Advertisement

ಮಹಾನಗರಕ್ಕೆ ಇನ್ನೂ ಎರಡು ರಿಂಗ್‌ ರೋಡ್‌

11:31 AM Nov 27, 2017 | Team Udayavani |

ಬೆಂಗಳೂರು: ಸಂಚಾರ ದಟ್ಟಣೆ ನಿಯಂತ್ರಣಕ್ಕಾಗಿ ನಗರದಲ್ಲಿ ಮತ್ತೆರಡು ವರ್ತುಲ ರಸ್ತೆಗಳು ಹಾಗೂ ನಮ್ಮ ಮೆಟ್ರೋ ಸೇವೆಯ ಎರಡು ಹೊಸ ಮಾರ್ಗಗಳನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ತನ್ನ “ಪರಿಷ್ಕೃತ ಮಹಾಯೋಜನೆ 2031’ರಲ್ಲಿ ಪ್ರಸ್ತಾಪಿಸಿದೆ.

Advertisement

ಪರಿಷ್ಕೃತ ಮಹಾಯೋಜನೆ-2031ರ ಭಾಗವಾಗಿ ನಗರದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಪೆರಿಫೆರಲ್‌ ರಿಂಗ್‌ ರಸ್ತೆಗಳಿಗೆ ಸಮನಾಂತರವಾಗಿ ಮೆಟ್ರೋ ಮಾರ್ಗಗಳನ್ನು ನುಷ್ಠಾನಗೊಳಿಸಲು ಬಿಡಿಎ ತನ್ನ ಪರಿಸ್ಕೃತ ಪ್ರಸ್ತಾವನೆಯಲ್ಲಿ ಪ್ರಸ್ತಾಪಿಸಿದೆ. ನಗರದ ಎಲ್ಲ ವರ್ತುಲ ರಸ್ತೆಗಳನ್ನು ಸಂಪರ್ಕಿಸಲು ಸುಮಾರು 100 ಕಿ.ಮೀ. ಉದ್ದದ ಮೆಟ್ರೋ ಮಾರ್ಗ ನಿರ್ಮಿಸುವ ಕುರಿತು ಇಲ್ಲಿ ಗಮನ ಸೆಳೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.

ಸದ್ಯ ಬಿಎಂಆರ್‌ಸಿಎಲ್‌ ವತಿಯಿಂದ ಮೆಟ್ರೋ 2ಎ ಫೇಸ್‌ನಲ್ಲಿ ಸಿಲ್ಕ್ ಬೋರ್ಡ್‌ನಿಂದ ಕೆ.ಆರ್‌.ಪುರದವರೆಗೆ ಮೆಟ್ರೋ ಮಾರ್ಗ ನಿರ್ಮಿಸಲಾಗುತ್ತಿದೆ. ಅದನ್ನು ವಿಸ್ತರಿಸಿ ಹೆಬ್ಟಾಳ-ಮಾಗಡಿ ರಸ್ತೆ-ಮೈಸೂರು ರಸ್ತೆ ಹೀಗೆ ಸಂಪೂರ್ಣ ವರ್ತುಲ ರಸ್ತೆಗೆ ಸಂಪರ್ಕಿಸುವ ರೀತಿಯಲ್ಲಿ ವಿಸ್ತರಿಸುವ ಕುರಿತು ಪ್ರಸ್ತಾವನೆಯಲ್ಲಿ ತಿಳಿಸಲಾಗಿದೆ.

ತಾತ್ಕಾಲಿಕ ಮಹಾಯೋಜನೆಯಲ್ಲಿ 2031ಕ್ಕೆ ನಗರದ ಜನಸಂಖ್ಯೆ 2 ಕೋಟಿ ಮೀರಲಿದೆ ಎಂದು ಅಂದಾಜಿಸಿದ್ದು, ಜನಸಾಂದ್ರತೆಗೆ ಅನುಗುಣವಾಗಿ 2015ನೇ ಮಹಾಯೋಜನೆಗಿಂತ ಕೇವಲ 80 ಚದರ ಕಿ.ಮೀ  ದೇಶವನ್ನು
ಮಾತ್ರ ಹೆಚ್ಚುವರಿ ನಗರೀಕರಣ ಪ್ರದೇಶವನ್ನಾಗಿ ಪ್ರಸ್ತಾಪಿಸಲಾಗಿದೆ. ನಗರೀಕರಣಕ್ಕೆ ಅವಶ್ಯಕ ವ್ಯವಸ್ಥೆಗಳಾಗಿರುವ ಸಾರಿಗೆ ಮತ್ತು ಸಂಚಾರ ವ್ಯವಸ್ಥೆ, ಸಂಪರ್ಕ ರಸ್ತೆಗಳು, ವಸತಿ ಸೌಲಭ್ಯದ ಬೇಡಿಕೆ, ನೀರು ಸರಬರಾಜು ಬೇಡಿಕೆ, ಘನ ತ್ಯಾಜ್ಯ ನಿರ್ವಹಣೆಗೆ ಬೇಕಾದ ಜಮೀನು, ಪರಸರ ಸಂರಕ್ಷಣೆಗೆ ಸಂಬಂಧಿಸಿದ ಬೇಡಿಕೆಗಳು, ಟ್ರೀ ಪಾರ್ಕ್‌ ಸೇರಿದಂತೆ ಮೂಲ ಸೌಕರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.

