Advertisement

ಬಿಜೆಪಿ ಅಲೆಗೆ ಕೊಚ್ಚಿ ಹೋಗಲಿದೆ ಕಾಂಗ್ರೆಸ್‌

01:13 PM May 11, 2018 | |

ತಾಳಿಕೋಟೆ: 25 ವರ್ಷಗಳ ಕಾಂಗ್ರೆಸ್‌ ದುರಾಡಳಿತಕ್ಕೆ ಬೇಸತ್ತಿರುವ ಜನರು ಬದಲಾವಣೆ ಬಯಸಿದ್ದಾರೆ. ಕ್ಷೇತ್ರದಲ್ಲಿ
ಸೃಷ್ಟಿಯಾಗಿರುವ ಬಿಜೆಪಿ ಸುನಾಮಿ ಅಲೆಗೆ ಕಾಂಗ್ರೆಸ್‌ ಪಕ್ಷ ಬುಡಸಮೇತ ಕೊಚ್ಚಿ ಹೋಗಲಿದೆ ಎಂದು ಮುದ್ದೇಬಿಹಾಳ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎ.ಎಸ್‌.ಪಾಟೀಲ(ನಡಹಳ್ಳಿ) ಹೇಳಿದರು.

Advertisement

ಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿ ಎ.ಎಸ್‌.ಪಾಟೀಲ(ನಡಹಳ್ಳಿ) ಪ್ರಚಾರಾರ್ಥವಾಗಿ ದಶರಥ್‌ಸಿಂಗ್‌ ಮನಗೂಳಿ, ದಲಿತ ಮುಖಂಡ ಮುತ್ತಪ್ಪ ಚಮಲಾಪುರ ಅವರ ನೇತೃತ್ವದಲ್ಲಿ ರೋಡ್‌ ಶೋ ನಂತರ ನಡೆದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು. 

25 ವರ್ಷಗಳ ಆಳ್ವಿಕೆ ನಡೆಸಿರುವ ಕಾಂಗ್ರೆಸ್‌ ಶಾಸಕ ಸಿ.ಎಸ್‌. ನಾಡಗೌಡ ಅವರ ಅಭಿವೃದ್ಧಿ ಕೊಡುಗೆ ಶೂನ್ಯವಾಗಿದೆ. ಕ್ಷೇತ್ರದ ಪ್ರತಿ ಗ್ರಾಮ, ಪಟ್ಟಣಗಳಲ್ಲಿ ಸಂಚರಿಸಿದರೆ ನೆಲದಿಂದ ದೂಳೆದ್ದು ಮೈಗೆ ಅಂಟಿಕೊಳ್ಳುತ್ತದೆ ಜನರಿಗೆ ಮುಖ್ಯವಾಗಿ ಒದಗಿಸಬೇಕಾದ ಮೂಲಸೌಕರ್ಯ ಒದಗಿಸಲು ಅವರಿಂದ ಆಗಿಲ್ಲ. ಭ್ರಷ್ಟಾಚಾರಕ್ಕೆ ಇನ್ನೊಂದು ಮುಖವೇ ನಾಡಗೌಡರು ಎಂದು ಆರೋಪಿಸಿದರು.

ತಾಳಿಕೋಟೆ ಮತ್ತು ಮುದ್ದೇಬಿಹಾಳದಲ್ಲಿ ಬಡವರಿಗೆ ಮನೆ ನೀಡುತ್ತೇವೆ ಎಂದು ಪ್ರತಿ ಬಡಕುಟುಂಬಸ್ತರಿಂದ 50 ಸಾವಿರ ರೂ. ಹಣ ಲೂಟಿ ಹೊಡೆದಿದ್ದಾರೆ. ಹಣ ಪಡೆದು 1 ವರ್ಷ ಗತಿಸಿದರೂ ಮನೆ ಹಂಚಿಕೆ ಮಾಡ್ಲಿ. ಇದರ ಅರ್ಥ ಚುನಾವಣೆಗೆ ಅಕ್ರಮ ಹಣ ಸಂಗ್ರಹಣೆ ದಾರಿ ಎಂಬುದು ಗೋಚರಿಸುತ್ತದೆ ಎಂದು ಆರೋಪಿಸಿದರು.

ಬಡತನದಲ್ಲಿಯೇ ಹುಟ್ಟಿ ಬೆಳೆದ ನಾನು ಚಟ್ನಿ ರೊಟ್ಟಿ ತಿಂದು ಶಿಕ್ಷಣ ಪಡೆದಿದ್ದೇನೆ. ಹೀಗಾಗಿ ಬಡವರಿಗಾಗಿ ದಿನದ 24 ಗಂಟೆಯೂ ನನ್ನ ಮನೆಬಾಗಿಲು ತೆರೆದೇ ಇರುತ್ತದೆ. ಬಡವರ ಸೇವೆಯೇ ದೇವರ ಸೇವೆ ಎಂದು ನಂಬಿದವನಾಗಿದ್ದೇನೆ ಎಂದು ಹೇಳಿದರು.

