Advertisement
ಬಂಟ್ವಾಳ: ತಾಲೂಕು ಕೇಂದ್ರಕ್ಕೆ ಸಮೀಪವಿರುವ ಗ್ರಾಮ ಎಂಬ ಹೆಗ್ಗಳಿಕೆಯನ್ನು ಗಳಿಸಿಕೊಂಡು ಸಾಕಷ್ಟು ಮೂಲ ಸೌಕರ್ಯವಿದ್ದರೂ, ಈ ಗ್ರಾಮಕ್ಕೆ ಬಸ್‌ನ ಸೌಕರ್ಯ ಬೇಕು ಎಂಬ ಬೇಡಿಕೆ ಇನ್ನೂ ಈಡೇರಿಲ್ಲ. ಹೀಗಾಗಿ ವಾಹನವಿಲ್ಲದೆ ಇರುವ ಗ್ರಾಮಸ್ಥರು ಕಾಲ್ನಡಿಗೆ ಅಥವಾ ಆಟೋ ರಿಕ್ಷಾದಲ್ಲಿ ಸಂಚರಿಸಬೇಕಾದ ಸ್ಥಿತಿ ಇದೆ.
Related Articles
Advertisement
ರಸ್ತೆಯ ಸಮಸ್ಯೆಯೂ ಇದೆ:
ಅಮ್ಟಾಡಿ ಗ್ರಾಮದಲ್ಲಿ ಕೆಲವೊಂದು ರಸ್ತೆಗಳು ಕೂಡ ಅವ್ಯವಸ್ಥೆಯಿಂದ ಕೂಡಿದ್ದು, ಅದಕ್ಕೂ ಪರಿಹಾರ ಕಲ್ಪಿಸಬೇಕಿದೆ. ನಲ್ಕೆಮಾರು ದ್ವಾರದಿಂದ ಅಮಾrಡಿ ಸೊಸೈಟಿ ರಸ್ತೆ, ಕಜಿಪಿತ್ಲುವಿನಿಂದ ತಡ್ಯಾಲ್‌ಗುಡ್ಡೆ ರಸ್ತೆಯಲ್ಲಿ ಡಾಮರು ಕಿತ್ತು ಹೋಗಿ ಸಂಚಾರ ದುಸ್ತರವೆನಿಸಿದೆ. ಈ ರಸ್ತೆಯಲ್ಲಿ ಹೆಚ್ಚಾಗಿ ಘನ ವಾಹನಗಳು ಸಂಚರಿಸದೇ ಇದ್ದರೂ ಕೂಡ ರಸ್ತೆ ಸ್ಥಿತಿ ಅವ್ಯವಸ್ಥೆಯಲ್ಲಿದೆ.
ಚರಂಡಿಯ ವ್ಯವಸ್ಥೆ ಇಲ್ಲದ ಕಾರಣ ನೀರು ರಸ್ತೆಯಲ್ಲೇ ಹರಿಯುತ್ತಿದ್ದು, ಸಮರ್ಪಕ ನಿರ್ವಹಣೆಯಿಲ್ಲದೆ ಈ ದುಸ್ಥಿತಿಗೆ ತಲುಪಿದೆ. ಈ ಹಿಂದೆ ರಸ್ತೆಯ ಅವ್ಯವಸ್ಥೆಗೆ ತಾತ್ಕಾಲಿಕ ಪರಿಹಾರವಾಗಿ ಕಲ್ಲುಗಳನ್ನು ಹಾಕಲಾಗಿದ್ದು, ಅವುಗಳು ಒಂದು ತಿಂಗಳಲ್ಲೇ ಎದ್ದು ಹೋಗಿವೆ. ಅಮ್ಟಾಡಿ ಗ್ರಾಮಕ್ಕೆ ನಲ್ಕೆಮಾರ್-ತಡ್ಯಾಲ್ ರಸ್ತೆ ಅತಿಮುಖ್ಯ ರಸ್ತೆಯಾಗಿದ್ದು, ಹೀಗಾಗಿ ಈ ಭಾಗದ ಮಂದಿ ರಸ್ತೆ ದುರಸ್ತಿಗಾಗಿ ಆಗ್ರಹಿಸುತ್ತಿದ್ದಾರೆ.
ಗುಡ್ಡ ಕುಸಿಯುವ ಭೀತಿ :
ಗ್ರಾಮದ ಕೆಂಪುಗುಡ್ಡೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಅಂಗನವಾಡಿ ಕೇಂದ್ರದ ಬಳಿ ಗುಡ್ಡ ಕುಸಿಯುವ ಭೀತಿ ಇದ್ದು, ಒಂದಷ್ಟು ಮನೆಗಳಿಗೂ ತೊಂದರೆಯಾಗಲಿದೆ. ಕೆಂಪುಗುಡ್ಡೆ ಜಂಕ್ಷನ್‌ನಿಂದ ಕಜಿಪಿತ್ಲು, ತಡ್ಯಾಲ್‌ಗುಡ್ಡೆ, ನಲ್ಕೆಮಾರ್ ರಸ್ತೆಯು ಪ್ರಾಥಮಿಕ ಶಾಲೆಯ ಹಿಂಬದಿಯಿಂದ ಬೀಳುವ ಮಣ್ಣಿನಿಂದ ರಸ್ತೆ ಸಂಪರ್ಕ ಕಡಿದುಕೊಳ್ಳುವ ಸಾಧ್ಯತೆಯೂ ಇದೆ. ಗ್ರಾಮದ ಇತರ ಭಾಗಗಳಲ್ಲೂ ಗುಡ್ಡ ಕುಸಿಯುವ ಭೀತಿ ಇದ್ದು, ಅದಕ್ಕೂ ಒಂದಷ್ಟು ಪರಿಹಾರ ಕಾರ್ಯಗಳಾಗಬೇಕಿದೆ.
ಇತರ ಸಮಸ್ಯೆಗಳೇನು? :
- ಒಂದಷ್ಟು ಪ್ರದೇಶಗಳಲ್ಲಿ ನೀರಿನ
- ಕೊರತೆಯೂ ಇದೆ
- ಕಜಿಪಿತ್ಲು ಪ್ರದೇಶದಲ್ಲಿ ಇನ್ನೂ ನೀರಿನ ಪೈಪ್ ಸಂಪರ್ಕಕ್ಕೆ ಆಗಿಲ್ಲ