ಕಲಾವಿದೆ ರಕ್ಷಾ ಶ್ರೀರಾಮ್ ಅವರ ಪರಿಕಲ್ಪನೆಯಲ್ಲಿ “ದಿ ಚಕ್ರಾಸ್’- ಪ್ರಜ್ಞೆಯೆಡೆಗಿನ ಯಾತ್ರೆ ಎಂಬ ಕಂಟೆಂಪರರಿ ಡ್ಯಾನ್ಸ್ ಮತ್ತು ಫ್ಯೂಷನ್ ಮ್ಯೂಸಿಕ್ ಕಾರ್ಯಕ್ರಮ ನಡೆಯಲಿದೆ. ಅಭಿನಯದ ಮೂಲಕ ಮಾನವ ಜೀವನದ ಏಳು ಚಕ್ರಗಳನ್ನು ತೆರೆಯ ಮೇಲೆ ಅಭಿವ್ಯಕ್ತಿಸಲಾಗುವುದು.
ಕಲಾವಿದೆ ದಿವ್ಯಾ ರಘುರಾಮ್ ಮತ್ತು ನೃತ್ಯ ಸಂಯೋಜಕಿ ವೀಣಾ ಬಸವರಾಜಯ್ಯ ಮಾರ್ಗದರ್ಶನದಲ್ಲಿ ಐನೇಶ್ ಮದನ್, ಅನಿಶಾ ತವಗ್, ದಯಿತಾ ನೆರೆಯೆತ್, ಜೀನ್-ರೋಸ್ ಫ್ಲಾಡ್‌ಬರ್ಗ್, ಜೀಷುವಾ ಸೈಲೊ, ಪರಿಧಿ ಬಿಹಾನಿ, ಶರಣ್ಯ ರಾವ್, ಸೋನಿಯಾ ಪೊನ್ನಮ್ಮ ದೇವಯ್ಯ ಮತ್ತು ಸ್ವಾತಿ ಅಯ್ಯಂಗಾರ್, ನೃತ್ಯ ಪ್ರದರ್ಶನ ನೀಡುವರು. ಭರತನಾಟ್ಯ, ಕಥಕ್, ಕಳರಿಪಯಟ್ಟು, ಬ್ಯಾಲೆ, ಹಿಪ್‌ಹಾಪ್ ಮುಂತಾದ ನೃತ್ಯಪ್ರಕಾರಗಳನ್ನು ಇದರಲ್ಲಿ ಬಳಸಲಾಗಿದೆ.
ಸಂಗೀತ ನಿರ್ದೇಶಕ ರವಿಚಂದರ್ ಕೂಳೂರ್, ಗಾಯಕಿ ಬಿಂದುಮಾಲಿನಿ ನಾರಾಯಣಸ್ವಾಮಿ, ವಾರಿಜಾ ವೇಣುಗೋಪಾಲ್, ಗಿರಿಧರ್ ಉಡುಪ (ಘಟಂ), ಪ್ರಮಥ್ ಕಿರಣ್ (ರಿದಂ ಅರೇಂಜರ್), ವರುಣ್ ಪ್ರದೀಪ್ (ಕೀಬೋರ್ಡ್), ಸಿದ್ದಾರ್ಥ ಬೆಳ್ಮಣ್ ಮತ್ತು ಮರಿಯಾ ಗಲೆನಿನಾ ಭಾಗವಹಿಸಲಿದ್ದಾರೆ. ಈ ಪ್ರದರ್ಶನ 15 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮಾತ್ರ. ಟಿಕೆಟ್‌ಗಳು ಬುಕ್‌ಮೈಶೋ ಮತ್ತು ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಲಭ್ಯ.
ಎಲ್ಲಿ?: ಚೌಡಯ್ಯ ಮೆಮೋರಿಯಲ್ ಹಾಲ್, ವಯ್ನಾಲಿಕಾವಲ್
ಯಾವಾಗ?: ಅ.12, ಶನಿವಾರ ಸಂಜೆ 7.30