Advertisement

ಅಂಬೇಡ್ಕರ್‌ ಸರ್ಕಲ್‌ದಿಂದ ಪ್ರಾರಂಭವಾದ ರೋಡ್‌ ಶೋ ಅಂಬಾಭವಾನಿ ಮಂದಿರ ರಸ್ತೆ, ಕತ್ರಿ ಬಜಾರ, ರಾಜವಾಡೆ ತಲುಪಿ ಮರಳಿ ಅದೇ ಮಾರ್ಗವಾಗಿ ವಿಠ್ಠಲ ಮಂದಿರ ರಸ್ತೆ, ಮಹಾರಾಣಾಪ್ರತಾಪ ಸರ್ಕಲ್‌ ಮೂಲಕ ವಿಜಯಪುರ ಸರ್ಕಲ್‌ಕ್ಕೆ ತಲುಪಿತು. ಸೈದುಸಾಬ್‌ ನಮಾಜಕಟ್ಟಿ, ನಿರಂಜನಶಾ ಮಕಾಂದಾರ, ವಿಶ್ವನಾಥ ಬಬಲೇಶ್ವರ, ಸುರೇಶ ಹಜೇರಿ, ಮಂಜು ಶೆಟ್ಟಿ, ರಾಘವೇಂದ್ರ ಚವ್ಹಾಣ, ದತ್ತು ಹೆಬಸೂರ, ಪ್ರಭು ಬಿಳೇಭಾವಿ, ಕಾಶಿನಾಥ ಮುರಾಳ, ಈಶ್ವರ ಹೂಗಾರ, ಪ್ರಕಾಶ ಹಜೇರಿ, ಬಂಡು ದಾಯಪುಲೆ, ಪ್ರಕಾಶ ಸಾಸಾಬಾಳ, ಮಾನಸಿಂಗ್‌ ಕೊಕಟನೂರ, ವಿಠuಲ ಮೋಹಿತೆ, ಮುನ್ನಾ ಠಾಕೂರ, ಸಂಗಮೇಶ ಬಳಿಗಾರ, ಮಂಜು ಬಡಿಗೇರ ಒಳಗೊಂಡು ಸಾವಿರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.

ಮುದ್ದೇಬಿಹಾಳದಲ್ಲೂನಡಹಳ್ಳಿ ರೋಡ್‌ ಶೋ
ಮುದ್ದೇಬಿಹಾಳ:
ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಾಜಿ ಶಾಸಕ ಎ.ಎಸ್‌. ಪಾಟೀಲ ನಡಹಳ್ಳಿ ಪಟ್ಟಣದಲ್ಲಿ ಗುರುವಾರ ರೋಡ್‌ ಶೋ ನಡೆಸಿ ಮತಯಾಚಿಸಿದರು. ಬನಶಂಕರಿನಗರದಿಂದ ಇಂದಿರಾ ವೃತ್ತ, ಮುಖ್ಯರಸ್ತೆ, ಬಸವೇಶ್ವರ, ಅಂಬೇಡ್ಕರ್‌ ವೃತ್ತ ಮಾರ್ಗವಾಗಿ ತಮ್ಮ ದಾಸೋಹ ನಿಲಯದವರೆಗೆ ತೆರೆದ ವಾಹನದ ಮೂಲಕ ತೆರಳಿ ಮತಯಾಚಿಸಿದರು. ರೋಡ್‌ ಶೋ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತಕ್ಷೇತ್ರದಲ್ಲಿ ತಮಗೆ ಹೆಚ್ಚಿನ ಬೆಂಬಲ ವ್ಯಕ್ತಬಾಗಿದೆ. 

ಅಂದಾಜು 50 ಸಾವಿರ ಮತಗಳ ಅಂತರದಿಂದ ಗೆಲ್ಲುವ ವುದಾಗಿ ವಿಶ್ವಾಸ ವ್ಯಕ್ತಪಡಿಸಿದರು. ಮತಕ್ಷೇತ್ರದ ಎಲ್ಲ ವ್ಯಾಪಾರಸ್ಥರು ನನ್ನನ್ನು ಬೆಂಬಲಿಸುವ ಭರವಸೆ ನೀಡಿದ್ದಾರೆ. ನನ್ನ ಬಗ್ಗೆ ವ್ಯಾಪಾರಸ್ಥರಲ್ಲಿ ಕಾಂಗ್ರೆಸ್‌ ಅಪಪ್ರಚಾರದ ಮೂಲಕ ಮೂಡಿಸಿದ್ದ ತಪ್ಪು ಕಲ್ಪನೆ ಹೋಗಲಾಡಿಸಿದ್ದೇನೆ. ಕಾಂಗ್ರೆಸ್‌ನವರು ತಮ್ಮ ಲಾಭಕ್ಕಾಗಿ ನನ್ನ ವಿರುದ್ಧ ಅಪಪ್ರಚಾರ ಮಾಡಿದ್ದರ ಕುರಿತು ಮನವರಿಕೆ ಮಾಡಿಕೊಟ್ಟಿದ್ದೇನೆ. ವ್ಯಾಪಾರಸ್ಥರ ಬೆಂಬಲ ನನಗೆ ಹೆಚ್ಚಿನ ಶಕ್ತಿ ನೀಡಿದಂತಾಗಿದೆ. 25 ವರ್ಷ ಅಧಿಕಾರದ ಅವ ಧಿಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಸಿ.ಎಸ್‌.ನಾಡಗೌಡರು ಮತಕ್ಷೇತ್ರದ ಅಭಿವೃದ್ಧಿ ಮಾಡಿಲ್ಲ. ಈ ಬಾರಿ ಜನರು ಬದಲಾವಣೆ ಬಯಸಿದ್ದು, ಬದಲಾವಣೆ ನನ್ನಿಂದಲೇ ಪ್ರಾರಂಭವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next