Advertisement

ಬರಲಿದೆ ಪಂಚಾಯತ್‌ಗೊಂದು ಪವಿತ್ರ ವನ

12:44 AM Nov 25, 2020 | mahesh |

ಬೆಂಗಳೂರು: ಹಳ್ಳಿ ಜನರೂ ಇನ್ನು ಮುಂದೆ ಉದ್ಯಾನಗಳಲ್ಲಿ ವಾಯುವಿಹಾರ ಮಾಡಬಹುದು. ಹಚ್ಚ ಹಸುರಿನ ಪರಿಸರದಲ್ಲಿ ವಿಹರಿಸುತ್ತ ಮನಸ್ಸನ್ನು ಉಲ್ಲಾಸಗೊಳಿಸಿಕೊಳ್ಳಬಹುದು. ಹಳ್ಳಿಗರಿಗೂ ವಿಹಾರಕ್ಕೆ ಅವಕಾಶ ಕಲ್ಪಿಸಿ ಕೊಡಲು ಪಂಚಾಯತ್‌ಗಳಲ್ಲಿ “ಪವಿತ್ರವನ’ ನಿರ್ಮಾಣವಾಗಲಿದೆ.

Advertisement

ಪಂಚಾಯತ್‌ ವ್ಯಾಪ್ತಿಯಲ್ಲಿ ಹಸುರೀಕರಣ, ಅಂತರ್ಜಲ ವೃದ್ಧಿ ಮತ್ತು ಸಸ್ಯ ಪ್ರಭೇದಗಳನ್ನು ಬೆಳೆಸುವುದು, ತೋಪು, ಸರಕಾರಿ ಜಾಗಗಳನ್ನು ರಕ್ಷಿಸುವುದು ಮತ್ತು ಆ ಪ್ರದೇಶ ಗಳನ್ನು ಸುಂದರ ಮತ್ತು ಸ್ವಚ್ಛ ವಾಗಿಡುವುದು ಪವಿತ್ರವನದ ಉದ್ದೇಶವಾಗಿದೆ. ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ನರೇಗಾ)ಯಡಿ ಪ್ರತೀ ಪಂಚಾಯತ್‌ಗೆ ಒಂದು ಪವಿತ್ರವನ ನಿರ್ಮಾಣ ಮಾಡಲು ಗ್ರಾಮೀಣಾಭಿವೃದ್ಧಿ ಇಲಾಖೆ ಯೋಜನೆ ಹಾಕಿಕೊಂಡಿದೆ.

ಎಲ್ಲ ಪಂಚಾಯತ್‌ಗಳಿಗೆ ವಿಸ್ತರಿಸುವ ಗುರಿ
ಮೊದಲ ಹಂತದಲ್ಲಿ ಪ್ರತೀ ತಾಲೂಕಿನ ಒಂದು ಪಂಚಾಯತ್‌ ಆಯ್ಕೆ ಮಾಡಿಕೊಂಡು ಅಲ್ಲಿ ಪ್ರಾಯೋಗಿಕವಾಗಿ ಪವಿತ್ರವನ ನಿರ್ಮಾಣ ಮಾಡಿ, ಸಾಧಕ-ಬಾಧಕಗಳನ್ನು ಪರಿಶೀಲಿಸ ಲಾಗು ತ್ತದೆ. ಬಳಿಕ ಎಲ್ಲ ತಾಲೂಕು ಗಳ ಎಲ್ಲ ಪಂಚಾ ಯತ್‌ಗಳಿಗೆ ವಿಸ್ತರಿಸುವ ಗುರಿಯನ್ನು ಇಲಾಖೆ ಹೊಂದಿದೆ. ಪವಿತ್ರವನ ನಿರ್ಮಾಣ ಮಾಡಲು ಪ್ರತೀ ಪಂಚಾಯತ್‌ನಲ್ಲಿ ಲಭ್ಯವಿರುವ ಸರಕಾರಿ ಗೋಮಾಳದಲ್ಲಿ 5 ಎಕರೆ ಜಮೀನು ಗುರುತಿಸಲಾಗುತ್ತದೆ. ಅದರಲ್ಲಿ ಒಂದು ಎಕರೆ ಪ್ರದೇಶದಲ್ಲಿ ಭೂವಿಜ್ಞಾನಿಗಳ ತಾಂತ್ರಿಕ ನೆರವಿ ನೊಂದಿಗೆ ಕೆರೆ, ಹೊಂಡ ನಿರ್ಮಿಸಿ ನೀರು ಇಂಗಲು ಅವಕಾಶ ಮಾಡಲಾಗುತ್ತದೆ.  ಉದ್ಯೋಗ ಖಾತರಿ ಯೋಜನೆಗೆ ಹೊಸ ರೂಪ ನೀಡಲು ಈ ಪವಿತ್ರವನ ಯೋಜನೆಯು ಸಹಕಾರಿಯಾಗಲಿದೆ ಎಂದು ಉದ್ಯೋಗ ಖಾತರಿ ಯೋಜನೆಯ ಆಯುಕ್ತರಾಗಿರುವ ಅನಿರುದ್ಧ್ ಶ್ರವಣ ಹೇಳಿದ್ದಾರೆ.

ಕಿಚನ್‌ ಗಾರ್ಡನ್‌ ನಿರ್ಮಾಣ
ಪ್ರಸ್ತುತ ಸಾಲಿನಲ್ಲಿ ನರೇಗಾದಡಿ ಕಡಿಮೆ ಮಾನವ ದಿನಗಳನ್ನು ಸೃಜನೆ ಮಾಡಿರುವ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವೈಯಕ್ತಿಕ ಕಾಮಗಾರಿಗಳು, ಕಿಚನ್‌ ಗಾರ್ಡನ್‌, ಇಂಗು ಗುಂಡಿ, ಕಾಂಪೋಸ್ಟ್‌ ಪಿಟ್‌ ಮುಂತಾದ ಕಾಮಗಾರಿಗಳನ್ನು ಕೈಗೆತ್ತಿ ಕೊಂಡು ಹೆಚ್ಚಿನ ಪ್ರಗತಿ ಸಾಧಿಸಲು ಗುರಿ ನೀಡಲಾಗಿದೆ. ಪವಿತ್ರವನ ಕಾಮಗಾರಿ ಇದಕ್ಕೆ ನೆರವಾಗಲಿದೆ.

ಪವಿತ್ರವನ ಯೋಜನೆಯಡಿ ಮೊದಲ ಹಂತದಲ್ಲಿ ಪ್ರತೀ ತಾಲೂಕಿನ ಒಂದು ಪಂಚಾಯತ್‌ ಆಯ್ಕೆ ಮಾಡಿಕೊಳ್ಳಲಾಗುವುದು. ಶೀಘ್ರದಲ್ಲೇ ಈ ಬಗ್ಗೆ ಪಂಚಾಯತ್‌ಗಳಿಗೆ ಸುತ್ತೋಲೆ ಹೊರಡಿಸಲಾಗುವುದು.
– ಎಲ್‌.ಕೆ. ಅತೀಕ್‌, ಪ್ರಧಾನ ಕಾರ್ಯದರ್ಶಿ, ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್‌ ಇಲಾಖೆ

Advertisement

ರಫೀಕ್‌ ಅಹ್ಮದ್‌

Advertisement

Udayavani is now on Telegram. Click here to join our channel and stay updated with the latest news.

Next