Advertisement
ಜೊತೆಗೆ ಉದ್ಯಾನದ ಕೆಲ ಪ್ರದೇಶ ಪಶ್ಚಿಮಘಟ್ಟಗಳ ಸಾಲಿಗೂ ಸೇರಲಿದೆ. ಮೈಸೂರು ಹಾಗೂ ಮಡಿಕೇರಿ ಜಿಲ್ಲೆ ವ್ಯಾಪ್ತಿಗೆ ಒಳಪಡುತ್ತದೆ. 643 ಚದರ ಕಿಲೋ ಮೀಟರ್ ವ್ಯಾಪ್ತಿಯ 8 ವಲಯಗಳ ಪೈಕಿ 4 ವಲಯಗಳಲ್ಲಿ ಈಗಾಗಲೇ ಮಳೆ ಕೊರತೆ, ಬಿರು ಬಿಸಿಲಿಗೆ ಕಾಡು ಒಣಗಿದೆ. ನೆಲಹುಲ್ಲು ಹಾಗೂ ಮರಗಳ ಎಲೆಗಳು ಉದುರಿದೆ. ಬಹುತೇಕ ಕೆರೆಕಟ್ಟೆಗಳಲ್ಲಿ ನೀರು ಕಡಿಮೆ- ಬರಿದಾಗಿದೆ.
Related Articles
Advertisement
ಹೆಚ್ಚುವರಿ ವಾಹನಗಳ ವ್ಯವಸ್ಥೆ: ಹಾಲಿ ಪ್ರತಿ ವಲಯಕ್ಕೆ 2 ವಾಹನಗಳಿದ್ದು, ಇದರೊಂದಿಗೆ ಮತ್ತೆ ರಡು ಬಾಡಿಗೆ ವಾಹನ ನಿಯೋಜಿಸಲಾಗಿದೆ. ಇದ ರೊಂದಿಗೆ ಹಳೆಯ ವಾಕಿ ಟಾಕಿ ದುರಸ್ತಿ ಜೊತೆಗೆ ಮತ್ತಷ್ಟು ಹೊಸ ವಾಕಿಟಾಕಿ ಖರೀದಿಸಲು ಯೋಜಿಸ ಲಾಗಿದೆ. ಬೆಂಕಿ ಬಿದ್ದವೇಳೆ ತಕ್ಷಣವೇ ಆರಿಸಲು ನೆರವಾಗಲು ಚಿಕ್ಕ ವಾಹನಗಳಲ್ಲಿ ಟ್ಯಾಂಕ್ ಮೂಲಕ ನೀರು ಕೊಂಡೊಯ್ಯುವ ವಾಹನಗಳಲ್ಲಿ ಸಣ್ಣ ಸಬ್‌ಮರ್ಸಿಬಲ್ ಪಂಪ್ ಸಹ ಬಳಸಲು ಉದ್ದೇಶಿಸ ಲಾಗಿದ್ದು, ಖರೀದಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಅಗ್ನಿಶಾಮಕ ವಾಹನವೂ ಸಜ್ಜು: ಉದ್ಯಾನವನ ದೊಳಗೆ ಬೆಂಕಿ ಅವಘಡ ಸಂಭವಿಸಿದಲ್ಲಿ ತಕ್ಷಣಕ್ಕೆ ಕ್ರಮವಹಿಸಲು ಹುಣಸೂರು, ಎಚ್.ಡಿ.ಕೋಟೆ ಹಾಗೂ ಕೊಡಗು ಜಿಲ್ಲೆಯ ವಿರಾಜಪೇಟೆ ವಿಭಾಗದಲ್ಲಿ ತಾತ್ಕಾಲಿಕವಾಗಿ 3 ಅಗ್ನಿಶಾಮಕ ವಾಹನ ಹಾಗೂ ಸಿಬ್ಬಂದಿಯನ್ನು ನಿಯೋಜಿಸಲು ಅಗ್ನಿಶಾಮಕ ಇಲಾಖೆಗೆ ಪತ್ರ ಬರೆಯಲಾಗಿದೆ.
