿ ಕೆರೆಯ ನೀರು ವ್ಯರ್ಥವಾಗಿ ರೈತರ ಜಮೀನಿಗೆ ಹರಿಯುತ್ತೀದೆ. ದಯವಿಟ್ಟು ನಮ್ಮ ಕೆರೆಯನ್ನು ರಕ್ಷಣೆ ಮಾಡಿ ರೈತರಿಗೆ ಅನುಕೂಲ ಕಲ್ಪಿಸಬೇಕಿದೆ.

ನರಸಿಂಹರಾಜು. ಸ್ಥಳೀಯ ರೈತ. ಕಾಮೇನಹಳ್ಳಿ.

ಕೆರೆಗಳ ಪುನಶ್ಚೇತನ ಮತ್ತು ನಿರ್ವಹಣೆಗೆ ಗ್ರಾಪಂಗಳಲ್ಲಿ ಅನುಧಾನ ಲಭ್ಯವಿಲ್ಲ. ಕೆರೆಗಳ ಅಭಿವೃದ್ದಿಗೆ ಅನುದಾನ ನೀಡದೇ ಗ್ರಾಪಂಗಳಿಗೆ ಹಸ್ತಾಂತರ ಮಾಡಿರುವ ಸರಕಾರದ ಆದೇಶವೇ ಅವೈಜ್ಞಾನಿಕ. ಕೆರೆಗಳ ನಿರ್ವಹಣೆಗೆ ಸಣ್ಣ ನೀರಾವರಿ ಮತ್ತು ಜಿಪಂಯಲ್ಲಿ ಅನುಧಾನದ ಕೊರತೆಯಿದೆ. ಕೊರಟಗೆರೆ ಕ್ಷೇತ್ರದ ಕೆರೆಗಳ ಅಭಿವೃದ್ದಿಗೆ ಅನುಧಾನ ನೀಡುವಂತೆ ರಾಜ್ಯ ಸರಕಾರಕ್ಕೆ ನಾನು ಈಗಾಗಲೇ ಪತ್ರ ಬರೆದಿದ್ದೇನೆ.

ಡಾ.ಜಿ.ಪರಮೇಶ್ವರ್ . ಶಾಸಕರು . ಕೊರಟಗೆರೆ

ವರದಿ : ಸಿದ್ದರಾಜು.ಕೆ ಕೊರಟಗೆರೆ.

Advertisement

Udayavani is now on Telegram. Click here to join our channel and stay updated with the latest news.

Next