Advertisement

Mogral Puthur; ಗ್ರಾಮ ಪಂಚಾಯತ್‌ ಸದಸ್ಯೆಯ ಮೃತದೇಹ ರಸ್ತೆ ಬದಿಯಲ್ಲಿ ಪತ್ತೆ

11:32 PM Jan 08, 2024 | Team Udayavani |

ಕಾಸರಗೋಡು: ಮೊಗ್ರಾಲ್‌ ಪುತ್ತೂರು ಗ್ರಾಮ ಪಂಚಾಯತ್‌ನ ಮೂರನೇ ವಾರ್ಡ್‌ ಸದಸ್ಯೆ ಮೂಲತಃ ವಿದ್ಯಾನಗರ ಕೋಪ ನಿವಾಸಿ, ಪ್ರಸ್ತುತ ಮೊಗ್ರಾಲ್‌ ಪುತ್ತೂರು ಮೊಗರಿನಲ್ಲಿ ವಾಸಿಸುತ್ತಿದ್ದ ಪುಷ್ಪಾ (45) ಅವರ ಮೃತ ದೇಹ ಮೊಗ್ರಾಲ್‌ ಪುತ್ತೂರು ಕೋಟೆಗುಡ್ಡೆ ಕ್ವಾರ್ಟರ್ಸ್‌ ಸಮೀಪ ರಸ್ತೆ ಬದಿಯಲ್ಲಿ ಪತ್ತೆಯಾಗಿದೆ.

Advertisement

ಮುಸ್ಲಿಂ ಲೀಗ್‌ ಸದಸ್ಯೆಯಾಗಿರುವ ಪುಷ್ಪಾ ಅವರು ಸೋಮವಾರ ಮಧ್ಯಾಹ್ನ ರಸ್ತೆ ಬದಿಯಲ್ಲಿ ಪತ್ತೆಯಾಗಿದ್ದರು.

ಕೂಡಲೇ ಅವರನ್ನು ಸ್ಥಳೀಯರು ಆಟೋ ರಿಕ್ಷಾದಲ್ಲಿ ಆಸ್ಪತ್ರೆಗೆ ಸಾಗಿಸಿದರೂ ಆಗಲೇ ಸಾವಿಗೀಡಾಗಿದ್ದರು. ಸಂಬಂಧಿಕರ ಮನೆಗೆಂದು ತೆರಳಿದ್ದರೆನ್ನಲಾಗಿದೆ. ಅವರು ಎರಡು ವರ್ಷಗಳಿಂದ ಅಸೌಖ್ಯದಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯುತ್ತಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next