ಪುಣೆ: ಪುಣೆಯ ಪ್ರತಿಷ್ಠಿತ ರಾಯಲ್ ಕೊನೊಟ್ ಬೋಟ್ ಕ್ಲಬ್‌ನಲ್ಲಿ ಆ. 15ರಂದು 75ನೇ ಸ್ವಾತಂತ್ರ್ಯೋತ್ಸವವನ್ನು ಕೋವಿಡ್ ಮಾರ್ಗಸೂಚಿ ಗಳಿಗೆ ಅನುಗುಣವಾಗಿ ವಿಜೃಂಭಣೆಯಿಂದ ಆಚರಿಸಲಾಯಿತು.
ಬೋಟ್ ಕ್ಲಬ್‌ನ ಅಧ್ಯಕ್ಷ ಮೊಳಹಳ್ಳಿ ಬಾಲಕೃಷ್ಣ ಹೆಗ್ಡೆ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೆಳಗ್ಗೆ ಧ್ವಜಾರೋ ಹಣವನ್ನು ನೆರವೇರಿಸ ಲಾಯಿತು. ಬಳಿಕ ಬಾಲಕೃಷ್ಣ ಹೆಗ್ಡೆ ಅವರ ಅಧ್ಯಕ್ಷೀಯ ಕಾಲಾವಧಿಯಲ್ಲಿ ನಿರ್ಮಿಸಿದ ನೂತನ ಕಟ್ಟಡದ ಉದ್ಘಾಟನೆಯನ್ನು ಸ್ವತಃ ಅಧ್ಯಕ್ಷರು ರಿಬ್ಬನ್ ತುಂಡರಿಸುವ ಮೂಲಕ ನೆರವೇರಿಸಿದರು.
ಈ ಸಂದರ್ಭ ಬಾಲಕೃಷ್ಣ ಹೆಗ್ಡೆ ಮಾತನಾಡಿ, 75ನೇ ಸ್ವಾತಂತ್ರ್ಯೋತ್ಸವ ಆಚರಣೆಯಲ್ಲಿ ನಾವೆಲ್ಲರೂ ಭಾಗಿಗಳಾ ಗಿರುವುದು ಸಂತಸ ತಂದಿದೆ. ಎಲ್ಲರಿಗೂ ಸ್ವಾತಂತ್ರ್ಯೋತ್ಸವದ ಶುಭಾಶಯಗಳು. ಕ್ಲಬ್‌ನ ಸದಸ್ಯರಿಗೆ ಅತ್ಯಾಧುನಿಕ ಸೌಕರ್ಯ ವನ್ನು ನೀಡುವ ನೂತನ ಕಟ್ಟಡವನ್ನು ಇಂದು ಉದ್ಘಾಟಿಸಿರುವುದಕ್ಕೆ ಹೆಮ್ಮೆಯಾಗುತ್ತಿದೆ. ಈ ನೂತನ ಕಟ್ಟಡದಲ್ಲಿ ಸುಮಾರು 600 ಮಂದಿ ಸೇರುವಂತಹ ಬಾಂಕ್ವೆಟ್ ಹಾಲ್, 240 ಮಂದಿ ಆಸೀನರಾಗುವಂತಹ ರೆಸ್ಟೋರೆಂಟ್, ಲಾಂಜ್‌ಬಾರ್, ಟೆರೇಸ್ ಗಾರ್ಡನ್ ಒಳಗೊಂಡಿದ್ದು, ಸುಸಜ್ಜಿತ ವಾಗಿ ನಿರ್ಮಾಣಗೊಂಡಿದೆ. ಸಹಕಾರ ನೀಡಿದ ಕ್ಲಬ್‌ನ ಮಾಜಿ ಅಧ್ಯಕ್ಷರು, ಪದಾಧಿಕಾರಿಗಳೆಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ನಿಮ್ಮೆಲ್ಲರ ಸಹಕಾರದಿಂದ ಕ್ಲಬ್‌ನ ಅಭಿವೃದ್ಧಿ ಕಾರ್ಯಗಳು ಮುಂದುವರಿಯಲಿದೆ ಎಂದರು.
ಇದನ್ನೂ ಓದಿ:ಇನ್ನೂ ಬಾರದ ಜಾಮೀನು ಆದೇಶ ಪ್ರತಿ: ಇನ್ನೊಂದು ದಿನ ಜೈಲಲ್ಲೇ ವಿನಯ್ ಕುಲಕರ್ಣಿ ವಾಸ್ತವ್ಯ
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಹಾರಾಷ್ಟ್ರ ವಿಧಾನ ಪರಿಷತ್ ಸದಸ್ಯ ಶರದ್ ರನಿ³ಸೆ, ಪುಣೆ ಹಾಗೂ ಮುಂಬಯಿ ಕ್ಲಬ್ಸ್ ಅಸೋಸಿಯೇಶನ್ ಅಧ್ಯಕ್ಷ ಸ್ವಸ್ತಿಕ್ ಶಿರ್ಸಿಕರ್, ಪುಣೆ ಕನ್ನಡ ಸಂಘದ ಅಧ್ಯಕ್ಷ ಕುಶಲ್ ಹೆಗ್ಡೆ, ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್‌ಬೆಟ್ಟು, ಬಂಟ್ಸ್ ಅಸೋಸಿಯೇಶನ್ ಪುಣೆ ಮಾಜಿ ಅಧ್ಯಕ್ಷ ನಾರಾಯಣ ಶೆಟ್ಟಿ, ಪಿಂಪ್ರಿ-ಚಿಂಚಾಡ್ ಬಂಟರ ಸಂಘದ ಅಧ್ಯಕ್ಷ ವಿಜಯ್ ಶೆಟ್ಟಿ ಬೋರ್ಕಟ್ಟೆ ಶುಭ ಹಾರೈಸಿದರು.
ಪೂನಾ ಕ್ಲಬ್ ಅಧ್ಯಕ್ಷ ನಿತಿನ್ ದೇಸಾಯಿ, ಟರ್ಫ್ ಕ್ಲಬ್ ಉಪಾಧ್ಯಕ್ಷ ಸುರೇಂದರ್, ಸನಾಸ್ ಲೇಡಿಸ್ ಕ್ಲಬ್ ಅಧ್ಯಕ್ಷರಾದ ಬೋಮಿ ತಲಾವಿಯ, ಪಾರ್ಸಿ ಜಿಮ್ಕಾನ ಅಧ್ಯಕ್ಷರಾದ ಮಿನೂ ಇರಾನಿ, ಪಿವೈಸಿ ಕ್ಲಬ್ ಅಧ್ಯಕ್ಷರಾದ ಡಾ| ಭಾಟೆ, ಪುಣೆ ಬಂಟರ ಸಂಘದ ಪದಾಧಿಕಾರಿಗಳು, ಬೋಟ್ ಕ್ಲಬ್‌ನ ಮಾಜಿ ಅಧ್ಯಕ್ಷರು ಉಪಸ್ಥಿತರಿದ್ದರು. ಅತಿಥಿಗಳನ್ನು ಅಧ್ಯಕ್ಷ ಬಾಲಕೃಷ್ಣ ಹೆಗ್ಡೆ ಗೌರವಿಸಿದರು. ಬಾಲಕೃಷ್ಣ ಹೆಗ್ಡೆ ಹಾಗೂ ಶಶಿ ಹೆಗ್ಡೆ ದಂಪತಿಯನ್ನು ಕ್ಲಬ್ ವತಿಯಿಂದ ಸಮ್ಮಾನಿಸಲಾಯಿತು.