ಕಾಂಗ್ರೆಸ್ ಜತೆ ಕೈ ಜೋಡಿಸಿದ್ದೇನೆ ಎಂದು ದೇವೆಗೌಡರು ಸುಳ್ಳು ಸಂದೇಶ ನೀಡುತ್ತಿದ್ದಾರೆ. ಭವಿಷ್ಯವಿಲ್ಲದ ಕಾಂಗ್ರೆಸ್ ಜತೆ ಕೈ ಜೋಡಿಸಿದರೆ ಏನಾಗಬಹುದು ಎಂಬುದನ್ನು ರಾಜ್ಯದ ಜನತೆ ಮುಂದೆ ತೋರಿಸಲಿದ್ದಾರೆ ಎಂದರು.
Advertisement
100 ಕೋಟಿ ಬಾಕಿ: ರಾಜ್ಯದಲ್ಲಿ ಅಭಿವೃದ್ಧಿ ಎಂಬುದೇ ಇಲ್ಲ. ಉಸ್ತುವಾರಿ ಸಚಿವರ ನೇಮಕವೇ ಸರ್ಕಾರಕ್ಕೆ ಸಮಸ್ಯೆಯಾಗಿದೆ. ಕುಮಾರಸ್ವಾಮಿ ಸಾಲಮನ್ನಾ ಹಣಕ್ಕಾಗಿ ರೈತರು ಕಾದು ಕುಳಿತುಕೊಳ್ಳುವಂತಾಗಿದೆ. ಸಾಲಮನ್ನಾ ಕುರಿತು ರೈತರಿಗೆ, ಸಹಕಾರಿ ಸಂಘಗಳಿಗೆ ಈವರೆಗೂ ಸ್ಪಷ್ಟತೆ ಬಂದಿಲ್ಲ. ಈಗ ರಾಷ್ಟ್ರೀಕೃತ ಬ್ಯಾಂಕಿನ ಸಾಲದ ಬಗ್ಗೆ ಮಾತನಾಡತೊಡಗಿದ್ದಾರೆ ಎಂದು ಬಿಎ ಸ್‌ವೈ ಹೇಳಿದರು.