Advertisement

Prajwal Revanna ಲೈಂಗಿಕ ದೌರ್ಜನ್ಯ ಪ್ರಕರಣ: ಪೊಲೀಸರ  ಕಾರ್ಯವೈಖರಿ ಬಗ್ಗೆ ವಕೀಲರ ಸಂಶಯ

11:15 PM May 02, 2024 | Team Udayavani |

ಹೊಳೆನರಸೀಪುರ: ದೇಶಾದ್ಯಂತ ತಲ್ಲಣ ಸೃಷ್ಟಿಸಿರುವ ಶಾಸಕ ರೇವಣ್ಣ,  ಸಂಸದ ಪ್ರಜ್ವಲ್‌ ರೇವಣ್ಣ ಅವರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಹೊಳೆನರಸೀಪುರ ಪೊಲೀಸರು ಸಂತ್ರಸ್ತೆ ನೀಡಿರುವ ದೂರಿಗೆ ಸೂಕ್ತ ಕಲಂಗಳನ್ನು ಅನ್ವಯಿಸಿಲ್ಲ ಎಂದು ಹಿರಿಯ ವಕೀಲರಾದ ಸೂರನಹಳ್ಳಿ ಮೋಹನ್‌ ಕುಮಾರ್‌, ಎಸ್‌.ಆರ್‌.ಶ್ರೀನಿವಾಸ್‌, ಎಚ್‌.ಆರ್‌.ಮಂಜುನಾಥ್‌ ಹಾಗೂ ಶಿವರಾಂ ಆರೋಪಿಸಿದರು.

Advertisement

ಪಟ್ಟಣದ ಮೋಹನ್‌ ಕುಮಾರ್‌ ಅವರ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂತ್ರಸ್ತೆ ನೀಡಿರುವ ದೂರನ್ನು ಕಲಂ 354  ಪ್ರಕಾರ ದಾಖಲಿಸಿಕೊಳ್ಳಬೇಕಿತ್ತು. ಈ ಕಲಂ ಹೇರಿದ್ದರೆ ಆರೋಪಿಗಳನ್ನು ಕಾಲಾವಕಾಶ ನೀಡದೆ ಬಂಧಿಸಬಹುದಾಗಿತ್ತು. ಆದರೆ ಈಗ ದಾಖಲಿಸಿರುವ ಕಲಂ ಪ್ರಕಾರ ಆರೋಪಿಗಳಿಗೆ ಠಾಣೆಯಲ್ಲೇ ಜಾಮೀನು ನೀಡಬಹುದಾಗಿದೆ. ಆದ್ದರಿಂದ  ಪೊಲೀಸರ ಕಾರ್ಯವೈಖರಿ ಬಗ್ಗೆ ಸಂಶಯವಿದೆ ಎಂದರು.

ಎಚ್‌ಡಿಕೆಯದ್ದು ದಿಕ್ಕು ತಪ್ಪಿಸುವ ಮಾತು

ಪೆನ್‌ಡ್ರೈವ್‌ ಬಯಲು ಮಾಡಿದಾತನನ್ನು ಮೊದಲು ಪತ್ತೆ ಹಚ್ಚಿ ಬಳಿಕ  ಪ್ರಜ್ವಲ್‌  ಮೇಲಿನ ಆರೋಪದ ಬಗ್ಗೆ ತನಿಖೆ ಆರಂಭಿಸಲಿ ಎಂಬರ್ಥದಲ್ಲಿ ಕುಮಾರಸ್ವಾಮಿ ಅವರು ಮಾತನಾಡುತ್ತಿದ್ದಾರೆ. ಅವರು ಅನಗತ್ಯ ವಿಷಯಗಳ ಮೂಲಕ ತನಿಖಾ ತಂಡದ ದಿಕ್ಕು ತಪ್ಪಿಸಲು ಯತ್ನಿಸುತ್ತಿದ್ದಾರೆಂದು ದೂರಿದರು.

Advertisement

Udayavani is now on Telegram. Click here to join our channel and stay updated with the latest news.

Next