ಬೆಂಗಳೂರು: ವರುಣ ಆರ್ಭಟ, ರಸ್ತೆಗುಂಡಿಗಳಿಂದ ಹಲವು ಅಮಾಯಕರು ಪ್ರಾಣ ಕಳೆದುಕೊಂಡಂತಹ ದುರಂತಗಳ ನಡುವೆಯೇ, ಮೂಲ ಸೌಕರ್ಯ, ಸುಧಾರಿತ ಸೌಲಭ್ಯಗಳು, ಸ್ಮಾರ್ಟ್‌ಸಿಟಿಗೆ ಆಯ್ಕೆ, ಪೌರಕಾರ್ಮಿಕರ ಸ್ಥಿತಿಗತಿ ಸುಧಾರಣೆ, ದಟ್ಟಣೆ ನಿವಾರಣೆಗೆ ಅಂಡರ್‌ಪಾಸ್, ಮೇಲ್ಸೇತುವೆಗಳು ಸಂಚಾರಕ್ಕೆ ಮುಕ್ತ, ಹಸಿದವರಿಗೆ ಅಗ್ಗದ ದರದಲ್ಲಿ ಉಪಹಾರ-ಊಟ ವಿತರಿಸುವ ಇಂದಿರಾ ಕ್ಯಾಂಟೀನ್‌ನಂತಹ ಐತಿಹಾಸಿಕ ಹಿರಿಮೆಗಳಿಗೆ 2017 ಸಾಕ್ಷಿಯಾಯಿತು.
ಸ್ವತ್ಛತಾ ಸಿಪಾಯಿಗಳ ಸ್ಥಿತಿ ಸುಧಾರಣೆಗೆ ಹಲವು ಕ್ರಮ: ನಗರದ ಸ್ವತ್ಛತೆ ಹಾಗೂ ನೈರ್ಮಲ್ಯ ಸುಧಾರಣೆಗೆ ದುಡಿಯುವ ಪೌರಕಾರ್ಮಿಕರ ಸ್ಥಿತಿಗತಿ ಸುಧಾರಣೆಗೆ ಪಾಲಿಕೆಯಿಂದ ಈ ವರ್ಷ ಹಲವು ಮಹತ್ವ ಯೋಜನೆಗಳನ್ನು ಕೈಗೊಳ್ಳಲಾಯಿತು. ದೇಶದಲ್ಲೇ ಮೊದಲ ಬಾರಿ ಪೌರಕಾರ್ಮಿಕರಿಗೆ ಮಧ್ಯಾಹ್ನದ ಬಿಸಿಯೂಟ ವಿತರಣೆ, ವೇತನ ಹೆಚ್ಚಳ, ಪೌರಕಾರ್ಮಿಕರ ಬ್ಯಾಂಕ್ ಖಾತೆಗೆ ವೇತನ, ಸ್ವತ್ಛತೆ ಕುರಿತು ಅರಿವು ಮೂಡಿಸಲು ಸಿಂಗಾಪುರ ಪ್ರವಾಸ ರೀತಿಯ ಪ್ರಮುಖ ನಿರ್ಧಾರವನ್ನು ಕೈಗೊಳ್ಳಲಾಗಿದೆ.
ಕಡೆಗೂ ಸ್ಮಾರ್ಟ್‌ಸಿಟಿ ಪಟ್ಟಿಗೆ ಸಿಲಿಕಾನ್ ಸಿಟಿ: ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಸ್ಮಾರ್ಟ್‌ಸಿಟಿ ಯೋಜನೆಗೆ 2017ರಲ್ಲಿ ಬೆಂಗಳೂರು ಆಯ್ಕೆಯಾಗಿದೆ. ಈ ಹಿಂದೆ ಎರಡು ಬಾರಿ ಪಟ್ಟಿಯಲ್ಲಿ ಸ್ಥಾನ ಪಡೆಯಲು ಬೆಂಗಳೂರು ವಿಫಲವಾಗಿತ್ತು. ಆ ಹಿನ್ನೆಲೆಯಲ್ಲಿ ಅಗತ್ಯ ಕಾರ್ಯಕ್ರಮಗಳನ್ನು ರೂಪಿಸಿದ ಬಿಬಿಎಂಪಿ, ರಾಜ್ಯ ಸರ್ಕಾರದ ನಿರ್ದೇಶನದಂತೆ 1,742 ಕೋಟಿ ರೂ. ಮೊತ್ತದ ಯೋಜನೆಗಳಿರುವ ವರದಿ ಸಲ್ಲಿಸುವ ಮೂಲಕ ಸ್ಮಾರ್ಟ್‌ಸಿಟಿ ಪಟ್ಟಿಗೆ ಆಯ್ಕೆಯಾಗುವಲ್ಲಿ ಸಫಲವಾಗಿದೆ.
