Advertisement

ನೀರಿನಿಂದ ಹಿಡಿದು ಶ್ಮಶಾನದವರೆಗೆ ದೂರೋ ದೂರು!

10:06 AM Mar 28, 2017 | Team Udayavani |

ಉಡುಪಿ: ಕುಡಿಯುವ ನೀರು, ಕಂದಾಯ ಇಲಾಖೆ ಸಮಸ್ಯೆ, ಶ್ಮಶಾನ ಭೂಮಿ, ಅಕ್ರಮ ಮರಳು ಗಾರಿಕೆ, ಕ್ರಷರ್‌ ಸಮಸ್ಯೆ, ಬಿಎಸ್‌ಎನ್‌ ಎಲ್‌ ದೂರವಾಣಿ ಸಮಸ್ಯೆ, ಬೈಂದೂರು ವ್ಯಾಪ್ತಿಯಲ್ಲಿ ಧೂಳಿನಿಂದ ಆರೋಗ್ಯ ಹದಗೆಡುತ್ತಿರುವುದು, ಬೈಂದೂರಿನ ಉಪ್ಪುಂದದಲ್ಲಿ ಉಪಯೋಗಕ್ಕಿಲ್ಲದ ಹೊಳೆಗೆ ಕಟ್ಟಿದ ಅಣೆಕಟ್ಟು, ದೇವಾಲಯದ ತಸ್ತೀಕ್‌ ಬಟವಾಡೆಯಾಗದಿ ರುವುದು, ಕಟಪಾಡಿಯಲ್ಲಿ ಬೋರ್‌ವೆಲ್‌ ಕೊರೆದು ಶಾಲೆಗಳಲ್ಲಿ ನೀರು ಬತ್ತಿ ಸಮಸ್ಯೆ. 

Advertisement

ಹೀಗೆ ಒಂದೆರಡಲ್ಲ, ಬರೋಬ್ಬರಿ 44 ದೂರುಗಳನ್ನು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಬೆಳಗ್ಗೆ 10ರಿಂದ 11 ಗಂಟೆ ವರೆಗೆ ನಡೆದ ನೇರ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್‌ ಸ್ವೀಕರಿಸಿದರು.  ಕುಂದಾಪುರದ ಗ್ರಾಮಾಂತರ ವ್ಯಾಪ್ತಿಯಲ್ಲಿ ಹಳೆ ಬಸ್‌ ಓಡಿಸುವ ಬಗ್ಗೆ, ಮಠದಕೆರೆಯ ಹೂಳೆತ್ತಲು, ಅಕ್ರಮ ಮರಳುಗಾರಿಕೆ ಸಮಸ್ಯೆ ಇಲ್ಲೂ ಪ್ರತಿಧ್ವನಿಸಿತು. ಉಪ್ಪುಂದದಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿದವರೊಬ್ಬರಿಗೆ ಮನೆ ಬೇಕೆಂದು ಕೇಳಿದರು. ಹಕ್ಕುಪತ್ರಕ್ಕೆ ಸಂಬಂಧಿ ಸಿದ ದೂರಿಗೆ ಜಿಲ್ಲಾಧಿಕಾರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ಸೂಚಿಸ ಲಾಯಿತು. ಕ್ರಷರ್‌ ಸಮಸ್ಯೆ ಇರು ವಲ್ಲಿ ಸ್ಥಳ ತನಿಖೆ ನಡೆಸಿ ಎಫ್ಐಆರ್‌ ದಾಖಲಿಸಿರುವುದನ್ನು ತಿಳಿಸಲಾಯಿತು. ಟೈಲರ್‌ ಒಬ್ಬರು ದೇವರಾಜ ಅರಸು ನಿಗಮದಿಂದ ಟೈಲರಿಂಗ್‌ ನಡೆಸಲು ಸಬ್ಸಿಡಿ ಬೇಕೆಂದಾಗ ಅದಕ್ಕೆ ಅಗತ್ಯದ ದಾಖಲೆ ಕೊಡಲು ಅಧಿಕಾರಿಗಳು ತಿಳಿಸಿದರು. ಅವಂತಿ ಗ್ರಾಮಸ್ಥರು ರಸ್ತೆ ಬೇಕೆಂದರು. 

Advertisement

Udayavani is now on Telegram. Click here to join our channel and stay updated with the latest news.

Next