Advertisement

ಸಮ್ಮಿಶ್ರ ಸರ್ಕಾರ ಬೀಳಿಸುವುದು ಬಿಜೆಪಿ ಹಗಲುಕನಸು

12:04 PM Sep 22, 2018 | Team Udayavani |

ಕೆ.ಆರ್‌.ನಗರ: ಲೋಕಸಭೆ ಚುನಾವಣೆ ಸಮೀಪಿಸುತ್ತಿರುವುದರಿಂದ ಸಮ್ಮಿಶ್ರ ಸರ್ಕಾರದ ಸಾಧನೆ ಸಹಿಸಲಾಗದೆ ಸರ್ಕಾರ ಬೀಳಲಿದೆ ಎಂದು ಬಿಜೆಪಿಯವರು ಹಗಲು ಕನಸು ಕಾಣುತ್ತಿದ್ದಾರೆ ಎಂದು ಪ್ರವಾಸೋದ್ಯಮ ಮತ್ತು ರೇಷ್ಮೆ ಸಚಿವ ಆರೋಪಿಸಿದರು. 

Advertisement

ಇಲ್ಲಿನ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಕೆ.ಆರ್‌.ನಗರ ಘಟಕದ ಸಾ.ರಾ.ಮಹೇಶ್‌ ಅಭಿಮಾನಿ ಬಳಗದ ಹಾಲಿ ಮತ್ತು ನಿವೃತ್ತ ಜೆಡಿಎಸ್‌ ಅಭಿಮಾನಿ ನೌಕರರರು ಸಚಿವ ಸಾ.ರಾ.ಮಹೇಶ್‌ ದಂಪತಿಗೆ ಆಯೋಜಿಸಿದ್ದ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಮುಖ್ಯಮಂತ್ರಿ ಕುಮಾರಸ್ವಾಮಿ ರೈತರ 50 ಸಾವಿರ ಕೋಟಿ ಸಾಲಮನ್ನಾ, ವೃದ್ಧರ 500 ಮಾಸಾಶನವನ್ನು 1000 ರೂ.ಗಳಿಗೆ ಏರಿಕೆ, ಬಡ್ಡಿದಂಧೆಗೆ ಕಡಿವಾಣ ಮಾಡಿರುವ ಜನಪ್ರಿಯ ಕೆಲಸಗಳನ್ನು ಬಿಂಬಿಸದೆ ಕೆಲ ಮಾಧ್ಯಮಗಳು ಸತ್ಯವನ್ನು ಮರೆ ಮಾಚುತ್ತಿವೆ ಎಂದು ಆರೋಪಿಸಿದರು. 

ಒಳ್ಳೆ ಕೆಲಸ ಕಾಣಲ್ಲ: ಕೊಡರು ನೆರೆ ಸಂತ್ರಸ್ತರಿಗೆ ತಲಾ 6 ಲಕ್ಷ ರೂ. ವೆಚ್ಚದಲ್ಲಿ ಮನೆ ನಿರ್ಮಿಸಿಕೊಡುತ್ತಿರುವುದು ದೇಶದಲ್ಲೇ ಮೊದಲು. ಮನೆ ಬಿದ್ದವರಿಗೆ ತಲಾ 1 ಲಕ್ಷ ನೀಡಲಾಗಿದೆ. ಜತೆಗೆ ಬೆಳೆ ಹಾನಿಯಲ್ಲದೆ ಮನೆ ವಸ್ತುಗಳನ್ನು ಕಳೆದುಕೊಂಡ 1156 ಕುಟುಂಬಗಳಿಗೆ ತಲಾ 50 ಸಾವಿರ ನೀಡಲಾಗಿದೆ. ಇವೆಲ್ಲಾ ಒಳ್ಳೆಯ ಕೆಲಸವಲ್ಲವೇ ಎಂದು ಪ್ರಶ್ನಿಸಿದ ಅವರು, ಕೇಂದ್ರದ ವಿಪತ್ತು ನಿಧಿಯಿಂದ ತಲಾ ಕೇವಲ 3 ಸಾವಿರ ಮಾತ್ರ  ಕೊಟ್ಟಿದೆ ಎಂದು ಟೀಕಿಸಿದರು. 

ತಾಲೂಕಿನ 40 ಹಳ್ಳಿಗಳ ಕೆರೆಗಳಿಗೆ ನೀರು ತುಂಬಿಸುವುದು, ಸಾಲಿಗ್ರಾಮದಲ್ಲಿ ಹೊಸ ಡಿಪೋ, ಕೆ.ಆರ್‌.ನಗರ  ಬಸ್‌ ಡಿಪೋ ನವೀಕರಣಕ್ಕೆ 2 ಕೋಟಿ, ಕೆ.ಆರ್‌.ನಗರ ಬಸ್‌ ನಿಲ್ದಾಣದ ಅಭಿವೃದ್ಧಿಗೆ 2 ಕೋಟಿ, ಮಿರ್ಲೆ, ಹೊಸೂರು ಮತ್ತು ಬೇರ್ಯ ಬಸ್‌ ನಿಲ್ದಾಣಗಳಿಗೆ ತಲಾ 1 ಕೋಟಿ ಮಂಜೂರಾತಿ ದೊರೆತಿದೆ. 25 ಕೋಟಿ ರೂ. ವೆಚ್ಚದಲ್ಲಿ ತಾಲೂಕಿನ ಎಲ್ಲಾ ರಸ್ತೆಗಳ ಡಾಂಬರೀಕರಣ ಡಾಂಬರೀಕರಣ ಕಾಮಗಾರಿ ಪ್ರಗತಿಯಲ್ಲಿದೆ ಎಂದರು. 

Advertisement

ಇದೇ ವೇಳೆ ಸಚಿವ ಸಾ.ರಾ.ಮಹೇಶ್‌ ದಂಪತಿಯನ್ನು ಸಾರಿಗೆ ಸಂಸ್ಥೆಯ ಸಾ.ರಾ.ಅಭಿಮಾನಿ ಬಳಗದಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು. ಸಮಾರಂಭದಲ್ಲಿ ಕರಾರಸಾ ನಿಗಮದ ಮೈಸೂರು ಗ್ರಾಮಾಂತರ ವಿಭಾಗದ ದಶರಥ್‌, ಗಿರೀಶ್‌, ಕೆ.ಆರ್‌.ನಗರ ಘಟಕ ವ್ಯವಸ್ಥಾಪಕ ಮಹೇಶ್‌, ಪುರಸಭಾಧ್ಯಕ್ಷೆ ಹರ್ಷಲತಾ, ಸದಸ್ಯರಾದ ಉಮೇಶ್‌, ಜಗದೀಶ್‌, ಮೈಮುಲ್‌ ಮಾಜಿ ಅಧ್ಯಕ್ಷ ಸೋಮಶೇಕರ್‌, ರಾಮರಾಜ್‌, ಲಕ್ಷ್ಮಣ್‌,ಶಿವಣ್ಣ, ಚಾಲಕ ಲ್ಯಾನ್ಸಿ ಫರ್ನಾಂಡಿಸ್‌, ಪ್ರಕಾಶ್‌ ಇತರರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next