Advertisement

ಅಮರಾವತಿ ಎಂಬ ಕಸದ ನಗರಿ

03:45 AM Feb 10, 2017 | Harsha Rao |

“ಜಟ್ಟ’ ಚಿತ್ರದ ಚಿತ್ರೀಕರಣವನ್ನು ಮುಗಿಸಿ ಗಿರಿರಾಜ್‌ ಮತ್ತು ತಂಡದವರು ಬೆಂಗಳೂರಿಗೆ ಬರುವಷ್ಟರಲ್ಲಿ ಕಸದ ಸಮಸ್ಯೆ ಶುರುವಾಗಿತ್ತಂತೆ. ಆಗಲೇ ಯಾಕೆ ಈ ವಿಷಯದ ಕುರಿತು ಒಂದು ಸಿನಿಮಾ ಮಾಡಬಾರದು ಎಂಬ ಯೋಚಸ‌ನೆ ಗಿರಿರಾಜ್‌ಗೆ ಬಂದಿತ್ತಂತೆ.

Advertisement

“ಮೂರು ದಿನಗಳ ಕಾಲ ಅವರು ಧರಣಿ ಕೂತರು. ಆಗ ಶುರುವಾದ ಕಸದ ಸಮಸ್ಯೆ, ಇನ್ನೂ ಬಗೆಹರಿದಿಲ್ಲ. ಕಸದ ಸಮಸ್ಯೆ ಬಹಳ ದೊಡ್ಡದು. ಪೌರ ಕಾರ್ಮಿಕರ ಸಮಸ್ಯೆ ಸಹ ದೊಡ್ಡದು. ಸಾಂಕ್ರಾಮಿಕ ರೋಗಗಳ ವಿರುದ್ಧ ಅವರು ಹೋರಾಡಬೇಕು, ಎಷ್ಟೋ ಜನ ಚರಂಡಿಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಆದರೆ, ಅವರ ಬಗ್ಗೆ ಯಾರಿಗೂ ಹೆಚ್ಚಿಗೆ ಗಮನವಿಲ್ಲ’ ಎಂದು ಗಿರಿರಾಜ್‌ ಹೇಳಿಕೊಂಡರು. ಆ ಸಿನಿಮಾದ ಹೆಸರೇ “ಅಮರಾವತಿ’. ಈ ವಾರ ಬಿಡುಗಡೆಯಾಗುತ್ತಿರುವ ಐದು ಚಿತ್ರಗಳಲ್ಲಿ ಅದೂ ಸಹ ಒಂದು. ಬಿಡುಗಡೆಗೆ ಒಂದು ವಾರವಿದೆ ಅನ್ನುವಷ್ಟರಲ್ಲಿ ಚಿತ್ರದ ಬಗ್ಗೆ ಮಾತನಾಡುವುದರ ಜೊತೆಗೆ, ಹಾಡುಗಳನ್ನು ಸಹ ಬಿಡುಗಡೆ ಮಾಡಿಸಿದರು ಗಿರಿರಾಜ್‌ ಮತ್ತು ಹಾಡುಗಳನ್ನು ಬಿಡುಗಡೆ ಮಾಡಿಸುವುದಕ್ಕೆ ಹಿರಿಯ ನಿರ್ದೇಶಕ ಶಿವಮಣಿ ಅವರನ್ನು ಕರೆಸಿದ್ದರು. ಹಾಡುಗಳ ಬಿಡುಗಡೆಗೂ ಮುನ್ನ ಮಾತುಗಳು.

