Advertisement

PM ಮೋದಿ ನೇತೃತ್ವದಲ್ಲಿ ದೇಶ ಶಾಂತಿಯುತ: ವರದಿ

11:01 PM Jun 15, 2023 | Team Udayavani |

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತಾವಧಿಯಲ್ಲಿ ದಂಗೆಗಳ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದ್ದು, 5 ದಶಕಗಳಲ್ಲೇ ಮೋದಿ ಆಡಳಿತಾವಧಿಯಲ್ಲಿ ದೇಶ ಅತ್ಯಂತ ಶಾಂತಿಯುತವಾಗಿದೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯುರೋ (ಎನ್‌ಸಿಆರ್‌ಬಿ) ವರದಿಯಲ್ಲಿ ತಿಳಿಸಿದೆ.

Advertisement

ಪ್ರಧಾನಮಂತ್ರಿ ಆರ್ಥಿಕಾ ಸಲಹಾ ಮಂಡಳಿಯ ಸದಸ್ಯರಾದ ಪ್ರೊ| ಶಮಿಕಾ ರವಿ ಎನ್‌ಸಿಆರ್‌ಬಿ ವರದಿಯನ್ನು ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಆ ಪ್ರಕಾರ, 1980ರಲ್ಲಿ ದೇಶದಲ್ಲಿ ದಂಗೆಗಳು ತೀವ್ರವಾಗಿತ್ತು. 1990ರಲ್ಲಿ ಈ ಪ್ರಮಾಣ ಕಡಿಮೆಯಾಗುತ್ತಾ ಬಂದಿದೆ. 2021ರಲ್ಲಿ ದೇಶದಲ್ಲೇ ಅತೀ ಕಡಿಮೆ ದಂಗೆ ವರದಿಯಾಗಿದೆ. ಇತ್ತೀಚಿನ ವರ್ಷಗಳ ಅತ್ಯಂತ ದೊಡ್ಡ ದಂಗೆ ಎಂದರೆ ಅದು 2020ರ ದೆಹಲಿ ಗಲಭೆ ಎಂದು ವರದಿಯಲ್ಲಿ ತಿಳಿಸಿದೆ.

ಮಣಿಪುರ ಗಲಭೆ ಬಗ್ಗೆ:
ಪ್ರಸಕ್ತ ಮಣಿಪುರದಲ್ಲಿ ಹಿಂಸಾಚಾರ ನಡೆಯುತ್ತಿದ್ದು, ಇದು ಸ್ಥಳೀಯ ಜಾತಿ ವಿವಾದಗಳಿಂದ ಶುರುವಾಗಿ ಉಗ್ರಗಾಮಿಗಳ ಕೈವಾಡವೂ ಸೇರ್ಪಡೆಗೊಂಡಿರುವ ಹಿನ್ನೆಲೆ ದಂಗೆ ಎನ್ನಲಾಗದು. ಆದರೆ, ದೆಹಲಿ ದಂಗೆ ಬಳಿಕ ದೇಶ ಕಾಣುತ್ತಿರುವ ದೊಡ್ಡ ಹಿಂಸಾಚಾರ ಇದೇ ಆಗಿದೆ.

ಮನಮೋಹನ್‌ ಕಾಲದಲ್ಲಿ ದಂಗೆ ಹೆಚ್ಚು
ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇರಿ ಅವರ ಆಡಳಿತದ ಬಳಿಕ, 2005ರಿಂದ 2014ರ ವರೆಗೆ ಕಾಂಗ್ರೆಸ್‌ನ ಮನಮೋಹನ್‌ ಸಿಂಗ್‌ ಅವರ ಅಧಿಕಾರವಧಿಯಲ್ಲಿ ಗಲಭೆಗಳ ಪ್ರಮಾಣ ತೀವ್ರವಾಗಿತ್ತೆಂದು ದತ್ತಾಂಶಗಳು ತೋರಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next