Advertisement

ಕಾಂಗ್ರೆಸ್‌ ಹಗರಣ ಬಯಲಿಗೆ ಎಳೆಯುವುದೇ ಗುರಿ

06:10 AM May 21, 2018 | Team Udayavani |

ಬಳ್ಳಾರಿ: ದಿನದ 24 ತಾಸು ಆಡಳಿತಾರೂಢ ಶಾಸಕ, ಸಚಿವರನ್ನು ಕಾಯುತ್ತಲೇ ಅವರ ಅಕ್ರಮ ಬಯಲಿಗೆಳೆದು ಬಿಜೆಪಿ ಪ್ರಬಲ ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸಲಿದೆ ಎಂದು ಮೊಳಕಾಲ್ಮೂರು ಕ್ಷೇತ್ರದ ಶಾಸಕ ಬಿ. ಶ್ರೀರಾಮುಲು ಹೇಳಿದರು.

Advertisement

ನಗರದ ತಮ್ಮ ನಿವಾಸದಲ್ಲಿ ಭಾನುವಾರ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟದೊಂದಿಗೆ ಸರ್ಕಾರ ರಚನೆಯಾಗಲಿದೆ. 104 ಕ್ಷೇತ್ರಗಳಲ್ಲಿ ಗೆಲುವು ಸಾಧಿ ಸಿದ ನಮಗೆ (ಬಿಜೆಪಿ) ವಿರೋಧ ಪಕ್ಷ ಸ್ಥಾನ ದೊರೆತಿದೆ. ಅದನ್ನು ಸಮರ್ಥವಾಗಿ ನಿಭಾಯಿಸುತ್ತೇವೆ. ಸರ್ಕಾರದ ಇಂಚಿಂಚಿನ ಅಕ್ರಮ, ಹಗರಣಗಳನ್ನು ದಾಖಲೆ ಸಮೇತ ಬಯಲಿಗೆಳೆಯುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದರು.

ಬಿಜೆಪಿಗೆ ಸ್ಪಷ್ಟ ಬಹುಮತವಿಲ್ಲದ ಕಾರಣ ಬಿ.ಎಸ್‌.ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದಿದ್ದಾರೆ ಹೊರತು, ಕಾಂಗ್ರೆಸ್‌-ಜೆಡಿಎಸ್‌ ಪಕ್ಷಗಳ ಹೋರಾಟದಿಂದಲ್ಲ. ಈಗಾಗಲೇ ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಕುಮಾರಸ್ವಾಮಿ ನೇತೃತ್ವದ ಸರ್ಕಾರ ರಚನೆಗೆ ಸಕಲ ಸಿದಟಛಿತೆ ನಡೆಸಲಾಗಿದೆ. ಉಭಯ ಪಕ್ಷಗಳಲ್ಲಿ ಈಗಾಗಲೇ ಒಳಬೇಗುದಿ ಶುರುವಾಗಿದೆ ಎಂದರು.

ಕಳೆದ ಐದು ವರ್ಷದ ಅವ ಧಿಯಲ್ಲಾದ ಹಗರಣಗಳನ್ನು ಬಯಲಿಗೆಳೆಯಲಾಗುವುದು. ಲೋಕಾಯುಕ್ತ ಸಂಸ್ಥೆಯನ್ನು
ಗೌಣವಾಗಿಸಿ, ಎಸಿಬಿಯನ್ನು ಜಾರಿಗೆ ತಂದಿರುವುದರ ಹಿಂದಿನ ಒಳಮರ್ಮವನ್ನೂ ಬಯಲಿಗೆಳೆಯುವುದಾಗಿ ಎಚ್ಚರಿಸಿದ ರಾಮುಲು, ಮೈತ್ರಿಕೂಟ ಸರ್ಕಾರದ ನಿದ್ದೆಗೆಡಿಸುವೆ. ಉಭಯ ಪಕ್ಷದ ಶಾಸಕರು, ಸಚಿವರನ್ನು ಕಾವಲು ಕಾದು ಅವರು ಮಾಡುವ ಅಕ್ರಮ ಚಟುವಟಿಕೆ, ಹಗರಣಗಳನ್ನು ಬಯಲಿಗೆ ಎಳೆಯಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next