Advertisement
ಪ್ರವಾಸೋದ್ಯಮ ಉದ್ಯಾನ ಸಹಿತ ಕೇಂದ್ರ ಪಾಣಾರ್‌ಕುಳಂನಲ್ಲಿ ಈ ನಿಟ್ಟಿನಲ್ಲಿ ಸ್ಥಾಪನೆಗೊಳ್ಳಲಿದೆ. ಕಂದಾಯ ಇಲಾಖೆ ಈ ಯೋಜನೆಗಾಗಿ ಪ್ರವಾಸೋ ದ್ಯಮ ಇಲಾಖೆಗೆ ಹಸ್ತಾಂತರಿಸಿದ 50 ಸೆಂಟ್ಸ್ ಜಾಗದಲ್ಲಿ ಚೆಂಗಳ ಗ್ರಾ. ಪಂ.ಸಹಾಯದೊಂದಿಗೆ ಪ್ರವಾಸೋದ್ಯಮ ಉದ್ಯಾನ ನಿರ್ಮಾಣಗೊಳ್ಳಲಿದೆ. ರಾಷ್ಟ್ರೀಯ ಹೆದ್ದಾರಿ ಬದಿ ವಿದೇಶಿ ಪ್ರವಾಸಿಗರನ್ನೂ ಆಕರ್ಷಿಸುವ ನಿಟ್ಟಿನಲ್ಲಿ ಈ ಕೇಂದ್ರವನ್ನು ಸ್ಥಾಪಿಸಲಾಗುವುದು ಎಂದು ಪ್ರವಾಸೋದ್ಯಮ ಇಲಾಖೆಯ ಅ ಧಿಕಾರಿಗಳು ತಿಳಿಸಿದರು.
Related Articles
Advertisement
ಕಾಮಗಾರಿಗೆ ಚಾಲನೆ ಚೆಂಗಳ ಗ್ರಾಮ ಪಂಚಾಯತ್‌ನ ಪಾಣಾರ್‌ಕುಳಂನಲ್ಲಿ ನಿರ್ಮಾಣಗೊಳ್ಳುವ ಕಾಸ್ರೋಡ್ ಕೆಫೆ ಪ್ರವಾಸೋದ್ಯಮ ಉದ್ಯಾನ ನಿರ್ಮಾಣ ಸಂಬಂಧ ನಡೆಯುವ ಕಾಮಗಾರಿಗೆ ಶಾಸಕ ಎನ್.ಎ.ನೆಲ್ಲಿಕುನ್ನು ಚಾಲನೆ ನೀಡಿದರು. ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ. ಬಶೀರ್, ಜಿಲ್ಲಾ ಧಿಕಾರಿ ಡಾ| ಡಿ. ಸಜಿತ್ ಬಾಬು, ಡಿ.ಟಿ.ಪಿ.ಸಿ. ಕಾರ್ಯದರ್ಶಿ ಬಿಜು ರಾಘವನ್ ವರದಿ ವಾಚಿಸಿದರು. ಚೆಂಗಳ ಗ್ರಾಮ ಪಂಚಾಯತ್ ಅಧ್ಯಕ್ಷೆ ಶಾಹಿನಾ ಸಲೀಂ, ಉಪಾಧ್ಯಕ್ಷೆ ಶಾಂತಕುಮಾರಿ ಟೀಚರ್, ಡಿ.ಟಿ.ಪಿ.ಸಿ. ಪ್ರಬಂಧಕ ಪಿ.ಸುನಿಲ್ ಕುಮಾರ್, ಗ್ರಾಮ ಪಂಚಾಯತ್ ಸ್ಥಾಯೀ ಸಮಿತಿ ಅಧ್ಯಕ್ಷರಾದ ಎ. ಅಹಮ್ಮದ್ ಹಾಜಿ, ಹಾಜಿರಾ ಮಹಮ್ಮದ್ ಕುಂಞಿ, ಶಾಹಿದಾ ಮಹಮ್ಮದ್, ಜಿಲ್ಲಾ ಪಂಚಾಯತ್ ಸದಸ್ಯ ಮುಂತಾಝ್ ಝಮೀರ, ಖದೀಜಾ ಮಹಮೂದ್, ಪಂಚಾಯತ್ ಮಾಜಿ ಅಧ್ಯಕ್ಷ ಸಿ.ಬಿ. ಅಬ್ದುಲ್ಲ ಹಾಜಿ, ಪಂಚಾಯತ್ ಕಾರ್ಯದರ್ಶಿ ಎಂ. ಸುರೇಂದ್ರನ್, ಜನಪ್ರತಿನಿಧಿಗಳು ಉಪಸ್ಥಿತರಿದ್ದರು. ಹಣಕಾಸು ಯೋಜನೆ
ಪ್ರವಾಸೋದ್ಯಮ ಇಲಾಖೆಯ ಎಂಪಾನೆಲ್ಡ್ ಆರ್ಕಿಟೆಕ್ಟ್ ಪಿ.ಸಿ. ರಶೀದ್ ಅವರು ಸಿದ್ಧಪಡಿಸಿದ ಯೋಜನೆ ಪ್ರಕಾರ ನಿರ್ಮಿತಿ ಕೇಂದ್ರ ಈ ಕಾಮಗಾರಿ ನಡೆಸುತ್ತಿದೆ. 1.53 ಕೋಟಿ ರೂ. ವೆಚ್ಚ ನೀರಿಕ್ಷಿಸಲಾಗುತ್ತಿದ್ದು, ಜಿ.ಪಂ. 25 ಲಕ್ಷ ರೂ., ಚೆಂಗಳ ಗ್ರಾ. ಪಂ. 25 ಲಕ್ಷ ರೂ., ಶಾಸಕ ಎನ್.ಎ. ನೆಲ್ಲಿಕುನ್ನು ಅವರ ಸ್ಥಳೀಯ ಅಭಿವೃದ್ಧಿ ನಿ ಧಿಯಿಂದ 5 ಲಕ್ಷ ರೂ. ಮಂಜೂರುಗೊಳಿಸಲು ನಿರ್ಧರಿಸಲಾಗಿದೆ ಎಂದು ಅ ಧಿಕಾರಿಗಳು ಹೇಳಿದರು. ಪ್ರವಾಸೋದ್ಯಮ ಇಲಾಖೆ 98 ಲಕ್ಷ ರೂ. ನೀಡುವ ಕುರಿತು ಮಾತುಕತೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು.