Advertisement

ಇಷ್ಟಲಿಂಗಕ್ಕಿದೆ ಮನಸ್ಸು ನಿಗ್ರಹ-ಇಷ್ಟಾರ್ಥ ಸಿದ್ಧಿಸುವ ಶಕ್ತಿ

08:21 AM Feb 19, 2019 | |

ಜಾಲಹಳ್ಳಿ: ಮನುಷ್ಯನ ಮನಸ್ಸನ್ನು ನಿಗ್ರಹ ಮಾಡುವಂತಹ ಶಕ್ತಿ ಮತ್ತು ಇಷ್ಟಾರ್ಥಗಳನ್ನು ಈಡೇರಿಸುವಂತ ಶಕ್ತಿ ಇಷ್ಟಲಿಂಗಕ್ಕೆ ಇದೆ. ಆದ್ದರಿಂದ ನಾವು ಪ್ರತಿನಿತ್ಯ ಇಷ್ಟಲಿಂಗ ಪೂಜೆ ಮಾಡಿಕೊಳ್ಳಬೇಕು ಎಂದು ಕೊಪ್ಪಳ ಸಂಸದ ಸಂಗಣ್ಣ ಕರಡಿ ಹೇಳಿದರು. ಸುಕ್ಷೇತ್ರ ವೀರಘೋಟ ಗ್ರಾಮದ ಆದಿ
ಮೌನೇಶ್ವರ ಆಸನಕಟ್ಟೆಯಲ್ಲಿ ಸೋಮವಾರ ನಡೆದ 1.96 ಲಕ್ಷ ಗಣಗಳ ಇಷ್ಟಲಿಂಗ ಪೂಜಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

Advertisement

ಆಧುನಿಕ ಭರಾಟೆಯಲ್ಲಿ ನಾವು ಧರ್ಮದಿಂದ ಹೊರ ಬರುತ್ತಿದ್ದೇವೆ. ಆಧ್ಯಾತ್ಮದಿಂದ ವಿಮುಖರಾಗುತ್ತಿದ್ದೇವೆ. ಇಷ್ಟಲಿಂಗ ಪೂಜೆ ಮಾಡುವುದರಿಂದ ಮನಸ್ಸು ಶಾಂತವಾಗುತ್ತದೆ. ಸಮಾಜದಲ್ಲಿ ಶಾಂತಿ ನೆಲೆಸಬೇಕು, ಸದೃಢ ಸಮಾಜ ನಿರ್ಮಾಣ ಆಗಬೇಕಾದರೆ ಮನುಷ್ಯ ಮನಸ್ಸನ್ನು
ನಿಗ್ರಹಿಸಬೇಕು. ಆ ಮನಸ್ಸನ್ನು ನಿಗ್ರಹಿಸುವಂತ ಮತ್ತು ಇಷ್ಟಾರ್ಥಗಳನ್ನು ಈಡೇರಿಸುವಂತ ಶಕ್ತಿ ಇಷ್ಟಲಿಂಗಕ್ಕೆ ಇದೆ ಎಂದು ಹೇಳಿದರು. ನಿವೃತ್ತ ಪೊಲೀಸ್‌ ಆಯುಕ್ತ ಶಂಕರ ಬಿದ್ರಿ ಮಾತನಾಡಿ, ಬಹಳ ವಿಶಾಲತೆಯನ್ನು ಹೊಂದಿರುವ ಎಲ್ಲರನ್ನು ಒಟ್ಟಿಗೆ ಕೊಂಡೊಯ್ಯುವ ಧರ್ಮ ವೀರಶೈವ ಧರ್ಮವಾಗಿದೆ.

ಹೊರ ದೇಶಗಳು ಸಮಾಜದಲ್ಲಿನ ಶಾಂತಿ ಕದಡುವಂತಹ ಕೆಲಸ ಮಾಡುತ್ತಿವೆ. ರಾಷ್ಟ್ರ ವಿರೋಧಿಗಳನ್ನು, ಭಯೋತ್ಪಾದಕರನ್ನು ನಿರ್ಮೂಲನೆ ಮಾಡಬೇಕು. ಇದು ಕೇವಲ ಪೊಲೀಸ್‌, ಸೇನೆಯಿಂದ ಆಗುವ ಕಾರ್ಯವಲ್ಲ. ಇದು ಧರ್ಮದಿಂದ ಮಾತ್ರ ಸಾಧ್ಯ. ಧರ್ಮ ಮತ್ತು ಸಂಸ್ಕೃತಿಯನ್ನು ಉಳಿಸಿದರೆ ದೇಶ ಉಳಿಯುತ್ತದೆ. ಕೇವಲ ತೋರಿಕೆಗೆ ಪೂಜೆ ಮಾಡಿದರೆ ಸಾಲದು ಒಳ್ಳೆಯ ಮನಸ್ಸಿಟ್ಟು ಪೂಜೆ ಮಾಡಬೇಕು. ಆಗ ಸಕಲ
ಇಷ್ಟಾರ್ಥ ಗಳು ಈಡೇರಲು ಸಾಧ್ಯ ಎಂದು ಹೇಳಿದರು.

ಶಾಸಕ ಹಾಗೂ ಮಹೋತ್ಸವ ಸಮಿತಿ ಅಧ್ಯಕ್ಷ ಕೆ.ಶಿವನಗೌಡ ನಾಯಕ ಪ್ರಾಸ್ತಾವಿಕ ಮಾತನಾಡಿದರು. ಶ್ರೀಶೈಲ ಪೀಠದ ಜಗದ್ಗುರು ಡಾ| ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯರು ದಿವ್ಯ ಸಾನ್ನಿಧ್ಯ ವಹಿಸಿದ್ದರು. ಬಂಥನಾಳ ವೃಷಭಲಿಂಗ ಸ್ವಾಮೀಜಿ. ಜಂಭಗಿ ಪ್ರಭುದೇವರ ಬೆಟ್ಟದ
ಶಿವಯೋಗೇಶ್ವರ ಸ್ವಾಮೀಜಿ, ದೇವಪುರು ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಅಡವಿಲಿಂಗ ಮಹಾರಾಜ ಸ್ವಾಮೀಜಿ, ದೇವರಭೂಪುರ ಗಜದಂಡ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಸುಮಾರು 500ಕ್ಕೂ ಹೆಚ್ಚು ಸ್ವಾಮೀಜಿಗಳು, ಸುರಪುರ ಶಾಸಕ ರಾಜುಗೌಡ ನಾಯಕ,
ಮಾನ್ವಿ ಶಾಸಕ ವೆಂಕಟಪ್ಪ ನಾಯಕ, ಮಸ್ಕಿ ಶಾಸಕ ಪ್ರತಾಪಗೌಡ ಪಾಟೀಲ ಅಮರಯ್ಯಸ್ವಾಮಿ ಜಾಲಿಬೆಂಚಿ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next