“ಮೊದಲೇ ಹೇಳಿದಂತೆ ಹಲವು ವಿಷಯಗಳಿವೆ. ಪ್ರಮುಖವಾಗಿ ನಾವು ಕಸ ಹಾಕುವಾಗ ವಿಂಗಡೆ ಮಾಡಿ ಹಾಕಬೇಕು. ಈ ವಿಷಯದ ಕುರಿತು ಅರಿವಾದರೆ, ಸಮಸ್ಯೆ ಬಗೆಹರಿಯಬಹುದು. ನಾನು ಒಂದು ವರದಿ ಓದುತ್ತಿದ್ದೆ. ದೆಹಲಿಯಲ್ಲಿ ಅದೆಷ್ಟೋ ಪೌರಕಾರ್ಮಿಕರು ಏಡ್ಸ್‌ಗೆ ತುತ್ತಾಗಿದ್ದರು. ಈ ಕುರಿತು ತನಿಖೆ ನಡೆಸಿದಾಗ ಗೊತ್ತಾಗಿದ್ದೇನೆಂದರೆ, ಅವೆಲ್ಲಾ ಆಸ್ಪತ್ರೆಯೊಂದರ ತ್ಯಾಜ್ಯವನ್ನು ಎಸೆಯುವಾಗ ಹತ್ತಿದ ಸೋಂಕು ಅಂತ. ಆ ಆಸ್ಪತ್ರೆಯಲ್ಲಿ ಏಡ್ಸ್‌ ರೋಗಿಗಳ ವಿಭಾಗವಿತ್ತಂತೆ. ಅವರಿಗೆ ಚುಚ್ಚಿದ ಸಿರಿಂಜ್‌ಗಳು, ಇವರಿಗೆ ಚುಚ್ಚಿ ಏಡ್ಸ್‌ ಸೋಂಕು ತಗಲಿದೆ. ಈ ಒಂದು ನಿರ್ಲಕ್ಷ್ಯದಿಂದ ಆದ ಅನಾಹುತ ಅಷ್ಟಿಷ್ಟಲ್ಲ. ಮೈಮರೆತಾಗ ಆಗುವ ಅವಾಂತರದಿಂದ ಏನೆಲ್ಲಾ ಆಗುತ್ತದೆ ಎನ್ನುವುದನ್ನು ಈ ಚಿತ್ರದ ಮೂಲಕ ಹೇಳುವುದಕ್ಕೆ ಹೊರಟಿದ್ದೇನೆ’ ಎನ್ನುತ್ತಾರೆ ಗಿರಿರಾಜ್‌.

ಈ ಚಿತ್ರವನ್ನು ಮಾಧವ ರೆಡ್ಡಿ ಎನ್ನುವವರು ನಿರ್ಮಿಸಿದ್ದಾರೆ. ಅವರು ಗಿರಿರಾಜ್‌ ಅವರ ತಂದೆಯ ಸ್ನೇಹಿತರಂತೆ. ಅವರಿಗೆ ಈ ಕಥೆಯ ರಿಸ್ಕ್ ಹೇಳಿದಾಗ ಅವರು, ಈ ಚಿತ್ರದಿಂದ ದುಡ್ಡು ಬರುತ್ತದೋ ಇಲ್ಲವೋ ಗೊತ್ತಿಲ್ಲ, ಹೆಮ್ಮೆ ಇರಬೇಕು ಅಂದರಂತೆ. ಅದರಂತೆ ಅವರೇ ಸಿನಿಮಾ ನಿರ್ಮಿಸಿದ್ದಾರೆ. ಈ ಚಿತ್ರದ ವಿಶೇಷವೆಂದರೆ, 18 ರಂಗಭೂಮಿ ಪ್ರತಿಭೆಗಳನ್ನು ಪರಿಚಯಿಸಲಾಗಿದೆ. ಜೊತೆಗೆ ಅಚ್ಯುತ್‌ ಕುಮಾರ್‌, ವೈಶಾಲಿ ದೀಪಕ್‌ ಮುಂತಾದವರು ನಟಿಸಿದ್ದಾರೆ. ಅಭಿಲಾಷ್‌ ಲಾಖÅ ಮತ್ತು ಜೋಯೆಲ್‌ ಡುಬ್ಬ ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next