Advertisement

ಸಿದ್ಧಾರೂಢ ಮಠದಲ್ಲಿ ದೀಪಗಳ ಸಂಭ್ರಮ

12:13 PM Nov 19, 2017 | |

ಹುಬ್ಬಳ್ಳಿ: ಇಲ್ಲಿನ ಶ್ರೀ ಸಿದ್ಧಾರೂಢ ಸ್ವಾಮಿ ಮಠದಲ್ಲಿ ಶನಿವಾರ ಕಾರ್ತಿಕ ಅಮವಾಸ್ಯೆಯಂದು ಸಾವಿರಾರು ಭಕ್ತರು ಜ್ಯೋತಿ ಬೆಳಗಿಸುವ ಮೂಲಕ ಲಕ್ಷ ದೀಪೋತ್ಸವವನ್ನು ಅದ್ಧೂರಿಯಾಗಿ ಆಚರಿಸಿದರು. ಸಿದ್ಧಾರೂಢಸ್ವಾಮಿ ಗದ್ದುಗೆಯಿಂದ ಮಠದ ಮುಖ್ಯದ್ವಾರದ ವರೆಗೂ ದೀಪಗಳ ಅಲಂಕಾರ ಮಾಡಲಾಗಿತ್ತು.

Advertisement

ಮಠದ ಆವರಣ ಹಾಗೂ ಮುಖ್ಯ ರಸ್ತೆ ಹಾಗೂ ಶ್ರೀಮಠದ ಯಾತ್ರಿ ನಿವಾಸ, ಕೆರೆಯ ಸುತ್ತಮುತ್ತಲ ಪ್ರದೇಶವು ಎಣ್ಣೆ ದೀಪಗಳಿಂದ ಝಗಮಗಿಸುತ್ತಿತ್ತು. ಶ್ರೀ ಸಿದ್ಧಾರೂಢಸ್ವಾಮಿ ಮಠಕ್ಕೆ ಸಂಪೂರ್ಣವಾಗಿ ವಿದ್ಯುತ್‌ ಅಲಂಕಾರ ಮಾಡಲಾಗಿತ್ತು.

ದೀಪೋತ್ಸವ ನಿಮಿತ್ತ ಮಠದ ಆವರಣದಲ್ಲಿ ಭಕ್ತರು ಆಕಾಶ ಬುಟ್ಟಿ ಹಾರಿ ಬಿಟ್ಟರು.ದೀಪೋತ್ಸವ ನಿಮಿತ್ತ ಮಠದ ಆವರಣದಲ್ಲಿ ಭಕ್ತರು ಆಕಾಶ ಬುಟ್ಟಿ ಹಾರಿ ಬಿಟ್ಟರು. ಅವಳಿನಗರದ ಶ್ರೀಮಠದ ಭಕ್ತರಲ್ಲದೆ ಸುತ್ತಮುತ್ತಲಿನ ಗ್ರಾಮಗಳ ಹಾಗೂ ನೆರೆ ರಾಜ್ಯಗಳ ಸಾವಿರಾರು ಭಕ್ತರು ದೀಪೋತ್ಸವದಲ್ಲಿ ಪಾಲ್ಗೊಳ್ಳುವ ಮೂಲಕ ಸದ್ಗರುಗಳ ಕೃಪಾಶೀರ್ವಾದಕ್ಕೆ ಪಾತ್ರರಾದರು. 

ಇದಕ್ಕೂ ಮುನ್ನ ಲಕ್ಷ ದೀಪೋತ್ಸವ ಕಾರ್ಯಕ್ರಮಕ್ಕೆ ಶ್ರೀಮಠದ ಮುಖ್ಯ ಆಡಳಿತಾಧಿಕಾರಿಯಾಗಿರುವ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರಾಮಚಂದ್ರ ಹುದ್ದಾರ ಅವರು ಚಾಲನೆ ನೀಡಿದರು. ಶ್ರೀ ಮಠದ ಟ್ರಸ್ಟ್‌ ಚೇರ್ಮನ್‌ ಧರಣೇಂದ್ರ ಜವಳಿ ಅಧ್ಯಕ್ಷತೆ ವಹಿಸಿದ್ದರು. 

ಆಳಂದ ಶ್ರೀ ವಾಸುದೇವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶ್ರೀಮಠದಲ್ಲಿ ಲಕ್ಷ ದೀಪೋತ್ಸವ ಹಾಗೂ ಅಮವಾಸ್ಯೆ ನಿಮಿತ್ತ ಬೆಳಗ್ಗೆಯಿಂದ ರಾತ್ರಿ ವರೆಗೂ ಉಭಯ ಶ್ರೀಗಳ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಭಕ್ತಾದಿಗಳು ಸರದಿಯಲ್ಲಿ ನಿಂತು ಉಭಯ ಶ್ರೀಗಳ ಗದ್ದುಗೆ ದರ್ಶನ ಪಡೆದರು. ಶ್ರೀಮಠದ ವೈಸ್‌ ಚೇರ್ಮನ್‌ ಜ್ಯೋತಿ ಸಾಲಿಮಠ,

Advertisement

ಧರ್ಮದರ್ಶಿಗಳಾದ ಗೀತಾ ಎಸ್‌.ಜಿ., ಮಹೇಂದ್ರ ಸಿಂ, ನಾರಾಯಣಸಾ ಮೆಹರವಾಡೆ,  ನಾರಾಯಣ ನಿರಂಜನ, ನಾರಾಯಣಪ್ರಸಾದ ಪಾಠಕ, ರಂಗಾ ಬದ್ದಿ, ಶ್ಯಾಮಾನಂದ ಪೂಜೇರಿ, ಯಲ್ಲಪ್ಪ ದೊಡ್ಡಮನಿ, ಬಿ.ವಿ. ಸೋಮಾಪುರ, ಕೆ.ಎಲ್‌. ಪಾಟೀಲ, ಜಿ.ಜಿ. ಅಮೋ ಮಠ ಮುಂತಾದವರು ಪಾಲ್ಗೊಂಡಿದ್ದರು.  

Advertisement

Udayavani is now on Telegram. Click here to join our channel and stay updated with the latest news.

Next