ಕರ್ನಾಟಕಕ್ಕಾಗಿ ಕೇಂದ್ರ ಸರ್ಕಾರ 1,500 ಕೋಟಿ ರೂ.ಗಿಂತ ಅಧಿಕ ಹಣ ಖರ್ಚು ಮಾಡಿದೆ ಎಂದು ಕೇಂದ್ರ ಸಂಹವನ
ಖಾತೆ (ಸ್ವತಂತ್ರ ಖಾತೆ) ರಾಜ್ಯ ಸಚಿವ ಮನೋಜ್ ಸಿನ್ಹ ತಿಳಿಸಿದರು.
Advertisement
ನಗರದ ಹೋಟೆಲ್ ಲಲಿತ್ ಅಶೋಕ್‌ನಲ್ಲಿ ಗುರುವಾರ ಭಾರತ್ ಸಂಚಾರ್ ನಿಗಮ ಲಿ., (ಬಿಎಸ್‌ಎನ್‌ಎಲ್)ಹಮ್ಮಿಕೊಂಡಿದ್ದ “ಎನ್‌ಎಂಎಸ್- ಬ್ರಾಡ್‌ಬ್ಯಾಂಡ್’ ಮತ್ತು “ಎನ್‌ಎಂಎಸ್- ಎಂಪಿಎಲ್‌ಎಸ್’ ವ್ಯವಸ್ಥೆ ಲೋಕಾರ್ಪಣೆ
ಮಾಡಿ ಮಾತನಾಡಿದರು.
ಹಲವು ಗುಣಮಟ್ಟದ ಸೇವೆಗಳಿಗೆ ಈ ಹಣ ವಿನಿಯೋಗಿಸಲಾಗಿದೆ. ಇನ್ನೂ ಸಾಕಷ್ಟು ಪ್ರಗತಿ ಸಾಧಿಸಬೇಕಿದೆ. ಈ ನಿಟ್ಟಿನಲ್ಲಿ ಬಿಎಸ್‌ಎನ್‌ಎಲ್ ಮುಂದಿನ ದಿನಗಳಲ್ಲಿ ಕಾರ್ಯನಿರ್ವಹಿಸಲಿದೆ ಎಂಬ ವಿಶ್ವಾಸ ಇದೆ ಎಂದರು. ಡಿಜಿಟಲ್ ಜವಾಬ್ದಾರಿ: ಸರ್ಕಾರದ ಕನಸು “ಡಿಜಿಟಲ್ ಇಂಡಿಯಾ’ ಸಾಕಾರಗೊಳ್ಳುವಲ್ಲಿ ಬಿಎಸ್‌ಎನ್‌ಎಲ್
ಜವಾಬ್ದಾರಿ ಹೆಚ್ಚಿದೆ. ಇದನ್ನು ಇಲಾಖೆ ಸಮರ್ಥವಾಗಿ ನಿಭಾಯಿಸಲಿದೆ ಎಂದು ಸಚಿವ ಮನೋಜ್ ಸಿನ್ಹ ವಿಶ್ವಾಸ
ವ್ಯಕ್ತಪಡಿಸಿದರು. ದೇಶದ ಒಂದು ಲಕ್ಷ ಗ್ರಾಮಗಳಲ್ಲಿ ಬ್ರಾಡ್‌ಬ್ಯಾಂಡ್ ಸಂಪರ್ಕ ಕಲ್ಪಿಸುವ ಯೋಜನೆ ಈಗಾಗಲೇ
ಕೈಗೆತ್ತಿಕೊಂಡಿದ್ದು, ಇದರಡಿ ಕೈಗೆತ್ತಿಕೊಂಡ ರಾಜ್ಯದ ಗ್ರಾಮಗಳಿಗೆ ಬ್ರಾಡ್‌ಬ್ಯಾಂಡ್ ಸಂಪರ್ಕ ಕಲ್ಪಿಸುವ ಕೆಲಸ
ಬಹುತೇಕ ಪೂರ್ಣಗೊಂಡಿದೆ. ಎರಡನೇ ಹಂತದಲ್ಲಿ ಒಂದೂವರೆ ಲಕ್ಷ ಗ್ರಾಮಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ
ಎಂದು ಮಾಹಿತಿ ನೀಡಿದರು.
Related Articles
Advertisement