ಬೀದಿ ನಾಟಕದ ಮೂಲಕ ಅರಿವು: ನಾಗರ ಹೊಳೆ ಉದ್ಯಾದಂಚಿನ ಗ್ರಾಮಗಳಲ್ಲಿ ನುರಿತ ಕಲಾ ತಂಡಗಳಿಂದ ಅರಣ್ಯದ ಮಹತ್ವ, ಬೆಂಕಿ ಹಾಕಿದ್ದಲ್ಲಿ ಪರಿಸರದ ಮೇಲಾಗುವ ಪರಿಣಾಮ ಹಾಗೂ ಅರಣ್ಯ ಜನರದ್ದು ಎನ್ನುವ ಮನೋಭಾವ ಮೂಡಿಸುವ ನಿಟ್ಟಿನಲ್ಲಿ ಬೀದಿ ನಾಟಕ ಪ್ರದರ್ಶಿಸಲಾಗುತ್ತದೆ. ಜೊತೆಗೆ ಆಸಕ್ತ ಯುವಕರ ಬೆಂಕಿ ತಡೆಗಟ್ಟುವ ಪಡೆಯನ್ನು ಸಹ ರಚಿಸಲಾಗುತ್ತದೆ. ಈಗಾಗಲೇ ಕಾಡಂಚಿನಲ್ಲಿ ಜಾಥಾ ನಡೆಸಲಾಗಿದೆ. ರೇಡಿಯೋದಲ್ಲೂ ಸಹ ಮಾಹಿತಿ ನೀಡಲಾಗಿದೆ.
ಹೆಲಿಕಾಪ್ಟರ್ ಬಳಕೆಗೆ ಚಿಂತನೆ: ಈಗಾಗಲೇ ನೀರಿನ ಕೊರತೆ ಇದೆ. ಫೆಬ್ರವರಿ- ಮಾರ್ಚ್‌ನಲ್ಲಿ ಮಳೆ ಬಾರದಿದ್ದಲ್ಲಿ ಮತ್ತಷ್ಟು ತೊಂದರೆಯಾಗಬಹುದು. ಬೆಂಕಿ ತಡೆಗೆ ಮುನ್ನೆಚ್ಚರಿಕೆಯಾಗಿ ಸಕಲ ಸಿದ್ಧತೆ ಮಾಡಿಕೊಂಡಿದ್ದರೂ, ತುರ್ತು ಸಂದರ್ಭದಲ್ಲಿ ಹೆಲಿಕಾಪ್ಟರ್ ಬಳಸಿ ಬೆಂಕಿ ನಂದಿಸುವ ಬಗ್ಗೆಯೂ ಹಿರಿಯ ಅಧಿಕಾರಿಗಳಲ್ಲಿ ಚರ್ಚಿಸಿದ್ದು, ಈಗಾಗಲೇ ಹೆಲಿಕಾಪ್ಟರ್‌ಗಾಗಿ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ.
ಅರಣ್ಯಕ್ಕೆ ತಂತಾನೆ ಬೆಂಕಿ ಬೀಳುವು ದಿಲ್ಲ. ಬೆಂಕಿ ಬೀಳುವುದನ್ನು ತಡೆಯು ವುದರಲ್ಲಿ ಸಾರ್ವಜನಿಕರ ಜವಾ ಬ್ದಾರಿಯೂ ಇದೆ. ಬೆಂಕಿ ಹಚ್ಚಿ ಅರಣ್ಯನಾಶ ಮಾಡುವ ಕಿಡಿಗೇಡಿಗಳ ಹಾಗೂ ಸಂಶಯಾಸ್ಪದ ವ್ಯಕ್ತಿಗಳ ಬಗ್ಗೆ ಕಾಡಂಚಿನವನರು ಮಾಹಿತಿ ನೀಡಬೇಕು, ಅರಣ್ಯನಾಶವಾದಲ್ಲಿ ವಾತಾವರಣದ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಇಲಾಖೆ ಸಾಕಷ್ಟು ಮುನ್ನೆಚ್ಚರಿಕೆವಹಿಸಿದೆ. ಆದರೂ ಅರಣ್ಯದಂಚಿನ ಗ್ರಾಮಗಳ ರೈತರು, ಬೆಂಕಿ ತಡೆಗಟ್ಟುವಲ್ಲಿ ಯುವಕರು, ವಿದ್ಯಾರ್ಥಿಗಳ ಸಹಕಾರವೂ ಅಗತ್ಯ.-ಮಣಿಕಂಠನ್, ಅರಣ್ಯ ಸಂರಕ್ಷಣಾಕಾರಿ * ಸಂಪತ್‌ಕುಮಾರ್