Advertisement
ದ.ಕ. ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಂಗಳ ವಾರ ಆಯೋಜಿಸಲಾದ ಪಕ್ಷದ ಜಿಲ್ಲಾ ಪ್ರಮುಖರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮುಂದಿನ ಚುನಾವಣೆ ಕೇವಲ ರಾಜಕೀಯ ಪಕ್ಷಗಳ ಜಿದ್ದಾಜಿದ್ದಿ ಯಲ್ಲ. ಎರಡು ಸಂಸ್ಕೃತಿಗಳ ನಡುವಿನ ಹೋರಾಟ. ಹಣ, ಜಾತಿ ಮತ್ತು ಕೋಮು ತುಷ್ಟೀಕರಣದ ಆಧಾರದಲ್ಲಿಯೇ ರಾಜಕೀಯ ಮಾಡುವ ಕಾಂಗ್ರೆಸ್ ಮತ್ತು ಅಭಿ ವೃದ್ಧಿ ಯೊಂದನ್ನೇ ಮಂತ್ರವನ್ನಾಗಿಸಿಕೊಂಡ ಬಿಜೆಪಿ ಪಕ್ಷದ ನಡುವಿನ ಹೋರಾಟ ಆಗ ಲಿದೆ. ಅಪರಾಧದಲ್ಲಿ ರಾಜ್ಯ ಅಗ್ರಸ್ಥಾನ ದಲ್ಲಿರುವುದು ಸಿದ್ದರಾಮಯ್ಯ ಸರಕಾರದ ಸಾಧನೆ ಎಂದರು.
Related Articles
ಸಂಸದ ನಳಿನ್ ಕುಮಾರ್ ಕಟೀಲು ಮಾತ ನಾಡಿ, ಮಂಗಳೂರು ನಗರ ವ್ಯಾಪ್ತಿಯಲ್ಲಿಯೇ ಕೇವಲ 28 ದಿನಗಳಲ್ಲಿ 5 ಹತ್ಯೆಗಳಾಗಿವೆ. ಕಾಂಗ್ರೆಸ್ ಆಡಳಿತದ ವೇಳೆ ಜೈಲಿನಲ್ಲಿಯೇ ಡಬ್ಬಲ್ ಮರ್ಡರ್, ಗಲಭೆಗಳು ನಡೆದಿವೆ. ಡ್ರಗ್ಸ್ ಹಾಗೂ ಮರಳು ಮಾಫಿಯಾವೇ ಜಿಲ್ಲೆ ಯಲ್ಲಿ ಅಧಿಕವಾಗಿದೆ. ಜನರು ನೆಮ್ಮದಿಯಿಂದ ಬದುಕುವುದೇ ಕಷ್ಟವಾಗಿದೆ. ಕೆಲವೇ ತಿಂಗಳಿನಲ್ಲಿ ಎಲ್ಲ ದಕ್ಷ ಅಧಿಕಾರಿಗಳನ್ನು ವರ್ಗ ಮಾಡ ಲಾಗಿದೆ. ಇದು ಉಸ್ತುವಾರಿ ಹಾಗೂ ಇನ್ನೊಬ್ಬರು ಸಚಿವರು ಇರುವ ಜಿಲ್ಲೆಯ ಪರಿಸ್ಥಿತಿಗೆ ಹಿಡಿದ ಕೈಗನ್ನಡಿ ಎಂದು ಅವರು ಆರೋಪಿಸಿದರು. ಸಂಸದೆ ಶೋಭಾ ಕರಂದ್ಲಾಜೆ, ಶಾಸಕರಾದ ಎಸ್. ಅಂಗಾರ, ವಿ.ಪರಿಷತ್ ಸದಸ್ಯ ಗಣೇಶ್ ಕಾರ್ಣಿಕ್, ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು, ಮುಖಂಡರಾದ ಉದಯ್ ಕುಮಾರ್ ಶೆಟ್ಟಿ, ಮೋನಪ್ಪ ಭಂಡಾರಿ, ಪ್ರತಾಪ್ ಸಿಂಹ ನಾಯಕ್ ಉಪಸ್ಥಿತರಿದ್ದರು.
