Advertisement

ಹತ್ತೇ ದಿನದಲ್ಲಿ ಸೇತುವೆ ನಿರ್ಮಾಣ

06:10 AM Jan 15, 2018 | Team Udayavani |

ವಿಶ್ವಸಂಸ್ಥೆ: ಕಳೆದ ವರ್ಷದ ಜೂನ್‌ ತಿಂಗಳಲ್ಲಿ ನಡೆದ ಮೇಘ ಸ್ಫೋಟದಿಂದಾಗಿ ಈ ಗ್ರಾಮವನ್ನು ನಗರಕ್ಕೆ ಸಂಪರ್ಕಿಸಲು ಇದ್ದ ಏಕೈಕ ಸೇತುವೆ ಕೊಚ್ಚಿ ಹೋಗಿತ್ತು. ಅಂದಿನಿಂದ ಗ್ರಾಮಸ್ಥರ ಜೀವನವೇ ದುರ್ಬರವಾಗಿತ್ತು. ಆವಶ್ಯಕ ವಸ್ತುಗಳನ್ನು ತರಬೇಕಿದ್ದರೂ ಪ್ರಾಣದ ಹಂಗು ತೊರೆದು, ಕುತ್ತಿಗೆಯವರೆಗಿನ ನೀರಲ್ಲಿ ಮುಳುಗಿಕೊಂಡು ನದಿ ದಾಟಿ ಪಟ್ಟಣ ತಲುಪಬೇಕಿತ್ತು. ಇವರ ಈ ಸಮಸ್ಯೆಯನ್ನು ಇದೀಗ ಭಾರ,ತೀಯ ಶಾಂತಿದೂತರು ಪರಿಹರಿಸಿದ್ದಾರೆ.

Advertisement

ಹೌದು. ದಕ್ಷಿಣ ಸುಡಾನ್‌ನ ಅಕೋಕಾ ಗ್ರಾಮದಲ್ಲಿ ಕೊಚ್ಚಿಹೋಗಿದ್ದ ಸೇತುವೆಯನ್ನು ವಿಶ್ವಸಂಸ್ಥೆಯ ಮಿಷನ್‌ನಲ್ಲಿರುವ ಭಾರತೀಯ ಶಾಂತಿಸಂದೇಶವಾಹಕರು ಮರು ನಿರ್ಮಾಣ ಮಾಡಿದ್ದಾರೆ. ಅದೂ ಕೇವಲ 10 ದಿನಗಳಲ್ಲಿ. ಭಾರತೀಯರ ಈ ಕಾರ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಸರಕಾರದ ನೆರವಿನೊಂದಿಗೆ ಶಾಂತಿದೂತರು ಸಮರೋಪಾದಿಯಲ್ಲಿ ಕೆಲಸ ನಿರ್ವಹಿಸಿ ಸೇತುವೆ ನಿರ್ಮಿಸಿದ್ದಾರೆ. ಹೀಗಾಗಿ ಆ ಪ್ರದೇಶಕ್ಕೆ ಸಂಪರ್ಕ ಸಾಧಿಸಲು ಸಾಧ್ಯವಾಗಿದ್ದು, ಭದ್ರತಾ ಗಸ್ತು, ಮಾನವೀಯ ನೆರವು, ಆಹಾರ ವಸ್ತುಗಳ ಪೂರೈಕೆ ಎಲ್ಲವೂ ಸುಲಭವಾಗಿದೆ ಎಂದು ವಿಶ್ವಸಂಸ್ಥೆ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next