ಸರ್ಕಾರ ಅನುಮೋದಿಸಿರುವ ವಲಯ ಬದಲಾವಣೆ ಮತ್ತು ಪ್ರಾಧಿಕಾರವು ಅನುಮೋದಿಸಿದ ವಿನ್ಯಾಸ, ಇತರೆ ಅಭಿವೃದ್ಧಿ ಅನುಮೋದನೆ ಯೋಜನೆಗಳಿಗೆ ನೀಡಲಾದ ಪ್ರಕರಣಗಳನ್ನು ತಪ್ಪದೆ ಅಳವಡಿಸಿಕೊಳ್ಳಬೇಕು. ಪರಿಸರ ಸೂಕ್ಷ್ಮ ಪ್ರದೇಶಗಳಾದ ಕಣಿವೆಗಳು, ನದಿ-ತೊರೆ ಪಾತ್ರಗಳು, ಕೆರೆಯ ಅಂಗಳಗಳು ಸೇರಿದಂತೆ ಜಲಮೂಲಗಳನ್ನು ಸೂಕ್ತವಾಗಿ ಕಾಪಾಡಿ ಕೊಂಡು ಭೂ ಉಪಯೋಗ ಖಚಿತಪಡಿಸಿಕೊಳ್ಳಬೇಕು ಎಂದು ತಿಳಿಸಲಾಗಿದೆ.

Advertisement

ಪ್ರಸ್ತಾಪಿತ ಪ್ರಮುಖ ಅಂಶಗಳು 

  • „ ನಾಲ್ಕು ಕ್ರೀಡಾ ಸಂಕೀರ್ಣಗಳ ನಿರ್ಮಾಣ
  •  12 ಪಾರಂಪರಿಕ ವಲಯಗಳ ಪರಿಚಯ
  • „ ಕೈಗೆಟುಕುವ ದರದಲ್ಲಿ ಮನೆಗಾಗಿ ಭೂ ಬ್ಯಾಂಕ್‌
  • „ ತಂತ್ರಜ್ಞಾನಗಳ ಅಳವಡಿಕೆಗೆ ಆದ್ಯತೆ
  •  ಬೃಹತ್‌ ಅಭಿವೃದ್ಧಿ ಕೈಗೊಳ್ಳುವಾಗ ಸಂಚಾರದ ಮೇಲೆ ಬೀರುವ ಪರಿಣಾಮಗಳ ಮಾಪನ ಕಡ್ಡಾಯ
  •  ಹಸಿರು ವಲಯದಲ್ಲಿ ಭೂಮಿ ಖರೀದಿಗೆ ಟಿಡಿಆರ್‌ ಪ್ರಮಾಣಪತ್ರ ಪರಿಗಣಿಸುವುದು
  • „ ಉದ್ಯಾನಗಳ ವಿಸ್ತೀರ್ಣವನ್ನು 40 ಹೆಕ್ಟೇರ್‌ನಿಂದ 200 ಹೆಕ್ಟೇರ್‌ಗೆ ಹೆಚ್ಚಿಸುವುದು
  • „ 25 ಹೆಕ್ಟೇರ್‌ಗಿಂತ ಹೆಚ್ಚಿನ ಪ್ರದೇಶದಲ್ಲಿ 25 ಸಮಗ್ರ ಆರ್ಥಿಕ ಟೌನ್‌ಶಿಪ್‌ ನಿರ್ಮಾಣ
  • „ 15 ಸಾವಿರ ಬಿಎಂಟಿಸಿ ಬಸ್‌ಗಳ ಕಾರ್ಯಾಚರಣೆ
  • „ ಪಾಡ್‌, ಲೈಟ್‌ರೈಲ್‌ ಟ್ರಾನ್ಸಿಸ್ಟ್‌ ಹಾಗೂ ಮೋನೋ ರೈಲು
Advertisement

Udayavani is now on Telegram. Click here to join our channel and stay updated with the latest news.

Next