Advertisement

‘ಅಪ್ನೀ ಬಾತ್‌ ರಾಹುಲ್‌ ಕೆ ಸಾಥ್‌’ಗೆ ಕಾಂಗ್ರೆಸ್‌ ಚಾಲನೆ

01:00 AM Feb 03, 2019 | |

ನವದೆಹಲಿ: ಮಹಾ ಚುನಾವಣೆಯ ಕಾಂಗ್ರೆಸ್‌ ಪ್ರಣಾಳಿಕೆ ಬ್ರೈಲ್‌ ಲಿಪಿಯಲ್ಲೂ ಬರಬೇಕು. ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ತೃತೀಯ ಲಿಂಗಿಗಳಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಕಲ್ಪಿಸಬೇಕು. ಶಿಕ್ಷಣದಲ್ಲಿನ ಅಸಮಾನತೆ ನಿವಾರಿಸಬೇಕು. ಇಂಥ ಹಲವಾರು ಸಲಹೆಗಳು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿಯರಿಗೆ ನೀಡಿರುವುದು ಕಾಲೇಜು ವಿದ್ಯಾರ್ಥಿಗಳು!

Advertisement

ಪ್ರಧಾನಿ ನರೇಂದ್ರ ಮೋದಿ ಅವರ ‘ಚಾಯ್‌ ಪೇ ಚರ್ಚಾ’ ಮಾದರಿಯಲ್ಲಿ ‘ಅಪ್ನೀ ಬಾತ್‌ ರಾಹುಲ್‌ ಕೆ ಸಾಥ್‌’ ಎಂಬ ಅಭಿಯಾನವನ್ನು ಕಾಂಗ್ರೆಸ್‌ ಆಯೋಜಿಸಲು ಆರಂಭಿಸಿದೆ. ಇದರ ಮೊದಲ ಕಾರ್ಯಕ್ರಮ ನವದೆಹಲಿಯಲ್ಲಿ ಶನಿವಾರ ನಡೆದಿದೆ. ದೆಹಲಿ, ಅಸ್ಸಾಂ, ಮಹಾರಾಷ್ಟ್ರ, ಕೇರಳ, ಉತ್ತರ ಪ್ರದೇಶದಿಂದ ಹಲವಾರು ಮಂದಿ ಬಂದು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅಲ್ಲಿ ಈ ವಿದ್ಯಾರ್ಥಿಗಳು ರಾಹುಲ್‌ ಅವರಿಗೆ ಹಲವು ಸಲಹೆಗಳನ್ನು ನೀಡಿದ್ದಾರೆ. ಧಾರವಾಡದ ಎಂಜಿನಿಯರಿಂಗ್‌ ವಿದ್ಯಾರ್ಥಿ ರೋಹನ್‌ ರಾಜೆ ಮ್ಯಾಥ್ಯೂಸ್‌ ಅವರೂ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ರಾಹುಲ್‌ ಜತೆ ಅನೇಕ ವಿಚಾರಗಳ ಬಗ್ಗೆ ಚರ್ಚಿಸಿದೆವು. ಅದೊಂದು ಉತ್ತಮ ಸಂವಾದ ಎಂದು ಅವರು ನುಡಿದಿದ್ದಾರೆ. ಮುಂದೆ, ಇಂಥ ಮತ್ತಷ್ಟು ಕಾರ್ಯಕ್ರಮಗಳನ್ನು ನಡೆಸಲು ಕಾಂಗ್ರೆಸ್‌ ಯೋಜಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next