Advertisement

New Jersey; ಪುತ್ತಿಗೆ ಮಠದ ಶಾಖಾ ಮಠದಲ್ಲಿ ರಾಮನವಮಿ ಸಂಭ್ರಮ

09:48 AM Apr 22, 2024 | Team Udayavani |

ಉಡುಪಿ: ಶ್ರೀ ಪುತ್ತಿಗೆ ಮಠದ ಶಾಖಾ ಮಠಗಳಲ್ಲಿ ಈ ಬಾರಿ ಎಂದಿಗಿಂತಲೂ ಹೆಚ್ಚು ವೈಭವದಲ್ಲಿ ರಾಮ ನವಮಿ ಮಹೋತ್ಸವವನ್ನು ವಾರಾಂತ್ಯದಲ್ಲಿ ಆಚರಿಸಲಾಯಿತು.

Advertisement

ಅಮೇರಿಕಾದ ನ್ಯೂಜರ್ಸಿಯಲ್ಲಿರುವ ಪುತ್ತಿಗೆ ಮಠದ ಶ್ರೀಕೃಷ್ಣ ವೃಂದಾವನದಲ್ಲಿ ಸೀತಾರಾಮ ಕಲ್ಯಾಣ ಮಹೋತ್ಸವವನ್ನು ಶ್ರೀರಾಮಪಟ್ಟಾಭಿಷೇಕ ಸಹಿತವಾಗಿ ಮಾಡಲಾಯಿತು.

ಈ ವರ್ಷ ನಿರ್ಮಾಣಗೊಂಡ ರಾಮಮಂದಿರದ ಪ್ರತಿಕೃತಿಯನ್ನು ರಾಘವೇಂದ್ರ ಮೂರ್ತಿ ತಂಡದವರು ನಿರ್ಮಿಸಿದ್ದು ಭಕ್ತರ ಗಮನ ಸೆಳೆಯಿತು. ಪ್ರಧಾನ ಅರ್ಚಕ ಯೋಗೀಂದ್ರ ಭಟ್ ಉಳಿ ಇವರು ಧಾರ್ಮಿಕ ವಿಧಿ ವಿಧಾನಗಳನ್ನು ನಿರ್ವಹಿಸಿದರು.

ಮಠದ ಸಾಗರೋತ್ತರ ಶಾಖೆಗಳ ಪ್ರಧಾನ ಕಾರ್ಯದರ್ಶಿ ಪ್ರಸನ್ನಾಚಾರ್ಯರವರು ಕಲ್ಯಾಣೋತ್ಸವವನ್ನು ನೆರವೇರಿಸಿ ಗುರುಗಳಾದ ಪುತ್ತಿಗೆ ಶ್ರೀಪಾದರ ಪರ್ಯಾಯಕ್ಕೆ ಬರೆದ ಗೀತಪುಸ್ತಕಗಳೊಂದಿಗೆ ಬರಲು ಆಹ್ವಾನಿಸಿದರು.

ಕಲ್ಯಾಣೋತ್ಸವದಲ್ಲಿ ಪುಟಾಣಿಗಳಿಂದ ನಡೆದ ವಿವಿಧ ಶ್ರೀರಾಮಭಜನ ನೃತ್ಯಗಳು ಕಾರ್ಯಕ್ರಮಕ್ಕೆ ಹೆಚ್ಚಿನ ಮೆರಗು ನೀಡಿತು.

Advertisement

ಹಿನ್ನೆಲೆ ಗಾಯನ ತಂಡ ವೈಶಿಷ್ಟ್ಯ ಪೂರ್ಣ ಹಾಡುಗಳನ್ನು ಹಾಡುವ ಮೂಲಕ ಸಭೆಯನ್ನು ಮುದಗೊಳಿಸುವಲ್ಲಿ ಸಾಫಲ್ಯವನ್ನು ಕಂಡಿತು.

ಡಿ.27 ರಿಂದ ಉಡುಪಿಯಲ್ಲಿ ಪರ್ಯಾಯ ಶ್ರೀಪಾದರ ಅಣತಿಯಂತೆ ನಡೆಯುವ  ಗೀತೋತ್ಸವದಲ್ಲಿ ಈಗಾಗಲೇ  ಶ್ರೀಮಠದಿಂದ  ನಡೆಯುತ್ತಿರುವ ಗೀತಾ ಕ್ಲಾಸ್ ನಲ್ಲಿ  ತರಬೇತಿಗೊಂಡ ಸಾವಿರಾರು ಮಕ್ಕಳು ನ್ಯೂಜರ್ಸಿ ಮೊದಲಾದ ವಿದೇಶದ ಅನೇಕ ಊರುಗಳಿಂದ ಉಡುಪಿಗೆ ತಮ್ಮ ಗೀತಾ ಸೇವೆಯನ್ನು ಸಲ್ಲಿಸಲು ಆಗಮಿಸಲಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಗಳನ್ನು ಹಂಚಿಕೊಳ್ಳಲಾಯಿತು.

ಹೂಸ್ಟನ್ ಮಹಾನಗರದಲ್ಲಿರುವ ಶ್ರೀಕೃಷ್ಣಾ ವೃಂದಾವನದಲ್ಲಿ ಸೀತಾರಾಮ ಕಲ್ಯಾಣೋತ್ಸವ ಸಹಿತವಾಗಿ ಉದಯಾಸ್ತ ಪರ್ಯಂತ ಅಖಂಡ ಭಜನೆಯನ್ನು ವಿವಿಧ ತಂಡಗಳ ಸಹಯೋಗದೊಂದಿಗೆ ವೈಭವದಲ್ಲಿ ನೆರವೇರಿಸಲಾಯಿತು.

ಇನ್ನಿತರ ಶ್ರೀಮಠದ ಶಾಖೆಗಳಲ್ಲೂ ಸೀತಾರಾಮ ಕಲ್ಯಾಣ ಮಹೋತ್ಸವವನ್ನು ವೈಭವದಲ್ಲಿ ನೆರವೇರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next