Advertisement
ಅನ್ನಭಾಗ್ಯ: ಮೋದಿ 28 ರೂ. ಸಿದ್ದರಾಮಯ್ಯ 3 ರೂ.!ರಾಜ್ಯ ಸರಕಾರ ಅನ್ನಭಾಗ್ಯ ಯೋಜನೆ ಯಡಿ ಅಕ್ಕಿ ನೀಡುತ್ತಿದ್ದು ಇದಕ್ಕೆ 28 ರೂ.ಗಳನ್ನು ಮೋದಿಯವರು ನೀಡುತ್ತಿದ್ದಾರೆ. ಉಳಿದ 3 ರೂ. ಮಾತ್ರ ಸಿದ್ದರಾಮಯ್ಯ ನೀಡುತ್ತಿದ್ದಾರೆ. ಹೀಗಾಗಿ ಇದು ಕಾಂಗ್ರೆಸ್‌ನ ಅನ್ನಭಾಗ್ಯವಲ್ಲ. ಮೋದಿ ಅನ್ನಭಾಗ್ಯ ಎಂದು ಪ್ರಕಾಶ್ ಜಾಬ್ಡೇಕರ್ ಹೇಳಿದರು. ಮಂಗಳೂರಿನಲ್ಲಿ ಸಚಿವರು ರೌಡಿ ಗಳೊಂದಿಗೆ ಓಡಾಡುತ್ತಿದ್ದಾರೆ. ಅಪರಾಧ ಹಿನ್ನೆಲೆಯವರು ಎನ್‌ಕೌಂಟರ್ ಆದರೆ ಆತನ ಕುಟುಂಬಕ್ಕೆ ಸರಕಾರ ಪರಿಹಾರ ನೀಡು ತ್ತಿದೆ. ಆದರೆ ಹಿಂದೂಗಳು ಸತ್ತಾಗ ಪರಿಹಾರ ನೀಡಲು ಸರಕಾರ ಮೀನ ಮೇಷ ಎಣಿಸುತ್ತಿದೆ. ಈ ಓಟ್‌ಬ್ಯಾಂಕ್ ರಾಜ ಕಾರಣವನ್ನು ವಿರೋ ಧಿಸ ಬೇಕು ಎಂದು ಅವರು ಹೇಳಿದರು. ಮೋದಿ-ಶಾ ಭಯದಿಂದ ಕಾಂಗ್ರೆಸ್ ಸಂಚು: ಶೋಭಾ
ಶೋಭಾ ಕರಂದ್ಲಾಜೆ ಮಾತನಾಡಿ, ಮಹಾ ದಾಯಿ ವಿಚಾರದಲ್ಲಿ ಜ. 27ಕ್ಕೆ ನಡೆಯ ಬೇಕಾಗಿದ್ದ ಕರ್ನಾಟಕ ಬಂದ್ ಅನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕರ್ನಾಟಕಕ್ಕೆ ಆಗಮಿಸುವ ದಿನವಾದ ಜ. 25ರಂದೇ ನಡೆಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕುಮ್ಮಕ್ಕು ನೀಡಿದ್ದಾರೆ. ಫೆ. 4ರಂದು ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಆಗಮಿಸುವ ವೇಳೆ ಬೆಂಗಳೂರು ಬಂದ್‌ಗೆ ಸಿದ್ದರಾಮಯ್ಯ ಸಂಚು ರೂಪಿಸಿದ್ದಾರೆ. ಈ ಮೂಲಕ ಕಾನೂನು ವ್ಯವಸ್ಥೆಯನ್ನೇ ದುರುಪಯೋಗ ನಡೆಸಲು ಮುಖ್ಯಮಂತ್ರಿ ಮುಂದಾಗಿದ್ದಾರೆ. ಮೋದಿ ಶಾ ಅವರ ಭಯದಿಂದ ಸಿದ್ದರಾಮಯ್ಯ ಹೀಗೆ ಮಾಡುತ್ತಿದ್ದು, ಇಂತಹ ತಂತ್ರಗಳಿಗೆ ಜನರು ಸರಿಯಾದ ಉತ್ತರ ನೀಡಲಿದ್ದಾರೆ ಎಂದರು. ಎಸ್‌ಪಿ ವರ್ಗಾವಣೆಗೆ ಬಿಜೆಪಿ ಆಕ್ರೋಶ
ಎಸ್‌ಪಿ ಸುಧೀರ್ ರೆಡ್ಡಿ ವರ್ಗಾವಣೆ ಸಂಬಂಧಿಸಿ ಬಿಜೆಪಿ ಮುಖಂಡರು ರಾಜ್ಯ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪ್ರಕಾಶ್ ಜಾಬ್ಡೇಕರ್ ಮಾತನಾಡಿ, ಅತ್ಯಂತ ದಕ್ಷ ಪೊಲೀಸ್ ಅಧಿಕಾರಿ, ಜಿಲ್ಲಾಧಿಕಾರಿಗಳನ್ನು ವರ್ಗಾವಣೆ ಮಾಡುವ ಮೂಲಕ ರಾಜ್ಯ ಸರಕಾರ ಅವರ ತಾಳಕ್ಕೆ ತಕ್ಕಂತೆ ಕುಣಿಸುವಂತೆ ಮಾಡಲಾಗುತ್ತಿದೆ. ಕಾಂಗ್ರೆಸ್ ಆಡಳಿತದಲ್ಲಿ ದ.ಕ. ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಪೊಲೀಸ್ ಆಯುಕ್ತರು ಸುಮಾರು 5-6 ಸಲ ವರ್ಗಾವಣೆಯಾಗಿದ್ದಾರೆ. ಇದು ಈ ಸರಕಾರದ ವರ್ಗಾವಣೆ ನೀತಿಯನ್ನು ತೋರಿಸುತ್ತದೆ ಎಂದರು. ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ದ.ಕ. ಹಾಗೂ ಉಡುಪಿ ಜಿಲ್ಲೆಯಲ್ಲಿ ಡಿಸಿ, ಎಸ್‌ಪಿ ಗಳು ಎಷ್ಟು ಜನ ಬಂದು ಹೋದರು ಎಂದೇ ಗೊತ್ತಾಗುವುದಿಲ್ಲ. ಅಧಿಕಾರಿಗಳ ಮುಖಪರಿಚಯ ಜನರಿಗೆ ಆಗುವ ಹೊತ್ತಿಗೆ ಅವರನ್ನು ವರ್ಗಾವಣೆ ಮಾಡಲಾಗುತ್ತದೆ ಎಂದು ದೂರಿದರು. ಸಂಸದ ನಳಿನ್ ಮಾತನಾಡಿ, 6 ತಿಂಗಳಿಗೊಮ್ಮೆ ಎಸ್‌ಪಿಗಳ ವರ್ಗಾವಣೆ ಮಾಡಲಾಗುತ್ತಿದೆ. ಆಡಳಿತದಾರರು ಹೇಳಿದ ಹಾಗೆ ಕೇಳದಿದ್ದರೆ ಅಧಿಕಾರಿಗಳನ್ನೇ ವರ್ಗ ಮಾಡುವ ಕೆಟ್ಟ ಪರಿಪಾಠ ದಕ್ಷಿಣ ಕನ್ನಡ ಜಿಲ್ಲೆಯಲ್ಲಿದೆ ಎಂದು ಹೇಳಿದರು.