ಚುರುಕುಗೊಂಡ ಕಾಮಗಾರಿಗಳು: ನಗರದಲ್ಲಿ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಹಲವಾರು ಯೋಜನೆಗಳಿಗೆ ಪಾಲಿಕೆ ಚಾಲನೆ ನೀಡಿತು. ಅದರಂತೆ ಈಗಾಗಲೇ ರಾಜ್‌ಕುಮಾರ್ ರಸ್ತೆ, ಮಾಗಡಿ ರಸ್ತೆಯ ಅಂಡರ್‌ಪಾಸ್‌ಗಳು ಮತ್ತು ಚೆನ್ನಮ್ಮ ವೃತ್ತ ಹಾಗೂ ಕೆಇಬಿ ಜಂಕ್ಷನ್ ಮೇಲ್ಸೇತುವೆಗಳು ಸಾರ್ವಜನಿಕರಿಗೆ ಮುಕ್ತವಾಗಿವೆ. ಅದರೊಂದಿಗೆ ಓಕಳಿಪುರ ಅಷ್ಟಪಥ ಕಾಮಗಾರಿ, ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿ ಮೇಲ್ಸೇತುವೆಗಳು, ಚರ್ಚ್‌ಸ್ಟ್ರೀಟ್ ಟೆಂಡರ್‌ಶ್ಯೂರ್, ದಾಲಿ¾ಯಾ ಜಂಕ್ಷನ್, ಶಿವಾನಂದ ವೃತ್ತದ ಉಕ್ಕಿನ ಸೇತುವೆ ಸೇರಿ ಹಲವಾರು ಕಾಮಗಾರಿಗಳು ಚುರುಕುಗೊಂಡಿವೆ.
ಸ್ಮಾರ್ಟ್ ಪಾರ್ಕಿಂಗ್, ಎಲ್‌ಇಡಿ ಲೈಟಿಂಗ್: ನಗರದಲ್ಲಿ ಪಾರ್ಕಿಂಗ್ ಸಮಸ್ಯೆ ನಿವಾರಣೆ ಹಾಗೂ ಆದಾಯ ವೃದ್ಧಿಗಾಗಿ ನಗರದ 85 ರಸ್ತೆಗಳಲ್ಲಿ ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆ ಜಾರಿಗೆ ಈಗಾಗಲೇ ಟೆಂಡರ್ ಕರೆದು, ಗುತ್ತಿಗೆದಾರರನ್ನು ಅಂತಿಮಗೊಳಿಸಲಾಗಿದೆ. ಇದರೊಂದಿಗೆ ನಗರದಲ್ಲಿ 4 ಲಕ್ಷಕ್ಕೂ ಹೆಚ್ಚಿನ ಬೀದಿ ದೀಪಗಳಿಗೆ ಎಲ್‌ಇಡಿ ಬಲ್ಬ್ಗಳನ್ನು ಅಳವಡಿಸುವ ಮೂಲಕ ವಿದ್ಯುತ್ ಉಳಿತಾಯಕ್ಕೆ ಪಾಲಿಕೆ ಮುಂದಾಗಿದೆ.
ಬಡವರಿಗೆ ಉಚಿತ ಆಂಜಿಯೋಪ್ಲಾಸ್ಟ್: ನಗರದಲ್ಲಿನ ಬಡ ಹೃದ್ರೋಗಿಗಳಿಗೆ ಉಚಿತವಾಗಿ ಆಂಜಿಯೋಪ್ಲಾಸ್ಟ್ ಮತ್ತು ಸ್ಟಂಟ್ಸ್‌ಗಳ ಅಳವಡಿಕೆ ಯೋಜನೆ ಜಾರಿಗೊಳಿಸಿದ್ದು, ಪ್ರತಿವಾರ್ಡ್‌ಗೆ ಇಬ್ಬರು ರೋಗಿಗಳು ಈ ಸೌಲಭ್ಯ ಪಡೆಯಬಹುದಾಗಿದೆ. ಇದರೊಂದಿಗೆ ಮಾಲಿನ್ಯ ನಿಯಂತ್ರಣಕ್ಕಾಗಿ ಮೆಕಾನಿಕಲ್ ಸ್ವೀಪಿಂಗ್ ಯಂತ್ರ, ರಾಜಕಾಲುವೆಯಲ್ಲಿ ಹೂಳೆತ್ತಲು ರೋಬೊಟಿಕ್ ಯಂತ್ರಗಳ ಬಳಕೆಗೂ ಮುಂದಾಗಿದೆ.
ದಟ್ಟಣೆ ನಿಯಂತ್ರಣಕ್ಕಾಗಿ ಟ್ರಿಣ್ ಟ್ರಿಣ್: ನಗರದಲ್ಲಿ ಸಂಚಾರ ದಟ್ಟಣೆ ನಿವಾರಿಸುವ ಮೂಲಕ ಮಾಲಿನ್ಯ ತಡೆಯಲು ಟ್ರಿಣ್ ಟ್ರಿಣ್ ಬೈಸಿಕಲ್ ಯೋಜನೆ ಜಾರಿಗೊಳಿಸಲು ಮುಂದಾಗಿದೆ. ಇದರೊಂದಿಗೆ ಮೆಟ್ರೋಗೆ ಫೀಡರ್ ಸೇವೆಯಾಗಿ ಪಾಡ್ ಟ್ಯಾ…Õ ಅನುಷ್ಠಾನಗೊಳಿಸಲು ಟೆಂಡರ್ ಪ್ರಕ್ರಿಯೆ ಅಂತಿಮವಾಗಿದೆ. ಇದರೊಂದಿಗೆ ಆಡಳಿತ ವಿಕೇಂದ್ರೀಕರಣಕ್ಕಾಗಿ ಪಾಲಿಕೆಯ 8 ವಲಯಗಳನ್ನು ಹತ್ತು ವಲಯಗಳಾಗಿ ವಿಂಗಡಿಸಿ ಸರ್ಕಾರ ಆದೇಶ ಹೊರಿಡಿಸಿದೆ.