Advertisement

ನಗರದಲ್ಲಿ ಅಪರಾಧ ಹೆಚ್ಚಲು ಹೊರ ರಾಜ್ಯದವರೇ ಕಾರಣ

12:22 PM Dec 07, 2017 | Team Udayavani |

ಬೆಂಗಳೂರು: ಉದ್ಯಾನ ನಗರಿ ಬೆಂಗಳೂರು ಅಪರಾಧ ಪ್ರಕರಣಗಳ ಸಂಖ್ಯೆಯಲ್ಲಿ 2ನೇ ಸ್ಥಾನದಲ್ಲಿದ್ದು, ಇದಕ್ಕೆ ಬೆಂಗಳೂರಿನಲ್ಲಿ ನೆಲೆಸಿರುವ ಅನ್ಯ ರಾಜ್ಯದವರೇ ನೇರ ಕಾರಣವಾಗಿದ್ದಾರೆ. ಬೆಂಗಳೂರಿನಲ್ಲಿ ನೆಲೆಸಿರುವ ಕನ್ನಡಿಗರ ಮೇಲೂ ಪದೇ ಪದೆ ಹಲ್ಲೆ ನಡೆಯುತ್ತಿದ್ದು, ಇದನ್ನು ಖಂಡಿಸಿ ಡಿ.16ರಂದು ನಗರದಲ್ಲಿ “ಬೆಂಗಳೂರು ಕನ್ನಡಿಗರ ಉಳಿಸಿ’ ಹೋರಾಟ ಹಮ್ಮಿಕೊಂಡಿರುವುದಾಗಿ ಕನ್ನಡ ಚಳವಳಿ ವಾಟಾಳ್‌ ಪಕ್ಷದ ಅಧ್ಯಕ್ಷ ವಾಟಾಳ್‌ ನಾಗರಾಜ್‌ ಹೇಳಿದ್ದಾರೆ.

Advertisement

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿದ ಅವರು ಬೆಂಗಳೂರು ಅನ್ಯಭಾಷಿಗರ ತಾಣವಾಗುತ್ತಿದೆ. ಒಂದು ಕಡೆ ತಮಿಳರು ಪ್ರಾಬಲ್ಯ ಮೆರೆದರೆ ಮತ್ತೂಂದೆಡೆ ಉತ್ತರ ಭಾರತದವರು ಕನ್ನಡಿಗರ ಸೌಲಭ್ಯಗಳನ್ನು ಕಸಿದುಕೊಳ್ಳುತ್ತಿದ್ದಾರೆ. ಬೆಂಗಳೂರಿನ ಹಲವು ಬಡಾವಣೆಗಳು ರಾಜಸ್ಥಾನ, ಪಂಜಾಬ್‌, ಬಿಹಾರ, ಉತ್ತರ ಪ್ರದೇಶವಾಗುತ್ತಿವೆ. ಈ ಬಗ್ಗೆ ರಾಜ್ಯ ಸರ್ಕಾರ ಎಚ್ಚರ ವಹಿಸ‌ಬೇಕೆಂದು ಆಗ್ರಹಿಸಿದರು.

ಮೆಡಿಕಲ್‌, ಎಂಜಿನಿಯರ್‌ ಸೀಟುಗಳನ್ನು ಹೊರ ರಾಜ್ಯವರಿಗೆ ನೀಡುತ್ತಿದ್ದು, ಹೊರ ರಾಜ್ಯದಿಂದ ಬಂದವರು ಬೆಂಗಳೂರನ್ನು ಅಪರಾಧದ ತಾಣವನ್ನಾಗಿ ಮಾಡಿದ್ದಾರೆ. ಈ ಬಗ್ಗೆ ಬೆಂಗಳೂರನ್ನು ಪ್ರತಿನಿಧಿಸುತ್ತಿರುವ ಶಾಸಕರು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದ ಅವರು, ಈ ಎಲ್ಲ ಅಂಶಗಳನ್ನು ಮನಗಂಡು ಪಕ್ಷ ಹೋರಾಟಕ್ಕೆ ಕರೆ ನೀಡಿದೆ. ಅಂದು ಬೆಳಗ್ಗೆ 11 ಗಂಟೆಗೆ ಮೈಸೂರು ಬ್ಯಾಂಕ್‌ ವೃತ್ತದಲ್ಲಿ ಕನ್ನಡ ವಿರೋಧಿ ಭೂತದಹನ ನಡೆಯಲಿದೆ ಎಂದರು.

ಗೌರಿ, ಕಲಬುರಗಿ ಹಂತಕರು ಎಲ್ಲಿ?: ಪತ್ರಕರ್ತೆ ಮತ್ತು ಸಾಮಾಜಿಕ ಹೋರಾಟಗಾರ್ತಿ ಗೌರಿ ಲಂಕೇಶ್‌ ಹತ್ಯೆಯಾಗಿ ಮೂರು ತಿಂಗಳು ಕಳೆದಿವೆ. ಸರ್ಕಾರಕ್ಕೆ ಇದುವರೆಗೂ ಆರೋಪಿಗಳನ್ನು ಹಿಡಿಯಲು ಆಗಲಿಲ್ಲ. ಗೌರಿ ಹಂತಕರ ಸುಳಿವು ಪತ್ತೆಯಾಗಿದೆ ಎಂದು ಗೃಹ ಸಚಿವರು ಹೇಳುತ್ತಲೇ ಕಾಲ ಕಳೆಯುತ್ತಿದ್ದಾರೆ. ಸಂಶೋಧಕ ಡಾ.ಎಂ.ಎಂ. ಕಲಬುರಗಿ ಹತ್ಯೆಯ ಸಂಚನ್ನು ಪತ್ತೆ ಹಚ್ಚಲು ಸರ್ಕಾರ ವಿಫ‌ಲವಾಗಿದೆ. ಬೆಂಗಳೂರು ಅಪರಾಧದ ರಾಜಧಾನಿಯಾಗುತ್ತಿದ್ದರೂ ಸರ್ಕಾರ ಈ ಬಗ್ಗೆ ಏಕೆ ಗಮನ ಹರಿಸುತ್ತಿಲ್ಲ ಎಂಬುವುದೇ ಅರ್ಥವಾಗುತ್ತಿಲ್ಲ ಎಂದು ವಾಟಾಳ್‌ ನಾಗರಾಜ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next