Advertisement

ಬಿಜೆಪಿ ವಾರಸುದಾರಿಕೆ ಕುಟುಂಬಕ್ಕೆ ವರ್ಗಾವಣೆ ಆಗದು

11:28 PM Apr 17, 2019 | Team Udayavani |

ದಾವಣಗೆರೆ: “ಕಾಂಗ್ರೆಸ್‌-ಜೆಡಿಎಸ್‌ನಂತೆ ಬಿಜೆಪಿ ವಾರಸುದಾರಿಕೆ ಬಿ.ಎಸ್‌.ಯಡಿಯೂರಪ್ಪನವರ ಕುಟುಂಬದವರಿಗೆ ವರ್ಗಾವಣೆ ಆಗಲ್ಲ’ ಎಂದು ಶಾಸಕ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್‌ನಲ್ಲಿ ಪಕ್ಷದ ವಾರಸುದಾರಿಕೆ ಸರಣಿ ಇದೆ. ನೆಹರೂ ನಂತರ, ಇಂದಿರಾಗಾಂಧಿ, ರಾಜೀವ್‌ ಗಾಂಧಿ, ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಹೀಗೆ ನೆಹರೂ ಕುಟುಂಬದವರು ಒಬ್ಬರಾದ ಮೇಲೆ ಒಬ್ಬರಂತೆ ಆ ಪಕ್ಷದ ವಾರಸುದಾರಿಕೆ ಪಡೆಯುತ್ತಿದ್ದಾರೆ ಎಂದರು.

ಇನ್ನು ಜೆಡಿಎಸ್‌ನಲ್ಲಿ ಅಪ್ಪ ಮಗನಿಗೆ ಆಸ್ತಿ ನೀಡಿದಂತೆ ಪಕ್ಷದ ವಾರಸುದಾರಿಕೆ ಹಸ್ತಾಂತರಿಸಿದ್ದಾರೆ. ಕಾಂಗ್ರೆಸ್‌-ಜೆಡಿಎಸ್‌ ಎರಡೂ ಪಕ್ಷಗಳಲ್ಲಿ ಆಂತರಿಕ ಪ್ರಜಾಪ್ರಭುತ್ವವಿಲ್ಲ. ಉಭಯ ಪಕ್ಷಗಳ ಹಿಡಿತ ಒಂದೇ ಕುಟುಂಬದ ಕೈಯಲ್ಲಿದೆ. ಆದರೆ, ಭಾರತೀಯ ಜನತಾ ಪಕ್ಷದಲ್ಲಿ ಹಾಗೆ ನಡೆಯಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದರು.

ಬಿಜೆಪಿಯಲ್ಲಿ ಸದ್ಯ ಯಡಿಯೂರಪ್ಪ ನಮ್ಮ ನಾಯಕರಾಗಿದ್ದಾರೆ. ಅವರ ನಂತರ ಪಕ್ಷದ ವಾರಸುದಾರಿಕೆ ಬಿಎಸ್‌ವೈ ಮಗ ಅಥವಾ ಕುಟುಂಬದವರಿಗೆ ವರ್ಗಾವಣೆ ಆಗುವುದಿಲ್ಲ. ಅದು ಬಿಜೆಪಿಯಲ್ಲಿ ಅಸಾಧ್ಯ. ಬಿಜೆಪಿಯಲ್ಲಿ ನರೇಂದ್ರ ಮೋದಿ ಅಥವಾ ಅಮಿತ್‌ ಶಾ ನಂತರ ಮುಂದೆ ಯಾರು ಎಂದು ಗೊತ್ತೇ ಇಲ್ಲ. ನಮ್ಮ ಪಕ್ಷದಲ್ಲಿ ಜನರ ನಡುವೆ ಬೆಳೆದವರು ಮಾತ್ರ ನಾಯಕನಾಗುತ್ತಾನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next