Advertisement
ಜಿಂಕೆಯ ಎರಡೂ ಕಾಲುಗಳಿಗೆ ಬಲವಾದ ಪೆಟ್ಟು ಬಿದ್ದು ತೀವ್ರ ರಕ್ತಸ್ರಾವವಾಗುತ್ತಿತ್ತು. ರಾತ್ರಿ ಕೆಲಸ ಮುಗಿಸಿ ಹೋಗುತ್ತಿದ್ದ ಅರಣ್ಯರಕ್ಷಕರು ಜಿಂಕೆಯನ್ನು ಕಂಡು ತಕ್ಷಣ ಟಾಟಾ ಏಸ್ ವಾಹನದಲ್ಲಿ ಪಟ್ಟಣದ ವಲಯ ಅರಣ್ಯಾಧಿಕಾರಿಗಳ ಕಾರ್ಯಾಲಯಕ್ಕೆ ಸಾಗಿಸಿದರು. ಪಶು ವೈದ್ಯಾಧಿಕಾರಿಗಳು ಮತ್ತುಸಿಬ್ಬಂದಿ ಆರೈಕೆ ಮಾಡಿದರೂ ಚಿಕಿತ್ಸೆ ಫಲಿಸದೇ ಜಿಂಕೆ ಮೃತಪಟ್ಟಿತು. ನಂತರ ಅರಣ್ಯ ಇಲಾಖೆ ಸಿಬ್ಬಂದಿ ಮಂಗೇಶ ಕೆರೆಯ ಸನಿಹದಲ್ಲಿ ಕೊಂಡೊಯ್ದು ಅಂತ್ಯಕ್ರಿಯೆ ನಡೆಸಿದರು.
ಈಗಾಗಲೇ ಕಾಡಿನಲ್ಲಿ ನೀರಿಲ್ಲದಿರುವುದನ್ನು ಮನಗಂಡ ಅರಣ್ಯ ಇಲಾಖೆ ಸಿಬ್ಬಂದಿ ಹಸರಂಬಿ ಶಾಖೆಯ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಅರಣ್ಯ ವನಪಾಲಕ ಶಶಿಧರ ತಡಕೋಡ ಮುಂದಾಳತ್ವದಲ್ಲಿ 3-4 ಕಡೆ ನೀರಿನ ಹೊಂಡಗಳನ್ನು ನಿರ್ಮಿಸಲಾಗಿದೆ. ಅಂತೆಯೇ ಉಪವಲಯ ಅರಣ್ಯಾಧಿಕಾರಿ ಮುರಗೆಪ್ಪ ಇಲಾಲ ಮಾರ್ಗದರ್ಶನದಲ್ಲಿ ತುಮ್ರಿಕೊಪ್ಪ ಅರಣ್ಯ ಪ್ರದೇಶದಲ್ಲೂ ಹೊಂಡಗಳನ್ನು ನಿರ್ಮಿಸಲಾಗಿದೆ. ಈಹೊಂಡಗಳಿಗೆ ಟ್ಯಾಂಕರ್ ಮೂಲಕ ನೀರು ತುಂಬಿಸಲಾಗುತ್ತಿದೆ. ಅರಣ್ಯ ಇಲಾಖೆ ಸಿಬ್ಬಂದಿ ಹೊಂಡಗಳನ್ನು ತಮ್ಮ ಸ್ವಂತ ಖರ್ಚಿನಲ್ಲೇ ಮಾಡಿರುವುದು ಶ್ಲಾಘನೀಯ. ಹೀಗಿದ್ದಾಗ್ಯೂ ಅನೇಕ ಭಾಗಗಳಲ್ಲಿ ನೀರಿಲ್ಲದ ಕಾರಣ ಕಾಡು ಪ್ರಾಣಿಗಳು ನಾಡಿನತ್ತ ಮುಖ ಮಾಡಿವೆ.