Advertisement

New York:ಆಸ್ತಿ ಹಂಚಿದ ಶ್ರೀಮಂತ ಹೂಡಿಕೆದಾರ ಬಫೆಟ್‌; ಕುಟುಂಬದ 4 ಫೌಂಡೇಶನ್‌ ಆಸ್ತಿ ಹಂಚಿಕೆ

01:12 AM Dec 27, 2024 | Team Udayavani |

ನ್ಯೂಯಾರ್ಕ್‌: ಶತಕೋಟ್ಯಧೀಶ್ವರ ವಾರೆನ್‌ ಬಫೆಟ್‌ ತನ್ನ ನಿಧನದ ಬಳಿಕ ತನ್ನೆಲ್ಲ ಆಸ್ತಿ ಹೇಗೆ ಹಂಚಿಕೆಯಾಗ ಬೇಕೆಂಬು ಮಾಹಿತಿಯನ್ನು ಹೊರ ಹಾಕಿದ್ದು, ಎಲ್ಲ ಪೋಷಕರಿಗೆ ಉಯಿಲು ಬಗ್ಗೆ ಕಿವಿ ಮಾತು ಹೇಳಿದ್ದಾರೆ.

Advertisement

94 ವರ್ಷದ ಹೂಡಿಕೆದಾರ ವಾರೆನ್‌ ಬಫೆಟ್‌ ದಿ ಬರ್ಕ್‌ಶೈರ್‌ ಹಾಥ್‌ವೇ ಸಿಇಒ ಆಗಿದ್ದು, ಈ ಕುರಿತಾದ ಪತ್ರ ವೊಂದನ್ನು ಕಂಪೆನಿ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ.

ನಿಧನದ ಬಳಿಕ ತಮ್ಮ ಕುಟುಂಬದ 4 ಫೌಂಡೇಶನ್‌ಗಳಿಗೆ 1.1 ಶತಕೋಟಿ ಡಾಲರ್‌ ಹಂಚಿಕೆಯಾಗಲಿದೆ. ಬಳಿಕ, ಹಂತ ಹಂತವಾಗಿ ಉಳಿದ ಷೇರು­ಗಳು 71, 69 ಮತ್ತು 64 ವಯಸ್ಸಿನ ತಮ್ಮ ಮೂರೂ ಮಕ್ಕಳಿಗೆ ಹಂಚಿಕೆ­ಯಾಗಲಿವೆ ಎಂದು ಹೇಳಿದ್ದಾರೆ. ಇದೇ ವೇಳೆ, ತಮ್ಮ ಉದ್ದೇಶಗಳನ್ನು ಈಡೇರಿ­ಸಲು ಮಕ್ಕಳು ವಿಫ‌ಲರಾಗದಂತೆ ನೋಡಿ ಕೊಳ್ಳಲು ಮೂವರು ಟ್ರಸ್ಟಿಗಳನ್ನು ನೇಮಿ ಸಿದ್ದೇನೆ ಎಂದೂ ಬರೆದುಕೊಂಡಿದ್ದಾರೆ.

ಪೋಷಕರಿಗೂ ಸಲಹೆ ನೀಡಿದ್ದು, ಸಾಧಾ ರಣ ಇಲ್ಲವೇ ಭಾರೀ ಪ್ರಮಾ ಣದಲ್ಲಿ ಆಸ್ತಿ ಹೊಂದಿದ್ದರೂ ನಿಮ್ಮ ಮಕ್ಕಳು ಪ್ರೌಢಾವಸ್ಥೆಗೆ ಬಂದಾಗ ಅವರ ಮುಂದೆ ನಿಮ್ಮ ಉಯಿಲು ಓದಿ ಹೇಳಿ. ಇದರಿಂದ ಭವಿಷ್ಯದಲ್ಲಿ ತಪ್ಪು ಕಲ್ಪನೆಗಳು ದೂರಾಗಿ, ಸಂಬಂಧಗಳು ಗಟ್ಟಿಯಾಗಿ ಉಳಿಯಲು ಸಾಧ್ಯವಾಗುತ್ತದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next