Advertisement

ಸಾಹಿತ್ಯ, ಆಧ್ಯಾತ್ಮದ ನಂಟು ಬಲಗೊಳಿಸಿದ್ದು ಸಿಪಿಕೆ

12:46 PM Apr 10, 2018 | |

ಮೈಸೂರು: ನಿರಂತರ ಅಧ್ಯಯನ ಮತ್ತು ತನ್ಮಯತೆ ಹೊಂದಿದಾಗ ಮಾತ್ರ ಸಾಹಿತ್ಯ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದು ಮೈಸೂರು ರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ಜಾnನಯೋಗಾನಂದ ಮಹಾರಾಜ್‌ ಹೇಳಿದರು.

Advertisement

ಅಖೀಲರತ ಸರ್ವಜ್ಞ ಸಾಂಸ್ಕೃತಿಕ ಪ್ರತಿಷ್ಠಾನದಿಂದ ನಗರದ ರೋಟರಿ ಸಭಾಂಗಣದಲ್ಲಿ ನಡೆದ ಡಾ.ಸಿಪಿಕೆ- 79ರ ಅಭಿನಂದನೆ, ನಾಲ್ಕು ಕೃತಿಗಳ ಲೋಕಾರ್ಪಣೆ ಹಾಗೂ ಸರ್ವಜ್ಞ ಸಾಹಿತ್ಯ ಮಾಲೆ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಕಿರಿಯ ಸಾಹಿತಿಗಳಿಗೆ ಆದರ್ಶವಾಗಿರುವ ಸಿಪಿಕೆ ಅವರು, ಸಾಹಿತ್ಯ ಮತ್ತು ಬರವಣಿಗೆಯನ್ನು ತಮ್ಮ ಉಸಿರಾಗಿಸಿಕೊಂಡಿದ್ದಾರೆ. ಸಾಮಾನ್ಯರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಕೃತಿ ರಚಿಸಲು ಸಾಧ್ಯವಿಲ್ಲ.

ಆದರೆ, ಸಿಪಿಕೆ ಅವರು ನಿರಂತರ ಅಧ್ಯಯನದಿಂದ ನೂರಾರು ಕೃತಿಗಳನ್ನು ರಚಿಸಿದ್ದು, ಈ ನಿಟ್ಟಿನಲ್ಲಿ ಸಿಪಿಕೆ ಅವರದ್ದು ಅಪರೂಪದ ವ್ಯಕ್ತಿತ್ವವಾಗಿದೆ ಎಂದು ಹೇಳಿದರು. ವಿವೇಕಪ್ರಭದ ಮೂಲಕ ತಮಗೆ ಸಿಪಿಕೆ ಅವರ ನಂಟು ಬೆಳೆದಿದ್ದು,

ರಾಷ್ಟ್ರಕವಿ ಕುವೆಂಪು ಅವರಂತೆ ರಾಮಕೃಷ್ಣ ಆಶ್ರಮದೊಂದಿಗೆ ನಿಕಟ ಸಂಪರ್ಕವನ್ನು ಹೊಂದಿದ್ದಾರೆ. ವಿವೇಕಪ್ರಭ ಸಂಚಿಕೆಗೆ ಲೇಖನಗಳನ್ನು ಬರೆಯುವ ಮೂಲಕ ಸಿಪಿಕೆ ಅವರು ಸಾಹಿತ್ಯ ಮತ್ತು ಆಧ್ಯಾತ್ಮದ ನಡುವಿನ ನಂಟನ್ನು ಬಲಗೊಳಿಸಿದ್ದಾರೆ ಎಂದು ವಿವರಿಸಿದರು.

ಕಾರ್ಯಕ್ರಮದ ಅಂಗವಾಗಿ ಡಾ.ಸಿ.ಪಿ.ಕೃಷ್ಣಕುಮಾರ್‌ ದಂಪತಿಯನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಸಿಪಿಕೆ ಅವರ ಲೋಕಮಾತಾ ನಿವೇದಿತಾ, ಅಂಗೈಯಲ್ಲಿ ಅಲಂಕಾರಶಾಸ್ತ್ರ, ಅಂಗೈಯಲ್ಲಿ ಕುವೆಂಪು ಹಾಗೂ ಅಂಗೈಯಲ್ಲಿ ಶ್ರೀರಾಮಾಯಣ ದರ್ಶನಂ ಕೃತಿ ಬಿಡುಗಡೆ ಮಾಡಲಾಯಿತು.

Advertisement

ಚಿಂತಕ ಡಾ.ಸಿ.ನಾಗಣ್ಣ, ವಿದ್ವಾಂಸ ಡಾ.ಕಬ್ಬಿನಾಲೆ ವಸಂತ ಭಾರದ್ವಾಜ್‌, ಸಾಹಿತಿ ಪ್ರೊ.ಕೆ.ಬೈರವಮೂರ್ತಿ, ಡಾ. ನಟರಾಜ ಜೋಯಿಸ್‌, ಡಾ.ಡಿ.ತಿಮ್ಮಯ್ಯ, ರಂಗಕರ್ಮಿ ನಾ.ನಾಗಚಂದ್ರ, ಸಂವಹನ ಪ್ರಕಾಶಕ ಡಿ.ಎನ್‌.ಲೋಕಪ್ಪ, ಲಿಖೀತ್‌ ಪ್ರಕಾಶನದ ಕೆ.ಸಿ.ಓಂಕಾರಪ್ಪ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next