Advertisement
ಈ ಕುರಿತು ಸ್ಟೀಲ್ ಉದ್ಯಮಿ ವಿಕಾಸ್ ಗುಪ್ತಾ ಎಂಬುವವರು ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ, ಅವರ ಮನೆಯಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ಜಿತೇಂದ್ರನನ್ನು ಬಂಧಿಸಿದ್ದು, ಆತನಿಂದ 40 ಲಕ್ಷ ರೂ. ಮೌಲ್ಯದ ವಜ್ರ ಹಾಗೂ ಚಿನ್ನಾಭರಣಗಳು ಹಾಗೂ ಕದ್ದೊಯ್ದಿದ್ದ ಹಣ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು.
Related Articles
Advertisement
ಜಿತೇಂದ್ರ ಇದ್ದಕ್ಕಿದ್ದಂತೆ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದರಿಂದ ಅನುಮಾನಗೊಂಡ ಪೊಲೀಸರು ತನಿಖೆ ಚುರುಕುಕೊಳಿಸಿದ್ದರು. ಕಳವು ಮಾಡಿದ ದಿನ ರೈಲಿನ ಮೂಲಕ ಚೆನ್ನೈಗೆ ತೆರಳಿದ್ದ ಆರೋಪಿ ಎರಡು ದಿನ ಅಲ್ಲಿಯೇ ಉಳಿದುಕೊಂಡು, ಪುನ: ಯಶವಂತಪುರಕ್ಕೆ ಬಂದು ಅಲ್ಲಿಂದ ಪಾಟ್ನಾ ತೆರಳಲು ಆಗಮಿಸಿದ್ದ ಬಗ್ಗೆ ಮಾಹಿತಿ ಪಡೆದ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು.
ಬ್ಯಾಗ್‌ನಲ್ಲಿಯೇ ಇತ್ತು ಆಭರಣ!: ಆರೋಪಿ ಜಿತೇಂದ್ರನಿಗೆ ಇಲ್ಲಿಯೇ ಆಭರಣ ಮಾರಾಟ ಮಾಡಿದರೆ ಸಿಕ್ಕಿಬೀಳುವ ಭಯವಿತ್ತು. ಹೀಗಾಗಿ ಚೆನೈಗೆ ತೆರಳಿದ್ದ ಅಲ್ಲಿ ಭಾಷೆ ಸಮಸ್ಯೆಯಾಗಿದ್ದರಿಂದ, ಪಾಟ್ನಾದಲ್ಲಿಯೇ ಮಾರಾಟ ಮಾಡಿ ಸೆಟಲ್ ಆಗುವ ಯೋಜನೆ ರೂಪಿಸಿದ್ದೆ ಎಂದು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ . ಹೀಗಾಗಿ, ಬ್ಯಾಗ್‌ನಲ್ಲಿಯೂ ಅಷ್ಟೂ ಆಭರಣ ಇಟ್ಟುಕೊಂಡಿದ್ದ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದರು.