Advertisement

ಬಿಜೆಪಿ ಜನ್ಮತಾಳಿದ್ದು ದೇಶದ ಅಭಿವೃದ್ಧಿಗಾಗಿ; ಅಧಿಕಾರಕ್ಕಲ್ಲ

12:59 PM Apr 07, 2017 | Team Udayavani |

ದಾವಣಗೆರೆ: ಬಿಜೆಪಿ ದೇಶ, ಸಮಾಜದ ಅಭಿವೃದ್ಧಿಗಾಗಿ ಜನ್ಮತಾಳಿದೆಯೇ ಹೊರತು ಅಧಿಕಾರಕ್ಕಾಗಿ ಸ್ಥಾಪನೆಯಾಗಿರುವ ಪಕ್ಷ ಅಲ್ಲ ಬಿಜೆಪಿ ಜಿಲ್ಲಾಧ್ಯಕ್ಷ ಯಶವಂತರಾವ್‌ ಜಾಧವ್‌ ತಿಳಿಸಿದ್ದಾರೆ. ಗುರುವಾರ ಪಕ್ಷದ ಕಚೇರಿಯಲ್ಲಿ ಬಿಜೆಪಿ ಸಂಸ್ಥಾಪನಾ ದಿನ ಸಂಕಲ್ಪ ದಿವಸ್‌ನಲ್ಲಿ ಮಾತನಾಡಿದರು.

Advertisement

ಪಕ್ಷದ ಸಂಸ್ಥಾಪಕರಾದ ಶ್ಯಾಂ ಪ್ರಕಾಶ್‌ ಮುಖರ್ಜಿ, ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ, ಮಾಜಿ ಉಪ ಪ್ರಧಾನಿ ಅಡ್ವಾಣಿ, ಪ್ರಧಾನಿ ನರೇಂದ್ರ ಮೋದಿ ಅವರನ್ನೊಳಗೊಂಡಂತೆ ಎಲ್ಲಾ ನಾಯಕರು ದೇಶ, ಅಭಿವೃದ್ಧಿ ದೃಷ್ಟಿಕೋನ ಹೊಂದಿದವರು ಎಂದರು. 

ಮಹಾತ್ಮಗಾಂಧಿಯವರು ದೇಶಕ್ಕೆ ಸ್ವಾತಂತ್ರ ದೊರೆಯುತ್ತಿದ್ದಂತೆ ಕಾಂಗ್ರೆಸ್‌ ವಿಸರ್ಜಿಸಬೇಕು ಎಂಬುದಾಗಿ ಅನೇಕ ಬಾರಿ ಹೇಳಿದ್ದರು. ಆದರೆ, ಅವರು ಬಯಸಿದಂತೆ ಕಾಂಗ್ರೆಸ್‌ ವಿಸರ್ಜನೆ ಆಗಲಿಲ್ಲ. ರಾಜಕೀಯಕ್ಕೆ ಬಳಸಿಕೊಂಡು 55ಕ್ಕೂ ಹೆಚ್ಚು ವರ್ಷ ದೇಶದಲ್ಲಿ ಅಧಿಕಾರ ನಡೆಸಿತು. ಇದು ಕಾಂಗ್ರೆಸ್‌ ಅಧಿಕಾರಕ್ಕಾಗಿ ಇರುವ ಪಕ್ಷ ಎಂಬುದು ಗೊತ್ತಾಗುತ್ತದೆ ಎಂದು ತಿಳಿಸಿದರು. 

ವ್ಯಕ್ತಿಗಿಂತಲೂ ಪಕ್ಷವೇ ದೊಡ್ಡದು ಎಂಬುದು ಬಿಜೆಪಿಯ ನಿಲುವು. ಕಾಂಗ್ರೆಸ್‌ಗೆ ಪರ್ಯಾಯವಾಗಿ 1951 ರಲ್ಲಿ ಪ್ರಾರಂಭವಾದ ಜನಸಂಘ 1977 ರಲ್ಲಿ ದೇಶದ ಅಭ್ಯುದಯಕ್ಕಾಗಿ ಜನತಾ ಪಕ್ಷದಲ್ಲಿ ವಿಲೀನ ಗೊಂಡಿತು. ಮೊರಾರ್ಜಿ ದೇಸಾಯಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ಚಿಕ್ಕ ಮನಸ್ತಾಪ ಉಂಟಾಗಿದ್ದರಿಂದ ಹೊರ ಬಂದ ನಂತರ 1980ರ ಏ. 6 ರಂದು ಬಿಜೆಪಿ ಪ್ರಾರಂಭವಾಯಿತು.

1998 ರಲ್ಲಿ ಇಬ್ಬರು ಸಂಸದರನ್ನು ಹೊಂದಿದ್ದ ಬಿಜೆಪಿ ಈಗ 19 ರಾಜ್ಯದಲ್ಲಿ ಅಧಿಕಾರದಲ್ಲಿದೆ ಎಂದು ತಿಳಿಸಿದರು. ಇಬ್ಬರು ಸಂಸದರನ್ನು ನೋಡಿ ಕಾಂಗ್ರೆಸ್‌ ನವರು ಅಪಹಾಸ್ಯ ಮಾಡಿದಾಗ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರು ಮುಂದೆ ನಿಮ್ಮನ್ನು ನೋಡಿ ನಗುವ ಕಾಲ ಬಂದೇ ಬರುತ್ತದೆ ಎಂದಿದ್ದ ಮಾತು ಅಕ್ಷರಶಃ ನಿಜವಾಗಿದೆ.

Advertisement

ಮಹಾನ್‌ ನಾಯಕರು ಕಷ್ಟಪಟ್ಟು ಬೆಳೆಸಿದ ಪಕ್ಷಕ್ಕೆ ಬೆಳಕಾಗಿ ಪ್ರಧಾನಿ ನರೇಂದ್ರ ಮೋದಿ ಕೆಲಸ ಮಾಡುತ್ತಿದ್ದಾರೆ. ಮುಂದಿನ ಕರ್ನಾಟಕ, ಗುಜರಾತ್‌, ಹಿಮಾಚಲ ಪ್ರದೇಶ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಗೆದ್ದು, ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ರಾಜಕಾರಣ ಅಂದ ಮೇಲೆ ಆಸೆ ಇದ್ದೇ ಇರುತ್ತದೆ.

ಆದರೆ, ಅದು ದುರಾಸೆಯಾಗಬಾರದು. ನನ್ನಿಂದಲೇ ಪಕ್ಷ,  ನಾನಿದ್ದರೇ ಮಾತ್ರವೇ ಪಕ್ಷ ನಡೆಯುತ್ತೆ ಎಂಬ ಭಾವನೆ ತೋರಬಾರದು. ನಾವೆಲ್ಲರೂ ಒಂದಾಗಿ ಇದ್ದರೆ ಪಕ್ಷ, ನಮಗಿಂತಲೂ ಪಕ್ಷವೇ ಮುಖ್ಯ ಎಂಬ ಮನೋಭಾವನೆಯೊಂದಿಗೆ ಕೆಲಸ ಮಾಡಬೇಕು.

ಎಲ್ಲರೂ ಸಂಘಟಿತರಾಗಿ ಕೆಲಸ ಮಾಡುವ ಮೂಲಕ ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ 150+ ಗುರಿ ಸಾಧಿಸಬೇಕು ಎಂದು ಮನವಿ ಮಾಡಿದರು. ಮಾಜಿ ಅಧ್ಯಕ್ಷ ಎಲ್‌. ಬಸವರಾಜ್‌ ಮಾತನಾಡಿ, 1951 ರಲ್ಲಿ ದೀಪದ ಗುರುತಿನೊಂದಿಗೆ ಪ್ರಾರಂಭವಾದ ಜನಸಂಘ 1980ರ ಏ. 6 ರಂದು ಬಿಜೆಪಿಯಾಗಿ ಹೊರ ಹೊಮ್ಮಿತು. 37 ವರ್ಷದ ಹರೆಯದಲ್ಲಿರುವ ಬಿಜೆಪಿ ಈಗ 19 ರಾಜ್ಯ, ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿದೆ.

ಕಾಂಗ್ರೆಸ್‌ಗೆ ಪರ್ಯಾಯವಾಗಿ ಅತಿ  ಬಲಿಷ್ಟವಾಗಿ ಬೆಳೆಯುತ್ತಿದೆ ಎಂದು ತಿಳಿಸಿದರು. ಮಾಜಿ ಜಿಲ್ಲಾ ಅಧ್ಯಕ್ಷ ಅಣಬೇರು ಜೀವನಮೂರ್ತಿ, ಮುಖಂಡರಾದ ಎಚ್‌. ಎನ್‌. ಶಿವಕುಮಾರ್‌, ಎಚ್‌.ಎಸ್‌. ಲಿಂಗರಾಜ್‌. ಸಹನಾ ರವಿ, ಸಿ. ರಮೇಶ್‌ನಾಯ್ಕ, ಎನ್‌. ರಾಜಶೇಖರ್‌, ಸಂಕೋಳ್‌ ಚಂದ್ರಶೇಖರ್‌ ಇತರರು ಇದ್ದರು.  

Advertisement

Udayavani is now on Telegram. Click here to join our channel and stay updated with the latest news.

Next