Advertisement
ತಾಲೂಕಿನ ಬಿಳಿಕೆರೆ ಹೋಬಳಿಯ ಕರಿಮುದ್ದನಹಳ್ಳಿ, ಸಿಂಗರಮಾರನಹಳ್ಳಿ ಗ್ರಾಪಂ ಹಾಗೂ ಕಸಬಾ ಹೋಬಳಿಯ ಉಯಿಗೊಂಡನಹಳ್ಳಿ ಗ್ರಾಪಂ ವ್ಯಾಪ್ತಿಯ ಬಹುತೇಕ ಗ್ರಾಮಗಳಲ್ಲಿನ ರೈತರು ಹೊಲಗಳಲ್ಲಿ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಲ್ಪಟ್ಟ ಮುಸುಕಿನ ಜೋಳಕ್ಕೆ ಬಿಳಿಸುಳಿ (ಬೂಜು) ರೋಗ ಕಾಣಿಸಿಕೊಂಡಿದ್ದು, ಬೆಳೆಯ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿವೆ.
Related Articles
Advertisement
ಹವಾಮಾನ ವೈಪರಿತ್ಯ ಕಾರಣ: ಈ ಬಗ್ಗೆ ಮಾಹಿತಿ ನೀಡಿರುವ ಕೃಷಿ ಇಲಾಖೆ ವಾತಾವರಣದಲ್ಲಿ ತೇವಾಂಶ ಜಾಸ್ತಿ ಹೊಂದಿದ್ದು ಆಗಾಗ ಬಿಸಿಲು ಕಾಣಿಸಿ ಕೊಳ್ಳುವುದರಿಂದ ಇಂತಹ ಹವಾಮಾನ ವೈಪರಿತ್ಯತದಿಂದ ಪೆರೊ°àಸ್ಕೆ ರೋನ್ಪೋರ ಸೊರಿ ಎಂಬ ಶಿಲೀಂದ್ರ(ಕೀಟ)ದಿಂದ ಎಲೆಗಳ ತಳಭಾಗದಲ್ಲಿ ಬಿಳಿಯ ಶಿಲೀಂದ್ರದ ಬೆಳವಣಿಗೆ ಕಂಡುಬರುತ್ತದೆ ಹಾಗೂ ಸಸಿಗಳು ಹಳದಿ ಬಣ್ಣಕ್ಕೆ ತಿರುಗಿ ಗಿಡದ ಬೆಳವಣಿಗೆ ಕುಂಟಿತವಾಗುತ್ತದೆ.
ರೋಗ ನಿರ್ವಹಣೆಗೆ ಕ್ರಮ: ಬಿಳಿಸುಳಿ ರೋಗ ಕಾಣಿಸಿಕೊಂಡ ಬೆಳೆಗೆ ಪ್ರತಿ ಲೀ.ನೀರಿಗೆ ಮೆಟಲಾಕ್ಸಿಲ್ ಶೇ.4 ಮತ್ತು ಮ್ಯಾಂಕೊಜೆಬ್ ಶೇ.64 ಸಂಯುಕ್ತ ಶಿಲೀಂದ್ರನಾಶಕವನ್ನು 2 ಗ್ರಾಂ ಬೆರೆಸಿ 1 ಎಕರೆಗೆ 300 ರಿಂದ 400 ಲೀ.ದ್ರಾವಣವನ್ನು ತಯಾರಿಸಿ, ತಿಂಗಳಿಗೆ ಎರಡು ಬಾರಿ ಸಿಂಪಡಣೆ ಮಾಡುವುದರಿಂದ ಬೆಳೆ ರೋಗದಿಂದ ಕಾಪಾಡಿಕೊಳ್ಳಬಹುದು.
ಮುನ್ನೆಚ್ಚರಿಕೆ ಕ್ರಮ: ಏಕಬೆಳೆ ಪದ್ಧತಿ ಅನುಸರಿಸದೆ ಬೆಳೆ ಪರಿವರ್ತನೆ ಮಾಡಬೇಕು. ಬಿತ್ತನೆ ಸಮಯದಲ್ಲಿ ಪ್ರತಿ ಎಕರೆಗೆ 5 ಕೆ.ಜಿ. ಜಿಂಕ್ ಸಲ್ಫೆàಟ್‌ನ್ನು ಮಣ್ಣಿನಲ್ಲಿ ಸೇರಿಸುವುದು. ಶಿಫಾರಸು ಮಾಡಿರುವ ಪ್ರಕಾರ ಪ್ರತಿ ಎಕರೆಗೆ 30 ಕೆ.ಜಿ. ಪೊಟ್ಯಾಷ್ ಗೊಬ್ಬರ ಹಾಕಬೇಕು. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರ ಹಾಗೂ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಸಂಪರ್ಕಿಸಿರೆಂದು ಸಹಾಯಕ ನಿರ್ದೇಶಕ ವೆಂಕಟೇಶ್ ತಿಳಿಸಿದ್ದಾರೆ.
* ಸಂಪತ್ ಕುಮಾರ್