Advertisement
ವರಿಷ್ಠರು ಪಾದಯಾತ್ರೆಗೆ ಸಮ್ಮತಿ ನೀಡಿರುವ ವಿಷಯವನ್ನು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದ್ದಾರೆ. ಪಾದಯಾತ್ರೆ ಬಗ್ಗೆ ನಾವು ದಿಲ್ಲಿ ನಾಯಕರ ಮುಂದೆ ಅಭಿಪ್ರಾಯ ಮಂಡಿಸಿದ್ದೆವು. ಅವರು ಒಪ್ಪಿಗೆ ನೀಡಿದ್ದಾರೆ. ಸದ್ಯದಲ್ಲೇ ಈ ಹೋರಾಟದ ಸ್ವರೂಪದ ಬಗ್ಗೆ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮಾಹಿತಿ ನೀಡುತ್ತಾರೆ ಎಂದರು.
Related Articles
ಇದು ಸಾಮಾನ್ಯ ಹಗರಣ ಅಲ್ಲ. ಇದನ್ನು ಸರಕಾರ ಬಹಳ ಲಘುವಾಗಿ ಪರಿಗಣಿಸಿದೆ. ಸರಕಾರದ ಹಣ ನೇರವಾಗಿ ಖಾತೆಗೆ ವರ್ಗಾಯಿಸಿಕೊಂಡು ನುಂಗಿದ್ದಾರೆ. ಸಚಿವರ ವಿರುದ್ಧವೇ ಆರೋಪ ಬಂದಿದೆ. ಹಣಕಾಸು ಇಲಾಖೆಯ ನಿರ್ಲಕ್ಷ್ಯದ ಬಗ್ಗೆ ಪ್ರಸ್ತಾವಿಸಲಾಗಿದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳುತ್ತಾರೆ? ಸಿದ್ದರಾಮಯ್ಯನವರ ಮೇಲೆ ಬಹಳ ಅಪವಾದ ಬಂದಿದೆ. ಹೀಗಾಗಿ ಅವರು ವಿಚಲಿತರಾಗಿದ್ದಾರೆ ಎಂದರು.
Advertisement
ಯತ್ನಾಳ್ ಬಣಕ್ಕೆ ಮೇಲುಗೈ?ಈ ಪಾದಯಾತ್ರೆಗೆ ವರಿಷ್ಠರು ಒಪ್ಪಿಗೆ ನೀಡಿರುವುದರಿಂದ ಬಸನಗೌಡ ಯತ್ನಾಳ್ ಬಣ ಪಕ್ಷದಲ್ಲಿ ಮೇಲುಗೈ ಸಾಧಿಸಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ. ಮುಡಾ ಪ್ರಕರಣದಲ್ಲಿ ಸಿಎಂ ರಾಜೀನಾಮೆಗೆ ಆಗ್ರಹಿಸಿ ವಿಜಯೇಂದ್ರ ಪಾದಯಾತ್ರೆ ಘೋಷಣೆ ಮಾಡುತ್ತಿದ್ದಂತೆ, ವಾಲ್ಮೀಕಿ ಅಭಿವೃದ್ಧಿ ನಿಗಮದ ಅವ್ಯವಹಾರದ ವಿರುದ್ಧ ಉತ್ತರ ಕರ್ನಾಟಕ ಭಾಗದಲ್ಲಿ ಪಾದಯಾತ್ರೆ ನಡೆಸುವಂತೆ ಯತ್ನಾಳ್ ಆಗ್ರಹಿಸಿದ್ದರು. ಆದರೆ ಆಗ ವರಿಷ್ಠರು ಒಪ್ಪಿರಲಿಲ್ಲ. ಯತ್ನಾಳ್ ಹಾಗೂ ರಮೇಶ್ ಜಾರಕಿಹೊಳಿ ಈ ಪಾದಯಾತ್ರೆಯಿಂದ ದೂರ ಉಳಿದಿದ್ದರು. ಈಗ ವರಿಷ್ಠರು ಯತ್ನಾಳ್ ಪ್ರಸ್ತಾವಕ್ಕೆ ಒಪ್ಪಿಗೆ ನೀಡಿದ್ದಾರೆ. ಎಲ್ಲಿಂದ ಪಾದಯಾತ್ರೆ?
ಪಾದಯಾತ್ರೆ ಎಲ್ಲಿಂದ ಪ್ರಾರಂ ಭಿಸಬೇಕೆಂಬುದು ಇನ್ನೂ ನಿರ್ಣಯವಾಗಿಲ್ಲ. ಚಿತ್ರದುರ್ಗ ದಿಂದ ಬಳ್ಳಾರಿ ಅಥವಾ ಯಾದಗಿರಿಯಿಂದ ಬಳ್ಳಾರಿಯ ವರೆಗೆ ಪಾದಯಾತ್ರೆ ನಡೆಸುವ ಸಾಧ್ಯತೆ ಇದೆ. ನವರಾತ್ರಿ ಬಳಿಕ ದಿನಾಂಕ ನಿಗದಿಯಾಗಲಿದೆ ಎಂದು ತಿಳಿದು ಬಂದಿದೆ.