ದಾವಣಗೆರೆ: ಯುವಕರಿಬ್ಬರ ನಡುವೆ ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳ, ಗುಂಪುಗಳ ನಡುವಿನ ಘರ್ಷಣೆಗೆ ತಿರುಗಿದ ಘಟನೆ ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ತಾಲೂಕಿನ ಪಾಮೇನಹಳ್ಳಿ- ದಾವಣಗೆರೆ ಪಾಲಿಕೆಯ ಶ್ರೀರಾಮ ನಗರದ ಹುಡುಗರ ನಡುವೆ ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳವೇ ಇದೀಗ ಗುಂಪು ಘರ್ಷಣೆಗೆ ಕಾರಣವಾಗಿದೆ.
ಪಾಮೇನಹಳ್ಳಿ ಗ್ರಾಮದ ವೆಂಕಟೇಶ್ ಪೂಜಾರ್(32) ಎಂಬ ಯುವಕ ಬ ಶ್ರೀರಾಮ ನಗರದ ಲೋಕಿಕೆರೆಯ ಬಂಕ್‌ನಲ್ಲಿ ಪೆಟ್ರೋಲ್ ಹಾಕಿಸಿಕೊಂಡು ಬರಲು ಹೋದಾಗ ಶ್ರೀರಾಮ ನಗರದ ಹರೀಶ್ ಮತ್ತವರ ಬೆಂಬಲಿಗರು ವೆಂಕಟೇಶ್ ಮೇಲೆ ಹಲ್ಲೆ ಮಾಡಿದ್ದರು. ಪ್ರತಿಯಾಗಿ ಗ್ರಾಮಸ್ಥರು ಗುಂಪು ಕಟ್ಟಿಕೊಂಡು ಹನುಮಂತಪ್ಪ ಮತ್ತು ಆತನ ಸ್ನೇಹಿತರ ಮೇಲೆ ಹಲ್ಲೆಮಾಡಿದ್ದಾರೆ ಎಂಬುದು ಎರಡೂ ಕಡೆಗಳಿಂದ ದೂರು ನೀಡಲಾಗಿದೆ.
ವೆಂಕಟೇಶ್ ಪೆಟ್ರೋಲ್ ಹಾಕಿಸಿಕೊಳ್ಳಲು ಹೋದಾಗ ಹರೀಶ್ ಮತ್ತು ಹನುಮಂತ ಎಂಬುವರು ವೆಂಕಟೇಶ್‌ನನ್ನು ತಡೆದು, ಏನ್ನಾನದರೂ ಕೊಡಿಸುವಂತೆ ಕೇಳಿದ್ದಾರೆ. ಆಗ ವೆಂಕಟೇಶ್ 100 ರೂಪಾಯಿ ಕೊಡಲು ಮುಂದಾಗಿದ್ದಾನೆ. ಇದರಿಂದ ಕುಪಿತರಾದ ಹರೀಶ್ ಮತ್ತು ಹನುಮಂತ ವೆಂಕಟೇಶ್ ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.
ಅದೇ ವೇಳೆಗೆ ಸ್ಥಳಕ್ಕೆ ಬಂದ ಹರೀಶ್‌ನ ಸ್ನೇಹಿತರಾದ ಸಂತೋಷ್ ಅಲಿಯಾಸ್ ಚಾಕಲೇಟ್ ಸಂತ, ಅನಿಲ್, ಬೀರೇಶ್ ಇನ್ನೋರ್ವ ಅಪರಿಚಿತ ಯುವಕ ಸೇರಿ ಹಲ್ಲೆಮಾಡಿದ್ದಾರೆಂದು ವೆಂಕಟೇಶ್ ನೀಡಿದ ದೂರಿನಲ್ಲಿ ಆರೋಪಿಸಲಾಗಿದೆ. ಹನುಮಂತನ ಕಡೆಯವರು ಇನ್ನೊಂದು ದೂರು ದಾಖಲಿಸಿದ್ದು, ಅದರ ಅನ್ವಯ ಹರೀಶ್ ಮತ್ತು ಪೂಜಾರ್ ವೆಂಕಟೇಶ್ ಜಗಳಮಾಡುತ್ತಿದ್ದಾಗ ಹನುಮಂತ ಮತ್ತು ಸ್ನೇಹಿತ ಬೀರೇಶ್ ಜಗಳ ಬಿಡಿಸಿದ್ದರಂತೆ.
ವೆಂಕಟೇಶ್ ಜಗಳದ ಜಾಗದಿಂದ ತನ್ನೂರು ಪಾಮೇನಹಳ್ಳಿಗೆ ಹೋಗಿ ನಾಗರಾಜ, ಮಂಜುನಾಥ, ಪ್ರಭು, ರಮೇಶ್, ರಘು, ಪೂಜಾರ ಮಂಜುನಾಥ, ವೆಂಕಟೇಶ, ಆಟೋ ಬಸವರಾಜ ಸೇರಿದಂತೆ ಸುಮಾರು 40 ಜನ ಹನುಮಂತ ಮತ್ತು ಬೀರೇಶ್ ಮೇಲೆ ಹಲ್ಲೆಮಾಡಿದ್ದಾರೆ ಎಂದು ಹೇಳಲಾಗಿದೆ.