Advertisement

ಆಸೆ ಪಟ್ಟು ಕೊಂಡ ಪ್ಯಾಂಟು ಬಣ್ಣ ಬಿಟ್ಟಿತು…

11:03 AM Oct 16, 2017 | |

ಒಂದು ವರ್ಷದ ಹಿಂದೆ ನಡೆದಿರುವ ಘಟನೆ. ನನ್ನಲ್ಲಿ 3 ಜೀನ್ಸ್‌ ಪ್ಯಾಂಟ್‌ ಮಾತ್ರ ಇದ್ದವು. ಬಟ್ಟೆ ಒಗೆದು ಒಣ ಹಾಕುವಾಗ ಅದರಲ್ಲಿ ಒಂದು ಜೀನ್ಸ್‌ ಪ್ಯಾಂಟ್‌ ನ್ಯಾಲೆಯ ತಂತಿಗೆ ತಾಗಿ, ವಿಕಾರ ರೂಪ ತಾಳಿ ಹರಿದು ಹೋಯಿತು. ಹೀಗಾಗಿ ಇನ್ನೊಂದು ಜೀನ್ಸ್‌ ಖರೀದಿಸುವುದು ಅನಿವಾರ್ಯವೂ ಆಯಿತು. ತಿಂಗಳ ಕೊನೆಯಾಗಿರುವುದರಿಂದ ಕೈಯಲ್ಲಿ ಹಣವೂ ಇರಲಿಲ್ಲ.

Advertisement

ಮಧ್ಯಮ ವರ್ಗದ ಪಾಡೇ ಹೀಗಲ್ವೇ?
ಇನ್ನೇನು ಮಾಡೋದು ಅಂಥ ರೂಮ್‌ಮೇಟ್‌ ಹತ್ತಿರ ಸಾಲ ತೆಗೆದುಕೊಂಡು ಹನುಮಂತ ನಗರದ ಒಂದು ಶೋ ರೂಮ್‌ಗೆ ಹೋದೆ. ಮೊದಲ ನೋಟಕ್ಕೇ ಅದರಲ್ಲಿದ್ದ ಕೆಲವು ಜೀನ್ಸ್‌ಗಳು ಇಷ್ಟವಾಗಿಬಿಟ್ಟವು. ಬಿಟ್ಟೂ ಬಿಡಲಾರದೆ ಅದರಲ್ಲಿ ಒಂದನ್ನು ಆಯ್ಕೆ ಮಾಡಿಕೊಂಡೆ.  ಎಲ್ಲ ಶಾಪಿಂಗ್‌ ಮುಗಿದ ಮೇಲೆ 2000 ರೂ. ಬಿಲ್‌ ಪಾವತಿಸಿದೆ. ಬಟ್ಟೆ ಖರೀದಿಯಿಂದ ಮನಸ್ಸಿಗೆ ಏನೋ ಖುಷಿ. ಮತ್ತೆ ಮತ್ತೆ ಪ್ಯಾಂಟನ್ನು ನೋಡುತ್ತಿದ್ದೆ. ವಿಚಿತ್ರವಾದ ಆಕರ್ಷಣೆ ಅದರ ಮೇಲೆ.  

ಹಾಗೇ  2 ಬಾರಿ ಆಫೀಸ್‌ಗೂ ಹಾಕಿಕೊಂಡು ಬಂದೆ. ಮಾರನೇ ದಿನ ವೀಕ್‌ ಆಫ್. ಇನ್ನೇನು ಮಾಡುವುದು? ಬಟ್ಟೆ ಒಗೆಯುವ ಕಾಯಕ ಶುರುವಾಯಿತು.ಎಲ್ಲ ಬಟ್ಟೆಗಳ ಜೊತೆ ಈ ಪ್ಯಾಂಟನ್ನೂ ಒಗೆದು ಒಣ ಹಾಕಿದೆ.  ಸಂಜೆ ಪ್ಯಾಂಟನ್ನು ತರಲು ಹೋದರೆ ಶಾಕ್‌ ಕಾದಿತ್ತು. ನನ್ನ ಪ್ರೀತಿಯ ಜೀನ್ಸ್‌ ಪ್ಯಾಂಟ್‌ಗೆ ಅಲ್ಲಲ್ಲಿ ಬಿಳಿ ಬಣ್ಣದ ಚಿಟ್ಟು ಬಿದ್ದಿತ್ತು. ಏನೋ ಮನಸ್ಸಿಗೆ ಆಘಾತ, ಕೋಪ, ಹತಾಶೆ ಭಾವನೆ.

ಏನು ಮಾಡೋದು?
ಅಂಗಡಿಗೆ ವಾಪಸು ಕೋಡೋಣ ಅಂದರೆ ಸಮಯ ಮೀರಿದೆ. ಅಂಗಡಿಗೆ ಹೋಗಿ ಜಗಳ ಮಾಡೋಣ ಅಂದುಕೊಂಡೆ. ಒಂದು ಪಕ್ಷ ಅಲ್ಲಿಗೆ  ತೆಗೆದುಕೊಂಡು ಹೋದರೂ, “ಏನ್ರೀ, ನಿಮಗೆ ಹೇಳಿಲ್ವಾ, ನಾಲ್ಕೈದು ದಿನದಲ್ಲಿ ಎಕ್ಸ್‌ಚೇಂಜ್‌ ಮಾಡಿಸಿಕೊಳ್ಳಿ’ ಅಂತ ಅನ್ನೋ ಬೈಗುಳ ಕೇಳಬೇಕು. ಅದಕ್ಕಿಂತ ಸುಮ್ಮನೆ ಇರೋದೇ ವಾಸಿ ಅಂತ ಪಿಗ್ಗಿ ಬಿದ್ದು ತೆಪ್ಪಗಾದೆ. 

* ವಸಂತ ಇಟಗಿ, ಹನುಮಂತ ನಗರ

Advertisement
Advertisement

Udayavani is now on Telegram. Click here to join our channel and stay updated with the latest news.

Next