Advertisement

ನಗರದ ಮಿನಿ ವಿಧಾನಸೌಧ ಇಂದಿನಿಂದ ಕಾರ್ಯಾರಂಭ

03:51 PM May 20, 2019 | Team Udayavani |

ಕನಕಪುರ: ನಗರದ ಹೃದಯಭಾಗದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಮಿನಿ ವಿಧಾನಸೌಧದಲ್ಲಿ ಭಾನುವಾರ ಕಾರ್ಯಾರಂಭ ಮಾಡಲಾಯಿತು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಮಿನಿ ವಿಧಾನಸೌಧ ಕಟ್ಟಡವನ್ನುಉದ್ಘಾಟನೆ ಮಾಡಲಾಗಿತ್ತು. ಕಟ್ಟಡ ನಿರ್ಮಾಣ ವಾಗಿ ಬರೋಬ್ಬರಿ ಒಂದು ವರ್ಷ 5 ತಿಂಗಳು ಬಳಿಕ ಕಾರ್ಯಾರಂಭಕ್ಕೆ ಚಾಲನೆ ನೀಡಲಾಗಿದೆ. ಕಳೆದ ವಿಧಾನ ಸಭೆ ಚುನಾವಣೆಗೂ ಮುನ್ನಾ ಮಿನಿವಿಧಾನ ಸೌಧವನ್ನು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಮಗಾರಿ ಅಪೂರ್ಣಗೊಂಡಿದ್ದರೂ ಉದ್ಘಾಟನೆ ಮಾಡಿದ್ದರು. ಉದ್ಘಾಟನೆ ನಾಮಫ‌ಲಕದಲ್ಲಿ ಹೆಸರು ಬರಬೇಕೆಂಬ ಉದ್ದೇಶ ವನ್ನಿಟ್ಟುಕೊಂಡು ಕಾಮಗಾರಿ ಅಪೂರ್ಣಗೊಂಡಿದ್ದರೂ ಉದ್ಘಾಟನೆಮಾಡಾಯಿತು ಎಂಬ ಮಾತುಗಳು ಕೇಳಿದವು.

Advertisement

ವಿಶೇಷವೆಂದರೆ ಕಟ್ಟಡದ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ತಳಮಹಡಿಯಲ್ಲಿ ತಾಲೂಕು ಕಚೇರಿ, ಉಪ ಖಜಾನೆ, ಸರ್ವೇ ಇಲಾಖೆ ಸೇರಿದಂತೆ ಇನ್ನಿತರ ಇಲಾಖೆ ಇರಲಿವೆ. ಮೊದಲನೆ ಮಹಡಿಯಲ್ಲಿ ತಾಲೂಕು ಪಂಚಾಯ್ತಿ ಸೇರಿದಂತೆ ಇನ್ನಿತರೆ ಕಚೇರಿಗಳು ಒಂದೇ ಕಟ್ಟಡಕ್ಕೆ ಸ್ಥಳಾಂತರಗೊಳ್ಳಲಿವೆ. ಸೋಮವಾರ ದಿಂದಲೇ ಮಿನಿವಿಧಾನಸೌಧದಲ್ಲಿ ಕಾರ್ಯರಂಭ ಮಾಡುವ ಇಂಗಿತವನ್ನು ತಹಸೀಲ್ದಾರ್‌ ಕುನಾಲ್‌ ವ್ಯಕ್ತಪಡಿಸಿದ್ದಾರೆ.ಭಾನುವಾರ ನಡೆದ ಪೂಜೆ ಮತ್ತು ಹೋಮಹವನದ ಮೂಲಕ ಕಚೇರಿ ಪೂಜೆ ನೆರವೇರಿಸಲಾಯಿತು. ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯ್ತಿ ಕಾರ್ಯನಿರ್ವಹಣೆ ಅಧಿಕಾರಿ ಶಿವ ರಾಮು ಸೇರಿದಂತೆ ಕಂದಾಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next