Advertisement

Deepavali Festival: ಹುಬ್ಬಳ್ಳಿ, ಮೈಸೂರು, ಬೆಂಗಳೂರು ನಡುವೆ 55 ವಿಶೇಷ ರೈಲುಗಳ ಸಂಚಾರ

02:53 PM Oct 29, 2024 | Team Udayavani |

ಹುಬ್ಬಳ್ಳಿ: ದೀಪಾವಳಿ ಮತ್ತು ಛತ್‌ ಪೂಜಾ ಹಬ್ಬದ ಸಂದರ್ಭದಲ್ಲಿ ಹೆಚ್ಚಿದ ಪ್ರಯಾಣಿಕರ ದಟ್ಟಣೆ ಹಿನ್ನೆಲೆಯಲ್ಲಿ ನೈಋತ್ಯ ರೈಲ್ವೆಯು ಹುಬ್ಬಳ್ಳಿ, ಮೈಸೂರು ಮತ್ತು ಬೆಂಗಳೂರು ವಿಭಾಗಗಳಾದ್ಯಂತ ಒಟ್ಟು 55 ರೈಲುಗಳನ್ನು ಓಡಿಸುತ್ತಿದೆ.

Advertisement

ವಿಶೇಷ ರೈಲುಗಳೊಂದಿಗೆ ಪ್ರಯಾಣಿಕರ ಆರಾಮ ಮತ್ತು ಸುರಕ್ಷತಾ ಸೇವೆಗೂ ಕ್ರಮ ಕೈಗೊಂಡಿದೆ. ಸಾಮಾನ್ಯ ರೈಲುಗಳ ದಟ್ಟಣೆ
ನಿವಾರಿಸಲು, ವೇಟಿಂಗ್‌ ಲಿಸ್ಟ್‌ ಆಧಾರದ ಮೇಲೆ ಹೆಚ್ಚುವರಿ ಬೋಗಿಗಳನ್ನು ಹೆಚ್ಚಿಸಲಾಗಿದೆ.

ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಾಸ್ಕೋ ಡ ಗಾಮಾ, ಗದಗ, ಹೊಸಪೇಟೆ, ಬಳ್ಳಾರಿ, ವಿಜಯಪುರ, ಬಾಗಲಕೋಟೆ, ಬೆಂಗಳೂರು, ಯಶವಂತಪುರ, ಮೈಸೂರು, ತುಮಕೂರು, ಬೆಂಗಳೂರು ಕಂಟೋನ್ಮೆಂಟ್‌, ಮಂಡ್ಯ, ಹಾಸನ, ದಾವಣಗೆರೆ ಮತ್ತು ನೈಋತ್ಯ ರೈಲ್ವೆಯ ಇತರೆ ರೈಲ್ವೆ ನಿಲ್ದಾಣಗಳಲ್ಲಿ ಜನಸಂದಣಿ ನಿಯಂತ್ರಿಸಲು ಅಧಿಕಾರಿಗಳು, ವಾಣಿಜ್ಯ ಸಿಬ್ಬಂದಿ ಮತ್ತು ಸ್ಕೌಟ್ಸ್‌ ಮತ್ತು ಗೈಡ್ಸ್‌ ಸ್ವಯಂ ಸೇವಕರು ಭದ್ರತಾ ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿ ಸುತ್ತಿದ್ದಾರೆ. ಸುವ್ಯವಸ್ಥೆ ಮತ್ತು ಭದ್ರತೆ ಕಾಪಾಡಿಕೊಳ್ಳಲು ರೈಲ್ವೆ ಸುರಕ್ಷತಾ ಬಲ (ಆರ್‌ಪಿಎಫ್‌) ಹಾಜರಿ ಹೆಚ್ಚಿಸಲಾಗಿದೆ.

ಹೆಚ್ಚುವರಿ ಸಿಸಿಟಿವಿ ಕ್ಯಾಮೆರಾಗಳು ಮತ್ತು ಬ್ಯಾಗೇಜ್‌ ಸ್ಕ್ಯಾನರ್‌ಗಳ ಸ್ಥಾಪನೆಯೊಂದಿಗೆ ಭದ್ರತೆ ಹೆಚ್ಚಿಸಲಾಗಿದೆ. ವಲಯದ ಎಲ್ಲಾ ಪ್ರಮುಖ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ತಾತ್ಕಾಲಿಕ ಸಹಾಯ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ನಿರಂತರ ಎಟಿವಿಎಂ
ಟಿಕೆಟಿಂಗ್‌ನ ಅನುಕೂಲಕ್ಕಾಗಿ ಎಲ್ಲಾ ಎಟಿವಿಎಂ ಆಯೋಜಕರಿಗೆ ಹೆಚ್ಚುವರಿ ಸ್ಮಾರ್ಟ್‌ ಕಾರ್ಡ್‌ಗಳನ್ನು ಮುಂಚಿತವಾಗಿ
ನೀಡಲಾಗಿದೆ.

ಹೆಚ್ಚುವರಿ ಟಿಕೆಟಿಂಗ್‌ ಕೌಂಟರ್‌ಗಳನ್ನು ಒದಗಿಸಲಾಗಿದೆ. ವಿಶೇಷ ರೈಲುಗಳ ಲಭ್ಯತೆ ಬಗ್ಗೆ ಪ್ರಯಾಣಿಕರಿಗೆ ಮಾರ್ಗದರ್ಶನ ನೀಡಲು ನಿಲ್ದಾಣಗಳಲ್ಲಿ ಹೆಚ್ಚುವರಿ ಟಿಕೆಟ್‌ ತಪಾಸಣಾ ಸಿಬ್ಬಂದಿ ನಿಯೋಜಿಸಲಾಗುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next