Advertisement

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು

03:33 PM Dec 19, 2024 | Team Udayavani |

ಮುಂಬೈ: ಬುಧವಾರ ಮಧ್ಯಾಹ್ನ ಮುಂಬೈಯಲ್ಲಿರುವ ಗೇಟ್ ವೇ ಆಫ್ ಇಂಡಿಯಾ ಬಳಿ ಸಂಭವಿಸಿದ ಭೀಕರ ದೋಣಿ ದುರಂತದಲ್ಲಿ ಸುಮಾರು ಹದಿಮೂರು ಮಂದಿ ಸಾವನ್ನಪ್ಪಿದ್ದು ನೂರಕ್ಕೂ ಹೆಚ್ಚು ಮಂದಿಯನ್ನು ರಕ್ಷಣೆ ಮಾಡಲಾಗಿದೆ ಎಂದು ಹೇಳಲಾಗಿದ್ದು ಇನ್ನು ಈ ದುರಂತದಲ್ಲಿ ಮೃತಪಟ್ಟವರಲ್ಲಿ ನಾಸಿಕ್ ನ ಒಂದೇ ಕುಟುಂಬದ ಮೂವರು (ಪತಿ, ಪತ್ನಿ ಮತ್ತು ಮಗು) ಸೇರಿರುವ ಮಾಹಿತಿ ಲಭ್ಯವಾಗಿದೆ.

Advertisement

ಮೃತರನ್ನು ನಾಸಿಕ್ ಜಿಲ್ಲೆಯ ಪಿಂಪಲ್‌ಗಾಂವ್‌ನ ನಿವಾಸಿ ರಾಕೇಶ್ ನಾನಾ ಅಹೆರ್, ಆತನ ಪತ್ನಿ ಹಾಗೂ ಪುತ್ರ ಎನ್ನಲಾಗಿದೆ.

ರಾಕೇಶ್ ಕಳೆದ ಕೆಲ ದಿನಗಳಿಂದ ಅಸ್ತಮಾ ಕಾಯಿಲೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ ಆದ ಕಾರಣ ಚಿಕಿತ್ಸೆ ಪಡೆದುಕೊಂಡು ಬರಲು ಪತ್ನಿ, ಪುತ್ರನೊಂದಿಗೆ ಮುಂಬೈಗೆ ತೆರಳಿದ್ದರು. ಅದರಂತೆ ಬುಧವಾರ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಇನ್ನು ಹೇಗೂ ಊರಿಗೆ ಬರುವ ಮೊದಲು ಮಗು ಹಾಗೂ ಪತ್ನಿಗೆ ಎಲಿಫೆಂಟಾ ದ್ವೀಪ ತೋರಿಸುವ ಎಂದು ಕರೆದುಕೊಂಡು ಹೋಗಿ ಗೇಟ್‌ವೇ ಆಫ್ ಇಂಡಿಯಾ ಬಳಿ ನೀಲ್ ಕಮಲ್ ದೋಣಿ ಹತ್ತಿದ್ದಾರೆ ಕೆಲ ದೂರ ಕ್ರಮಿಸುವಷ್ಟರಲ್ಲಿ ನೌಕಾಪಡೆಯ ಸ್ಪೀಡ್ ಬೋಟ್ ಎಲಿಫೆಂಟಾ ದ್ವೀಪಕ್ಕೆ ಕರೆದೊಯ್ಯುತ್ತಿದ್ದ ನೂರಕ್ಕೂ ಹೆಚ್ಚು ಜನರಿದ್ದ ನೀಲ್ ಕಮಲ್ ಬೋಟ್ ನ ಒಂದು ಬದಿಗೆ ಡಿಕ್ಕಿ ಹೊಡೆದಿದೆ ಪರಿಣಾಮ ಸ್ಪೀಡ್ ಬೋಟ್ ನಲ್ಲಿದ್ದ ಮೂವರು ಮೃತಪಟ್ಟರೆ ಡಿಕ್ಕಿ ಹೊಡೆದ ರಭಸಕ್ಕೆ ನೀಲ್ ಕಮಲ್ ಬೋಟ್ ಸಮುದ್ರದ ಮಧ್ಯೆ ಮುಳುಗಲು ಆರಂಭಿಸಿದೆ.

ಇತ್ತ ಬೋಟ್ ಮುಳುಗುತಿದ್ದಂತೆ ರಕ್ಷಣೆಗಾಗಿ ಬೋಟ್ ನಲ್ಲಿದ್ದ ಪ್ರಯಾಣಿಕರು ಬೊಬ್ಬೆ ಹೊಡೆದಿದ್ದಾರೆ ಆದರೆ ಸಮುದ್ರದ ಮಧ್ಯದಲ್ಲಿ ನಡೆದ ಘಟನೆ ಆಗಿದ್ದರಿಂದ ಕೂಡಲೇ ರಕ್ಷಣೆಗೆ ಬರಲು ಸಾಧ್ಯವಾಗಲಿಲ್ಲ ಬಳಿಕ ಕೋಸ್ಟ್ ಗಾರ್ಡ್ ಮತ್ತು ಮರೈನ್ ಪೊಲೀಸರು ಹಾಗೂ ಸ್ಥಳೀಯ ಮೀನುಗಾರರು ಸೇರಿ ಮುಳುಗುತ್ತಿದ್ದ ಬೋಟ್ ನಲ್ಲಿದ್ದ ಹೆಚ್ಚಿನವರನ್ನು ರಕ್ಷಣೆ ಮಾಡಿದ್ದಾರೆ ಆದರೂ ನಾಸಿಕ್ ನ ರಾಕೇಶ್ ಕುಟುಂಬದ ಮೂವರು ಸೇರಿದಂತೆ ಘಟನೆಯಲ್ಲಿ ಹದಿಮೂರು ಮಂದಿ ಮೃತಪಟ್ಟಿದ್ದಾರೆ.

Advertisement

ಸ್ಪೀಡ್ ಬೋಟ್ ನಲ್ಲಿ ತಾಂತ್ರಿಕ ದೋಷ:
ಇನ್ನು ಸ್ಪೀಡ್ ಬೋಟ್ ಅವಘಡಕ್ಕೆ ಕಾರಣವನ್ನು ವಿವರಿಸಿದ ನೌಕಾಪಡೆ ಬೋಟ್ ನ ಎಂಜಿನ್ ನಲ್ಲಿ ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆಯಲ್ಲಿ ಸ್ಪೀಡ್ ಬೋಟನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ ಹಾಗಾಗಿ ಪ್ರವಾಸಿಗರಿದ್ದ ದೋಣಿಗೆ ಡಿಕ್ಕಿ ಹೊಡೆದಿದೆ ಎಂದು ಹೇಳಿದ್ದಾರೆ.

ಇನ್ನೂ ಮೂವರು ನಾಪತ್ತೆ:
ಬುಧವಾರ ಸಂಭವಿಸಿದ ದೋಣಿ ದುರಂತದಲ್ಲಿ ಇನ್ನೂ ಮೂವರು ನಾಪತ್ತೆಯಾಗಿರುವುದಾಗಿ ಮುಂಬೈ ಪೊಲೀಸರು ಗುರುವಾರ ಮಾಹಿತಿ ನೀಡಿದ್ದಾರೆ, ಮಗು ಸೇರಿ ಇಬ್ಬರು ಪ್ರಯಾಣಿಕರು ನಾಪತ್ತೆಯಾಗಿರುವುದಾಗಿ ಮಾಹಿತಿ ನೀಡಿದ್ದಾರೆ. ನಾಪತ್ತೆಯಾದವರಲ್ಲಿ 43 ವರ್ಷದ ಹಂಸರಾಜ್ ಭಾಟಿ ಹಾಗೂ ಏಳು ವರ್ಷದ ನಿಸ್ಸಾರ್ ಅಹಮ್ಮದ್ ಪಠಾಣ್ ಎನ್ನಲಾಗಿದೆ. ರಕ್ಷಣಾ ತಂಡ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next